ಬೆಂಗಳೂರು:ಯಮೆನ್‍ನ ನಾಲ್ಕು ವರ್ಷದ ಮಗು ಅಂಧ ಆಗುವುದನ್ನು ತಪ್ಪಿಸಿದ ಸಂಕೀರ್ಣ ನೇತ್ರ ಶಸ್ತ್ರಚಿಕಿತ್ಸೆ

Source: so english | By Arshad Koppa | Published on 12th October 2017, 8:25 AM | State News |

ಬೆಂಗಳೂರು, ಅಕ್ಟೊಬರ್ 11, 2017: ವಿಶ್ವ ದೃಷ್ಟಿ ದಿನವನ್ನು ಆಚರಿಸಲು ಒಬ್ಬರಿಗೆ ದೃಷ್ಟಿ ನೀಡುವುದಕ್ಕಿಂತಲೂ ಅತ್ಯುತ್ತಮ ಮಾರ್ಗ ಯಾವುದಿದೆ? ಇದನ್ನೇ ಡಾ.ಅಗರವಾಲ್ ಐ ಹಾಸ್ಪಿಟಲ್‍ನ ವೈದ್ಯರು ಮಾಡಿದ್ದಾರೆ. ಯೆಮೆನ್ ಮೂಲದ ನಾಲ್ಕು ವರ್ಷದ ಮಗು ಲಾರಾ ವಲೀದ್‍ಗೆ ದೃಷ್ಟಿಯ ಸೌಭಾಗ್ಯವನ್ನು ವೈದ್ಯರು ನೀಡಿದ್ದಾರೆ. ಲಾರಾ ವಲೀದ್ ಯೆಮೆನ್‍ನಿಂದ ಬಂದಿದ್ದು, ಈ ಮಗು ಅಪರೂಪ ಎನ್ನಬಹುದಾದ ನೇತ್ರ ಸಮಸ್ಯೆ ಕಾರ್ನಿಯೊ ಲೆಂಟಿಕುಲರ್ ಅಡೆಸನ್ ಸಿಂಡ್ರೋಮ್‍ನಿಂದ ಬಳಲುತ್ತಿದ್ದರು.

ಕಾರ್ನಿಯೊ ಲೆಂಟಿಕುಲರ್ ಅಡೆಸನ್ ಸಿಂಡ್ರೋಮ್ ಎಂಬುದು ಕಣ್ಣಿನ ಕಾರ್ನಿಯಾ ಐರಿಸ್ ಮತ್ತು ಮಸೂರದ ನಡುವೆ ಇರುವ ಜೋಡಣೆಯಾಗಿದೆ. ಇದು, ದೃಷ್ಟಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಒಂದು ವೇಳೆ ಚಿಕಿತ್ಸೆ ನೀಡದೇ ಬಿಟ್ಟಿದ್ದರೆ ಅಂಧತ್ವ ಬರುವ ಸಾಧ್ಯತೆಯಿತ್ತು. ಲಾರಾ ವಾಲೀದ್ ವಿಷಯದಲ್ಲಿ ಈ ಮಗು ಹುಟ್ಟಿನಿಂದಲೇ ಈ ಸಮಸ್ಯೆಯಿಂದ ಬಳಲುತ್ತಿತ್ತು. ಅವರ ಸ್ಥಿತಿಯು ಕಾರ್ನಿಯಾ ಮತ್ತು ಐರಿಸ್ ನಡುವೆ ಮಸೂರ ಅಡ್ಡಬಂದಿದ್ದು, ದೃಷ್ಟಿಗೆ ಅಡ್ಡಿಯಾಗುತ್ತಿತ್ತು. ಈ ಸಿಂಡ್ರೊಮ್‍ನಿಂದಾಗಿ ಮಗುವು ಎರಡನೇ ಹಂತದ ಗ್ಲಾಕೋಮಾದಿಂದ ಕೂಡಾ ಬಳಲುತ್ತಿತ್ತು.

