ಭಟ್ಕಳ:ಸರಕಾರಿ ಪ್ರಥಮ  ದರ್ಜೆ  ಕಾಲೇಜಿನಲ್ಲಿ ಇನ್ನೂ ನೇಮಕವಾಗದ ಅಧ್ಯಾಪಕರು-ಪ್ರಾರಂಭವಾಗದ ತರಗತಿ-ಮನವಿ ಸಲ್ಲಿಕೆ

Source: varthabhavan | By Arshad Koppa | Published on 5th August 2017, 2:00 PM | Coastal News | Guest Editorial |

ಭಟ್ಕಳ: ಸರಕಾರಿ ಪ್ರಥಮ  ದರ್ಜೆ  ಕಾಲೇಜಿನ ವಿಧ್ಯಾರ್ಥಿಗಳು ಹಲವರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮುಖ್ಯವಾಗಿ 2017-18ನೇ ಸಾಲಿನ ಶೈಕ್ಷಣಿಕ ವರ್ಷವು ಜೂನ್ 15 ರಂದು ಪ್ರಾರಂಭವಾಗಿದ್ದು ಇಂದಿಗೆ ಸರಿ ಸುಮಾರು ಎರಡೂವರೆ ತಿಂಗಳು ಕಳೆದರೂ ತರಗತಿಗಳು ಅತಿಥಿ ಉಪನ್ಯಾಸಕರ ನೇಮಕವಾಗದೇ ತರಗತಿಗಳು ಆರಂಭವಾಗಿಲ್ಲ ಎಂದು ಎ.ಬಿ.ವಿ.ಪಿ. ವತಿಯಿಂದ ಸಹಾಯಕ ಕಮಿಷನರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. 
ಮನವಿಯಲ್ಲಿ ಕೇವಲ ಒಂದೂವರೆ ತಿಂಗಳಿನಲ್ಲಿ ಮೊದಲ ಸೆಮಿಸ್ಟರ್ ಪರೀಕ್ಷೆಯನ್ನು ನಾವು ಬರೆಯಬೇಕಾಗಿದ್ದರೂ ಇನ್ನೂ ಪಾಠವೇ ಆರಂಭವಾಗಿಲ್ಲ. ಭೋದಿಸಲು ಕಾಲೇಜಿನಲ್ಲಿ ಉಪನ್ಯಾಸಕರೇ ಇಲ್ಲವಾಗಿದೆ. ಜುಲೈ ತಿಂಗಳಿನಲ್ಲಿ ಆಯ್ಕೆ ನಡೆಸಿದ್ದ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಪಡಿಸಿದ ಸರಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳೀಗೆ ಅಘೋಷಿತ ರಜೆಯಂತಾಗಿದ್ದು ಭವಿಷ್ಯದ ಕುರಿತು ಚಿಂತೆ ಉಂಟಾಗಿದೆ, ಸರಕಾರದ ಈ ರೀತಿಯ ಧೋರಣೆಯನ್ನು ಬದಲಿಸಿ ತಕ್ಷಣ ಅತಿಥಿ ಉಪನ್ಯಾಸಕರುಗಳನ್ನು ನೇಮಿಸಬೇಕಿದೆ ಎಂದು ತಿಳಿಸಲಾಗಿದೆ. 


ಈ ಹಿಂದೆ 10-12 ವರ್ಷಗಳ ಅನುಭವವಿದ್ದ ಅತಿಥಿ ಉಪನ್ಯಾಸಕರುಗಳು ಭೋದನೆಯನ್ನು ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತಮವಾದ ಪಾಠವಾಗುತ್ತಿತ್ತು. ಆದರೆ ಸರಕಾರದ ಗೊಂದಲಮಯ ನಿರ್ಧಾರದಿಂದಾಗಿ ಎಲ್ಲಾ ಅನುಭವಿ ಉಪನ್ಯಾಸಕರನ್ನು ಹೊರತು ಪಡಿಸಿ ಹೊಸ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ 5 ವರ್ಷ ಅನುಭವವಿರುವ ಉಪನ್ಯಾಸಕರುಗಳನ್ನು ತೆಗೆದುಕೊಂಡಿರುವುದು ಕೂಡಾ ಸರಿಯಲ್ಲ. ಇಂದಿನ ತನಕವೂ ಕೂಡಾ ಸರಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲದೇ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ ಎಂದೂ ದೂರಿದ್ದಾರೆ. 
ಅತಿಥಿ ಉಪನ್ಯಾಸಕರನ್ನು ನೇಮಿಸುವ ಮೂಲಕ ಸರಕಾರಿ ಕಾಲೇಜುಗಳಲ್ಲಿ ತಕ್ಷಣದಿಂದ ತರಗತಿಗಳು ಪ್ರಾರಂಭವಾಗಬೇಕು. ನುರಿತ ಉಪನ್ಯಾಸಕರುಗಳನ್ನೇ ಅತಿಥಿ ಉಪನ್ಯಾಸಕರುಗಳನ್ನಾಗಿ ನೇಮಿಸಿಕೊಳ್ಳಬೇಕು ಎಂದೂ ಆಗ್ರಹಿಸಿದ ಎ.ಬಿ.ವಿ.ಪಿ. ಬೇಡಿಕೆಯನ್ನು ಈಡೇರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಬಹುದು ಎಂದೂ ಹೇಳಿದ್ದಾರೆ. 
ಸಹಾಯಕ ಕಮಿಷನರ್ ಅನುಪಸ್ಥಿತಿಯಲ್ಲಿ ಕಚೇರಿಯ ವ್ಯವಸ್ಥಾಪಕ ಎಲ್. ಎ. ಭಟ್ಟ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ತಾಲೂಕಾ ಪ್ರಮುಖ ದಿವಾಕರ ನಾಯ್ಕ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ತಾಲೂಕಾ ಸಂಘಟನಾ ಕಾರ್ಯದರ್ಶಿ ಲೋಕೇಶ ದೇವಾಡಿಗ, ಪುರಂದರ ನಾಯ್ಕ, ಅರುಣ ನಾಯ್ಕ, ಪ್ರಸನ್ನ ನಾಯ್ಕ, ವಿವೇಕ ದೇವಾಡಿಗ, ನಾಗರಾಜ ನಾಯ್ಕ, ತಿಲಕ ನಾಯ್ಕ ಸೇರಿದಂತೆ ಕಾರ್ಯಕರ್ತರು, ಪದಾಧಿಕಾರಿಗಳು  ಉಪಸ್ಥಿತರಿದ್ದರು. 

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...