ಆಟವಾಡುತ್ತ ತೆರೆದ ಶೌಚ ಗುಂಡಿಗೆ ಬಿದ್ದು ಮಗು ಸಾವು

Source: sonews | By Staff Correspondent | Published on 27th July 2018, 11:50 PM | Coastal News | State News | Don't Miss |

ಬಂಟ್ವಾಳ: ಸ್ವಚ್ಛ ಮಾಡಿ ತೆರೆದಿಟ್ಟಿದ್ದ ಶೌಚಾದ ಗುಂಡಿಗೆ ಎರಡು ವರ್ಷದ ಮಗುವೊಂದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ಶುಕ್ರವಾರ ನಡೆದಿದೆ.

ತುಂಬೆ ವಳವೂರಿನ ನಿವಾಸಿ ಅಹ್ಮದ್ ಬಾವ ಎಂಬವರ ಮಗಳು ಆಯಿಶಾ ಮೃತ ಮಗು. ವಾಕರ್‌ನಲ್ಲಿ ಆಟವಾಡಿಕೊಂಡಿದ್ದ ವೇಳೆ ಆಕಸ್ಮಿಕವಾಗಿ ಜಾರಿ ಮನೆಯ ಶೌಚಾ ಗುಂಡಿಗೆ ಮಗು ಬಿದ್ದಿರುವುದಾಗಿ ತಿಳಿದುಬಂದಿದೆ. ಶೌಚಾಲಯದ ಗುಂಡಿಯನ್ನು ಸ್ವಚ್ಛಗೊಳಿಸಿ ಇನ್ನೇನು ಮುಚ್ಚಲು ತಯಾರಿ ಕೂಡ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಷ್ಟರಲ್ಲಿ ಮಗು ಆಟವಾಡುತ್ತ ಗುಂಡಿಗೆ ವಾಕರ್ ಸಮೇತವಾಗಿ ಬಿದ್ದಿದೆಯೆನ್ನಲಾಗಿದೆ. ಅರ್ಧ ಗಂಟೆಯಾದರೂ ಮಗುವಿನ ಸದ್ದು ಕೇಳದಿದ್ದರಿಂದ ಮನೆ ಮಂದಿ ಹುಡುಕಾಡಿದಾಗ ಮಗು ಶೌಚಾದ ಗುಂಡಿಯಲ್ಲಿ ವಾಕರ್ ಸಮೇತ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗವನ್ನು ಮೇಲಕ್ಕೆತ್ತಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...