ಇದೊಂದು ಅಪರೂಪದ ಸಮಸ್ಯೆಯಾಗಿದ್ದು, ಪೋಷಕರು ಮೊದಲು ಮಗುವನ್ನು ಈಜಿಪ್ಟ್‍ಗೆ ಒಯ್ದಿದ್ದರು. ಒಂದೂವರೆ ವರ್ಷವಿದ್ದಾಗಲೆ ಮಗುವಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸಕರು ಗ್ಲಾಕೊಮಾ ಸರಿಪಡಿಸಲು ಯಶಸ್ವಿಯಾಗಿದ್ದರೂ, ಮಗುವಿನ ದೃಷ್ಟಿ ಪೂರ್ಣ ಸರಿಹೋಗಿರಲಿಲ್ಲ. ಚಿಕಿತ್ಸೆ ನಡೆದು ಎರಡು ವರ್ಷಗಳ ಬಳಿಕ ಲಾರಾ ಸ್ಥಿತಿ ಇನ್ನಷ್ಟು ಗಂಭೀರವಾಗತೊಡಗಿತ್ತು. ಮಗು ಏನನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ವೈದ್ಯರು, ಮಗುವಿಗೆ ಚಿಕಿತ್ಸೆ ಕೈಬಿಡಬೇಕು. ಇನ್ನಷ್ಟು ಚಿಕಿತ್ಸೆ ಉಂಟಾದರೆ ಆಕೆಗೆ ಬಲಕಣ್ಣು ಕುಗ್ಗಬಹುದು ಎಂದು ಎಚ್ಚರಿಸಿದ್ದರು.

ಆದರೆ, ಕುಟುಂಬ ಸದಸ್ಯರು ಭರವಸೆ ಕೈಬಿಡಲಿಲ್ಲ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಾಗಿ ಹುಡುಕಾಟ ನಡೆಸಿದ್ದರು. ಇದು ಪೋಷಕರನ್ನು ಬೆಂಗಳೂರಿನ ಡಾ. ಅಗರವಾಲ್ ಐ ಹಾಸ್ಪಿಟಲ್‍ಗೆ ಕರೆತರಲು ಕಾರಣವಾಗಿತ್ತು. ಆಸ್ಪತ್ರೆಗೆ ಬಂದಾಗ ಮಗುವಿನ ಕನಿಷ್ಠ ದೃಷ್ಟಿ ಇತ್ತು. ಡಾ. ಅಗರವಾಲ್ ಐ ಹಾಸ್ಪಿಟಲ್‍ನ ಡಾ. ಬಿಂದಿಯಾ ಹಪ್ಪಣಿ, ಕ್ಯಾಟರಾಕ್ಟ್ ಸರ್ಜನ್ ಮತ್ತು ರೆಟಿನಾ ತಜ್ಞರು ಮತ್ತು ಅವರ ತಂಡವು ಪೂರ್ಣ ತಪಾಸಣೆಯನ್ನು ನಡೆಸಿದ ಮೇಲೆ ಮಗುವು ಕೇವಲ ಕಾರ್ನಿಯೊ ಲೆಂಟಿಕುಲರ್ ಅಡೆಸನ್ ಸಿಂಡ್ರೊಮ್‍ನಿಂದ ಬಳಲುತ್ತಿಲ್ಲ, ಜೊತೆಗೆ ಮೆಂಬ್ರೆನ್‍ನಿಂದಲೂ (ಐರಿಸ್ ಮೇಲೆ ಕಣ್ಣಿನಲಿರುವ ಪಪ್ಪಿಲರಿ ಪದರದ ಒಂದು ಚೂರು ಕುಳಿತಿರುವುದು) ಬಳಲುತ್ತಿದ್ದು ಕಂಡುಬಂತು. ಇದೊಂದು, ಗಂಭೀರ ಕ್ಲಿಷ್ಟಕರವಾದ ಸಮಸ್ಯೆಯಾಗಿದ್ದರೂ, ಪರಿಸ್ಥಿತಿ ಇನ್ನಷ್ಟು ವಿಷಮವಾಗುತ್ತಾ ಬಂದಿತು. ಡಾ.ಬಿಂದಿಯಾ ಮತ್ತು ತಂಡವು ಈ ಪ್ರಕರಣವನ್ನು ಸವಾಲಾಗಿ ತೆಗೆದುಕೊಳ್ಳಲು

ನಿರ್ಧರಿಸಿತು. ಮಗುವಿಗೆ ಸಂಕೀರ್ಣವಾದ ನೇತ್ರ ಶಸ್ತ್ರಚಿಕಿತ್ಸೆಯ್ನು ಕೈಗೊಂಡಿತು. ನಾಲ್ಕು ಗಂಟೆ ಕಾಲ ಮಗುವಿಗೆ ಚಿಕಿತ್ಸೆ ನಡೆಯಿತು. ಬಳಿಕ ಈಕೆ ವಸ್ತುಗಳನ್ನು ಗುರುತಿಸಲು ಆರಂಭಿಸಿತು.

