ಪ್ರಮೋದ ಹೆಗಡೆ ಗೆ  'ಶ್ರೇಷ್ಠ ಸಹಕಾರಿ"ಪ್ರಶಸ್ತಿ

Source: sonews | By sub editor | Published on 9th September 2018, 11:01 PM | Coastal News |

ಯಲ್ಲಾಪುರ:ಇಲ್ಲಿಯ ಯು.ಕೆ. ಕೋಆಪ್ ಸೇವಾ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಪ್ರಮೋದ ಹೆಗಡೆಯವರಿಗೆ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಸಂಘಟನೆಯ ಒಕ್ಕೂಟದವರು 'ಶ್ರೇಷ್ಠ ಸಹಕಾರಿ"ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಸೇ. 7 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.1983 ರಲ್ಲಿ ರಾಜ್ಯದ ಅತ್ಯುತ್ತಮ ಸಹಕಾರಿ ಎಂದು ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾದ ಪ್ರಮೋದ ಹೆಗಡೆಯವರಿಗೆ ಪ್ರಶಸ್ತಿ ಲಭಿಸಿತ್ತು, ಅಂದು ದಿ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. ಜಾಲಪ್ಪನವರು ಸಹಕಾರಿ ಸಚಿವರಾಗಿದ್ದರು.

ಆರು ವರ್ಷ ಪಿಎಲ್‌ಡಿ ಬ್ಯಾಂಕಿನ ಅಧ್ಯಕ್ಷರಾಗಿ, 16 ವರ್ಷ ನಿರ್ದೇಶಕರಾಗಿ, ಮೂರು ವರ್ಷ ರಾಷ್ಟ್ರೀಯ ಸರ್ಕಾರಿ ಕಾಲೇಜಿನ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಪ್ರಮೋದ ಹೆಗಡೆಯವರಿಗೆ ಇದೆ. ಈಗ ಯೂಕೆ ಸೌಹಾರ್ದ ಸಹಕಾರಿಯ ಅಧ್ಯಕ್ಷರಾಗಿ ಕಳೆದ 18 ವರ್ಷಗಳಿಂದ ಪ್ರಮೋದ ಕೆಲಸ ಮಾಡುತ್ತಿದ್ದಾರೆ.

ಎಲ್ಲ ಪ್ರಶಸ್ತಿಗಳ ಹಿಂದೆ ಯುಕೆ ಸೌಹಾರ್ದ ಸಹಕಾರಿಯ ಸದಸ್ಯರು, ಸಾತ್ವಿಕ ಗ್ರಾಹಕರು, ಪೂರಕ ಸಹಕಾರ ನೀಡುವ ಸಲಹಾ ಮಂಡಳಿ, ಪೂರ್ಣಾವಧಿಯ ಸಲಹೆಗಾರ ಪಿ.ಜಿ ಹೆಗಡೆ, ಆಡಿಟರ್ ಎಸ್ ಜಿ ಹೆಗಡೆ, ಆಂತರಿಕ ಅಡಿಟರ್ ವಿಘ್ನೇಶ್ವರ ಗಾಂವ್ಕರ, ಬ್ಯಾಂಕಿನ ತಪಾಸಣೆಗೆ ನಿಯುಕ್ತರಾದ ಕೆಡಿಸಿಸಿ ಬ್ಯಾಂಕ್ ಮಾಜಿ ಎಂ.ಡಿ ಪ್ರಕಾಶ ಮದ್ಗುಣಿ, ಬ್ಯಾಂಕಿನ ವಸೂಲಾತಿಗೆ ನೀಯುಕ್ತಿಗೊಂಡ ಮಾಜಿ ಸಹಕಾರಿ ಎಸ್.ಎನ್.ಗಾಂವ್ಕರ, ಯುಕೆ ಸೌಹಾರ್ದ ಬ್ಯಾಂಕಿನಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ವ್ಯವಸ್ಥಾಪಕ ಕಿರಣ್ ಹಾಗೂ ಸಿಬ್ಬಂದಿಗಳು,

ಪ್ರಮುಖವಾಗಿ ಕಾಲಕಾಲಕ್ಕೆ ಮಾರ್ಗದರ್ಶನ ಸರಕಾರ ನೀಡುತ್ತಿರುವ ಸಹಕಾರಿ ಕ್ಷೇತ್ರದ ಹಿರಿಯರಾದ ಎನ್.ಪಿ ಗಾಂವ್ಕರ ಹಾಗೂ ಎಸ್ ಪಿ ಶೆಟ್ಟರ ಇವರಿಗೆ ಪ್ರಶಸ್ತಿ ಲಭಿಸಲು‌ ಕಾರಣರಾಗಿದ್ದಾರೆ. ಅವರಿಗೆ ಅನಂತ ಕೃತಜ್ಞತೆಗಳನ್ನು ಪ್ರಮೋದ ಹೆಗಡೆ ಮಾಧ್ಯಮದ ಮೂಲಕ ಸಲ್ಲಿಸಿದ್ದಾರೆ.

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...