ಭಟ್ಕಳ:ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ 

Source: so news | By MV Bhatkal | Published on 17th June 2018, 6:38 PM | Coastal News |

ಭಟ್ಕಳ: ಮುರುಡೇಶ್ವರ ಲಯನ್ಸ್ ಕ್ಲಬ್ ಕಳೆದ 10 ವರ್ಷಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದು ಕೇವಲ ಹತ್ತೇ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕೂಡಾ ಗುರುತಿಸಿಕೊಳ್ಳುವಲ್ಲಿ ಯಶಸ್ವೀಯಾಗಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಶಾಯೀಸ್ ಲಾವಂಡೆ ಹೇಳಿದರು. 
ಅವರು ಮುರುಡೇಶ್ವರದ ಆರ್, ಎನ್, ಎಸ್, ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ  ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಿದ್ದರು. 
ಕಳೆದ ಸಾಲಿನಲ್ಲಿ ಲಯನ್ಸ್ ಕ್ಲಬ್ ಮಾಡಿದ ಉತ್ತಮ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು, ವಯಕ್ತಿ ಪ್ರಶಂಸನಾ ಪತ್ರಗಳನ್ನು ಕೂಡಾ ಇದೇ ಸಂದರ್ಭದಲ್ಲಿ ಪ್ರಧಾನ ಮಾಡಿದ ಜಿಲ್ಲಾ ಗವರ್ನರ್ ಹೊಸದಾಗಿ 17 ಸದಸ್ಯರುಗಳಿಗೆ ಲಯನ್ಸ್ ಧೀಕ್ಷೆಯನ್ನು ಬೋಧಿಸುವ ಮೂಲಕ ನೂತನ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಶುಭ ಹಾರೈಸಿದರು. 
ಮುರುಡೇಶ್ವರ ಲಯನ್ಸ್ ಕ್ಲಬ್ 2018-2019ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಗರಾಜ ಭಟ್, ಕಾರ್ಯದರ್ಶಿಗಳಾಗಿ ನಾಗೇಶ ಮಡಿವಾಳ ಹಾಗೂ ಕೋಶಾಧ್ಯಕ್ಷರಾಗಿ ಜಗದೀಶ ಜೈನ್, ಪ್ರಥಮ ಉಪಾಧ್ಯಕ್ಷರಾಗಿ ಗೌರೀಶ ನಾಯಕ, ದ್ವಿತೀಯ ಉಪಾಧ್ಯಕ್ಷರಾಗಿ ಬಾಬು ಮೊಗೇರ, ಸಹ ಕಾರ್ಯದರ್ಶಿಗಳಾಗಿ ಎಮ್. ವಿ. ಹೆಗಡೆ, ಸದಸ್ಯತ್ವ ಅಭಿಯಾನ ಸಮಿತಿಯ ಅಧ್ಯಕ್ಷರಾಗಿ ಸುಬ್ರಾಯ ನಾಯ್ಕ, ಕ್ಲಬ್ ಸಮನ್ವಯಾಧಿಕಾರಿಯಾಗಿ ಡಾ. ವಾದಿರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಆನಂದ ಶೆಟ್ಟಿ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಮಂಜುನಾಥ ದೇವಡಿಗ, ಲಯನ್ ಟೇಮರ್ ಆಗಿ ಗಜಾನನ ಶೆಟ್ಟಿ, ಟೇಲ್ ಟ್ವಿಸ್ಟರ್ ಮುಖ್ಯಸ್ಥರಾಗಿ ಕೆ.