ಚಿಕಿತ್ಸೆಯ ಸ್ವರೂಪ ವಿವರಿಸಿದ ಡಾ. ಅಗರವಾಲ್ ಐ ಹಾಸ್ಪಿಟಲ್‍ನ ಕ್ಯಾಟರಾಕ್ಟ್ ಸರ್ಜನ್ ಮತ್ತು ಮೆಡಿಕಲ್ ರೆಟಿನಾ ತಜ್ಞೆಯಾದ ಡಾ. ಬಿಂದಿಯಾ ಹಪ್ಪಣಿ ಅವರು, `’ಕಾರ್ನಿಯೊ ಲೆಂಟಿಕುಲರ್ ಅಡೆಸನ್ ಸಿಂಡ್ರೊಮ್‍ಗೆ ಚಿಕಿತ್ಸೆ ನೀಡುವುದರ ಜೊತೆಗೆ ನಮಗಿದ್ದ ದೊಡ್ಡ ಸವಾಲು ಲಾರಾ ಅವರ ಬಲಗಣ್ಣು ಕುಗ್ಗುತ್ತಾ ಹೋಗುತ್ತಿದ್ದುದು. ಮುಂದುವರಿದು, ಮಗುವಾಗಿದ್ದು, ಆಕೆಯ ಕಣ್ಣಿನ ಒಳಪದರ ಶಿಥಿಲವಾಗುತ್ತಿತ್ತು. ಚಿಕಿತ್ಸೆಯನ್ನು ಬಹುಹಂತದ ಚಿಕಿತ್ಸೆ ಎನ್ನಲಾಗಿದ್ದು, ಸಣ್ಣ ಚೂರು ಪದರಗಳು ಹೆಚ್ಚಿನ ಸಮಸ್ಯೆಗೆ ಕಾರಣವಾಗಿದ್ದವು. ಮೊದಲು ಈ ಪಪ್ಪಿಲರಿ ಮೆಂಬ್ರೆನ್ ಎನ್ನಲಾದ ತೊಡಕು ನಿವಾರಿಸಲಾಯಿತು. ಬಳಿಕ ನಾವು ಸಿಲಿಲರಿ ಚಿಕಿತ್ಸೆ ನಡೆಸಿದವು. ಬಳಿಕ ಆಕೆಗೆ ದೃಷ್ಟಿ ಮರಳಿತು ಎಂದು ತಿಳಿಸಿದರು.

ಸಂತಸ ಹಂಚಿಕೊಂಡ ಮಗುವಿನ ತಂದೆ ವಾಲೀದ್, ಕಳೆದ ನಾಲ್ಕು ವರ್ಷ ಕಾಲ ನಾನು ಭ್ರಮನಿರಸನಗೊಂಡಿದ್ದೆ. ಮಾನಸಿಕವಾಗಿ ಕುಗ್ಗಿಹೋಗಿದ್ದೆವು. ಡಾ.ಅಗರವಾಲ್ ಐ ಹಾಸ್ಪಿಟಲ್‍ಗೆ ಭೇಟಿ ನೀಡುವವರೆಗೆ ಪೂರ್ಣ ಭರವಸೆಯನ್ನು ಕಳೆದುಕೊಂಡಿದ್ದೆವು. ಮಗಳಿಗೆ ದೃಷ್ಟಿಯನ್ನಷ್ಟೇ ಅಲ್ಲ; ಮತ್ತೆ ಖುಷಿಯ ದಿನಗಳನ್ನು ಕೊಟ್ಟಿದ್ದಕ್ಕಾಗಿ ನಾನು ವೈದ್ಯರಿಗೆ ಕೃತಜ್ಞನಾಗಿದ್ದೇನೆ ಎಂದರು.

