ಭಟ್ಕಳದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಸ್ಥಗಿತ; ಶಾಲಾ ಕಾಲೇಜುಗಳಿಗೆ ರಜೆ

Source: sonews | By sub editor | Published on 10th September 2018, 5:32 PM | Coastal News | Don't Miss |

ಭಟ್ಕಳ: ಭಾರತ್ ಬಂದ್ ಕರೆಗೆ ಭಟ್ಕಳದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಶಾಂತಿಯುತವಾಗಿತ್ತು. ಇಲ್ಲಿನ ತಂಝೀಮ್ ಸಂಸ್ಥೆಯು ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಒಂದು ಸಮುದಾಯದ ಎಲ್ಲ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಜೆ.ಡಿ.ಎಸ್. ಕಾಂಗ್ರೇಸ್ ಹಾಗೂ ವಿವಿಧ ಸಂಘಟನೆಗಳು ಬಂದ್ ಗೆ ಬೆಂಬಲಿಸಿದ್ದವು.

ಹೆದ್ದಾರಿ ಬದಿ ಹಾಗೂ ಶಮ್ಸುದ್ದೀನ್ ವೃತ್ತದಲ್ಲಿ ಒಂದೆರಡು ಅಂಗಡಿಗಳು ತೆರೆದುಕೊಂಡಿದ್ದು, ಸಾರಿಗೆ ಸಂಪೂರ್ಣ ಸ್ಥಗಿತಗೊಂಡಿತ್ತು ಸ್ಥಳಿಯ ಕೆಲ ಆಟೋ ಚಾಲಕರು ತಮ್ಮ ಆಟೋ ರಿಕ್ಷಾವನ್ನು ರಸ್ತೆಗಿಳಿಸಿದ್ದು ಅದರಲ್ಲಿ ಪ್ರಯಾಣಿಕರು ಸಿಗದೆ ಪರದಾಡುತ್ತಿದ್ದರು. 
ತರಕಾರಿ, ಮೀನು ಮಾರಟಗಾರರು ಎಂದಿನಂತೆ ತಮ್ಮ ವ್ಯಾಪಾರವಹಿವಾಟು ನಡೆಸಲು ಪಟ್ಟಣಕ್ಕೆ ಬಂದಿದ್ದರೂ ಕೊಂಡುಕೊಳ್ಳುವವರಿಲ್ಲದೆ ಗ್ರಾಹಕರಿಗಾಗಿ ಕಾದುಕುಳಿತುಕೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು. 
 

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...