ಬಿ. ಹೆಗಡೆ, ನಿರ್ದೇಶಕರುಗಳಾಗಿ ಕಿರಣ ಮಾನಕಾಮೆ, ಡಾ. ರಾಜಗೋಪಾಲ ಭಟ್, ಡಾ. ಸುನೀಲ್ ಜತನ್, ವಿಶ್ವನಾಥ ಕಾಮತ, ಶಿವಾನಂದ ದೈಮನೆ, ಫಿಲಿಪ್ ಅಲ್ಮೇಡಾ, ಡಾ. ಹರಿಪ್ರಸಾದ ಕಿಣಿ, ಸುರೇಶ ನಾಯ್ಕ, ರಾಮದಾಸ ಶೇಟ್,  ಭಾಸ್ಕರ ಶೆಟ್ಟಿ, ಡಾ. ಮಂಜುನಾಥ ಶೆಟ್ಟಿ, ಎಸ್.ಎಸ್. ಕಾಮತ, ನಾಗರಾಜ ಕಾಮತ, ದಯಾನಂದ ಮೆಣಸಿನಮನೆ, ಮೋಹನ ನಾಯ್ಕ, ತಿಲಕ್ ರಾವ್, ಸಿ. ಆರ್.ನಾಯ್ಕ, ಡಾ. ವಿಶ್ವನಾಥ ನಾಯಕ ಅವರನ್ನು ನಿಯುಕ್ತಿಗೊಳಿಸಿದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀಕುಮಾರ್ ಟ್ರಾವೆಲ್ಸ್‍ನ ಮಾಲಿಕ ವೆಂಕಟರಮಣ ಹೆಗಡೆ, ಲಯನ್ ಬಿಂದಗಿ ಉಪಸ್ಥಿತರಿದ್ದು ಮಾತನಾಡಿದರು. 
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ನೂತನ ಅಧ್ಯಕ್ಷ ನಾಗರಾಜ ಭಟ್ಟ ಪ್ರಸ್ತುತ ವರ್ಷದಲ್ಲಿ ಲಯನ್ಸ್ ಸದಸ್ಯರ ಸಂಖ್ಯೆಯನ್ನು ಐವತ್ತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದು ಅದನ್ನು ತಲುಪಲು ಯೋಜನೆ ಹಾಕಿಕೊಂಡಿದ್ದೇನೆ.  ಹಲವಾರು ಸಾಮಾಜಿಕ ಕಾರ್ಯಗಳನ್ನು ಹಾಕಿಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಲು ತಾವು ತಯಾರಿರುವುದಾಗಿ ತಿಳಿಸಿದರು. 
ನೂತನ ಕಾರ್ಯದರ್ಶಿ ನಾಗೇಶ ಮಡಿವಾಳ ಮುರುಡೇಶ್ವರ ಲಯನ್ಸ್ ಕ್ಲಬ್ ಈ ವರ್ಷದ ಯೋಜನೆಗಳಲ್ಲಿ ಶಿಕ್ಷಣ, ಹಸಿವು ನಿವಾರಣೆ, ಶಾಶ್ವತ ಕಟ್ಟಡ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮ, ವೈದ್ಯಕೀಯ ಶಿಬಿರಗಳು, ಸಮಾಜಕ್ಕೆ ಶಾಶ್ವತ ಕೊಡುಗೆಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು ಈ ಹಿಂದಿನಂತೆಯೇ ಯಶಸ್ವೀ ಕಾರ್ಯಕ್ರಮಗಳನ್ನು ಮಾಡಲು ತೀರ್ಮಾನಿಸಿದೆ ಎಂದರು.  
ತಾಲೂಕಿನಗೆ ಪಿ.ಯು.ಸಿ.ಯಲ್ಲಿ ಪ್ರಥಮ ಬಂದ ಸೌಂದರ್ಯಾ ನಾಯಕ, ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಬಂದ ಕೆ. ಕೆ. ಅನನ್ಯ ಹಾಗೂ ಲಯನ್ಸ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಲಾಯಿತು. 
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ಫಿಲಿಪ್ ಅಲ್ಮೇಡಾ, ಖಜಾಂಚಿ ಶಿವಾನಂದ ದೈಮನೆ ಉಪಸ್ಥಿತರಿದ್ದರು. ನೂತನ ಖಜಾಂಚಿ ಜಗದೀಶ ಜೈನ್ ವಂದಿಸಿದರು.  

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...