ನಾಲ್ಕು ವರ್ಷ ವಯಸ್ಸಿನ ಲಾರಾ ಅವರಿಗೆ ಇದು ಸವಾಲಾಗಿತ್ತು. ಹೇಗೆ ಸಂಕೀರ್ಣ ಸಮಸ್ಯೆ ಸರಿಪಡಿಸ ಬಹುದು, ಗಡಿಯ ಮಿತಿಯನ್ನು ಮೀರಿ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಈ ಪ್ರಕರಣ ನಿದರ್ಶನವಾಯಿತು.

ಲಾರಾಗೆ ದೃಷ್ಟಿ ಮರಳಿದ ಶಸ್ತ್ರ ಚಿಕಿತ್ಸೆಯೊಂದಿಗೆ ಡಾ. ಅಗರವಾಲ್ ಐ ಹಾಸ್ಪಿಟಲ್ ವಿಶ್ವ ದೃಷ್ಟಿದಿನ ಅಭಿಯಾನವನ್ನು ಆರಂಭಿಸಿತು. ಈ ವಿಶೇóಷ ಕ್ರಮದ ಮೂಲಕ ದೃಷ್ಟಿಯ ಮಹತ್ವ, ತಡೆಯಬಹುದಾದ ಅಂಧತ್ವ ಕುರಿತಂತೆ ಜಾಗೃತಿ ನಡೆಯಿತು. ಅಭಿಯಾನದಡಿ ಡಾ.ಅಗರವಾಲ್ ಐ ಹಾಸ್ಪಿಟಲ್ ಉಚಿತ ನೇತ್ರ ಚಿಕಿತ್ಸಾ ಅಭಿಯಾನ ಬೆಂಗಳೂರಿನ ತನ್ನ ಎಲ್ಲ ಕೇಂದ್ರಗಳಲ್ಲಿ ನಡೆಯಲಿದೆ. ಅಕ್ಟೋಬರ್ 13ರವರೆಗೆ ಶಿಬಿರ ನಡೆಯಲಿದೆ.

ಡಾ.ಅಗರವಾಲ್ ಐ ಹಾಸ್ಪಿಟಲ್ ಕುರಿತು:

ಡಾ. ಅಗರವಾಲ್ ಐ ಹಾಸ್ಪಿಟಲ್ ಒಂದು ಸಮಗ್ರ ನೇತ್ರ ತಪಾಸಣಾ, ಚಿಕಿತ್ಸಾ ಕೇಂದ್ರವಾಗಿದ್ದು, ಎಲ್ಲ ರೀತಿಯ ಕಣ್ಣಿನ ಸಮಸ್ಯೆಗಳಿಗೆ ಒಂದೇ ಕಡೆ ಚಿಕಿತ್ಸೆಯನ್ನು ಒದಗಿಸಲಿದೆ. 1957ರಲ್ಲಿ ಆರಂಭವಾಗಿದೆ. ಆಸ್ಪತ್ರೆಯು 57ನೇ ವರ್ಷದಲ್ಲಿ ಮುಂದುವರಿದಿದ್ದು, ನೇತ್ರ ಸಮಸ್ಯೆಗೆ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುತ್ತಿದೆ. ಚೆನ್ನೈನಲ್ಲಿ 15 ಶಾಖೆಗಳಿದ್ದು, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಅಂಡಮಾನ್, ರಾಜಸ್ತಾನದಲ್ಲಿ ಅಸ್ತಿತ್ವ ಹೊಂದಿದೆ. ಅಲ್ಲದೆ, ಮಾರಿಷಸ್‍ನಲ್ಲಿ ಕೇಂದ್ರ ತೆರೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನ ಅಸ್ತಿತ್ವ ವಿಸ್ತರಿಸಿದೆ. ಒಟ್ಟು 13 ಶಾಖೆಗಳಿದ್ದು ಭಾರತ, ಆಫ್ರೀಕನ್ ಮತ್ತು ಈಸ್ಟ್ ಏಷಿಯಾ ವಲಯzಲ್ಲಿ ಶಾಖೆಗಳನ್ನು ಹೊಂದಿದೆ.

ಈ ಹಾಸ್ಪಿಟಲ್‍ಗೆ ಅನೇಕ ಪ್ರಶಸ್ತಿಗಳು ಬಂದಿವೆ ಮಾರ್ಚ್ 2006ರಲ್ಲಿ ಲೇಟ್ ಡಾ. ಜೆ. ಅಗರವಾಲ್, ಸ್ಥಾಪಕ ಅಧ್ಯಕ್ಷರು ಇವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಅಂದಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಪ್ರದಾನ ಮಾಡಿದ್ದರು. ಆಸ್ಪತ್ರೆಯು 1999ರಲ್ಲಿ ಮೈಕ್ರೋ ಪಕೋನಿತ್ ಅನ್ವೇಷಣೆಯ ಮೂಲಕ (0.7 ಎಂ.ಎಂ. ಅಳತೆಯ ರಂಧ್ರದ ಮೂಲಕ ಕ್ಯಾಟರಾಕ್ಟ್ ಸರ್ಜರಿ) ಜಾಗತಿಕವಾಗಿಯೂ ಗಮನಸೆಳೆಯಿತು.

2008ರಲ್ಲಿ ನಾಲ್ಕು ವರ್ಷದ ಬಾಲಕಿಗೆ ಪ್ರೊ. ಅಮರ್ ಅಗರವಾಲ್ ಅವರು `ಗ್ಲುಯೆಡ್ ಇಂಟ್ರಾಕುಲರ್ ಲೆನ್ಸ್ ಇಂಪ್ಲಾಂಟ್’ ನೆರವೇರಿಸಿದರು. ಫೆಬ್ರುವರಿ 2009ರಲ್ಲಿ ವಿಶ್ವದ ಮೊದಲ ಅಂಟೆರಿಯರ್ ಸೆಗ್‍ಮೆಂಟ್ ಐ ಟ್ರಾನ್ಸ್‍ಪ್ಲಾಂಟ್ ಸರ್ಜರಿಯನ್ನು ನಾಲ್ಕು ವರ್ಷ ವಯಸ್ಸಿನ ಮಗುವಿನ ಮೇಲೆ ಮಾಡಲಾಗಿತ್ತು. ನವೆಂಬರ್ 2013ರಲ್ಲಿ ವಿಶ್ವದಲ್ಲಿಯೇ ಮೊದಲ ಬಾರಿಗೆ ಚೆನ್ನೈನ ಡಾ. ಅಗರವಾಲ್ ಐ ಹಾಸ್ಪಿಟಲ್‍ನಲ್ಲಿ ದಾನಿಯ ಕಾರ್ನಿಯಾ ಅನ್ನು 60 ವರ್ಷದ ವಯಸ್ಸಿನ ವ್ಯಕ್ತಿಗೆ ನೂತನ ತಂತ್ರಜ್ಞಾನ ಪಿಡಿಇಕೆ (ಪ್ರೀ ಡಿಸ್ಕೆಮೆಟ್ ಎಂಡೊಥೆಲಿಯಾಲ್ ಕೆರಾಟೊಪ್ಲಾಸ್ಟಿ) ಮೂಲಕ ಕಸಿ ಮಾಡಲಾಯಿತು.

ಹೆಚ್ಚಿನ ಮಾಹಿತಿಗಳಿಗೆ ಸಂಪರ್ಕಿಸಿ:

ರೇಣು ಪ್ರವೀಣ್, 9742279654 / ವಸಂತ ಕುಮಾರ್, 9880938950 / ಜೆಸ್ಸಿಕಾ ಸಿಂಥಿಯಾ, 9818273882

Read These Next

ರೋಟರಿ ಸಂಸ್ಥೆ ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ- ಮಂಜುನಾಥರೆಡ್ಡಿ

ಶ್ರೀನಿವಾಸಪುರ: ರೋಟರಿ ಸಂಸ್ಥೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದ್ದು ಸಮಾಜ ಸೇವೆಗೆ ಎಲ್ಲರನ್ನು ...

ಜು.19 ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ;ಎಸ್.ಎಂ.ಎಸ್ ಮೂಲಕ ಮೂಬೈಲ್ ಗೆ ರವಾನೆ

ಬೆಂಗಳೂರು: ಜೂನ್ 2018ರ ಎಸೆಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಜು.19ರ ಮಧ್ಯಾಹ್ನ 12 ಗಂಟೆ ನಂತರ ...