ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ  ಶಾಸಕ ಸುನೀಲ್ ಗುಂಪಿಗೆ ಒಲಿದ ವಿಜಯ ಮಾಲೆ

Source: sonews | By sub editor | Published on 20th August 2018, 6:32 PM | Coastal News | Don't Miss |

ಭಟ್ಕಳ:ತಾಲೂಕಿನ ಪಿಎಲ್ಡಿ (ಕೃಷಿ ಹಾಗೂ ಗ್ರಾಮೀಣ ಭೂ ಅಭಿವೃದ್ದಿ ಬ್ಯಾಂಕ್) ಬ್ಯಾಂಕ್‌ನ ೧೫ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ಬಿಜೆಪಿ ಬೆಂಬಲಿಗರು ೧೪ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ವಿಜಯಮಾಲೆಯನ್ನು ಧರಿಸಿಕೊಂಡಿದ್ದಾರೆ.

ಬೆಳಿಗ್ಗೆ ೯ರಿಂದ ಸಂಜೆ ೪ಗಂಟೆವರೆಗೆ ನಡೆದ ಮತದಾನದಲ್ಲಿ ಶೇ.೮೦ರಷ್ಟು ಮತದಾನವಾಯಿತು.೬೬೫೫ ಸಾಲಗಾರ ಮತದಾರರು,೧೦೯೭ ಸಾಲಗಾರ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.ಶಾಸಕ ಸುನೀಲ್ ನಾಯ್ಕ ಅತಿ ಹೆಚ್ಚು ೩೧೫೬ ಮತ ಪಡೆದು ಆಯ್ಕೆಯಾಗುವ ಮೂಲಕ ತಮ್ಮ ಎಲ್ಲಾ ಬಿಜೆಪಿ ಬೆಂಬಲಿಗರನ್ನು ಆಯ್ಕೆ ಆಗುವಂತೆ ಮಾಡಿದರು. ಈರಪ್ಪ ಮಂಜಪ್ ನಾಯ್ಕ ಎಂಬ ಒಬ್ಬರು ಮಾತ್ರ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾಗಿದ್ದಾರೆ.

ಶಾಸಕ ಸುನೀಲ್ ನೇತೃತ್ವದ ಬಿಜೆಪಿ ಬೆಂಬಲಿಗರಾದ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಈಶ್ವರ ನಾರಾಯಣ ನಾಯ್ಕ, ನವನೀತ ಗಣೇಶ ನಾಯ್ಕ ಗರ್ಡೀಕರ್, ಮಂಜಪ್ಪ ಮಾದೇವ ನಾಯ್ಕ, ಮಂಜುನಾಥ ದುರ್ಗಪ್ಪ ನಾಯ್ಕ, ಸಂತೋಷ ಮಾದೇವ ನಾಯ್ಕ, ಸುರೇಶ ಜಟ್ಟಯ್ಯ ನಾಯ್ಕ, ಸಾಲಗಾರರ  ಹಿಂದುಳಿದ 'ಅ'ವರ್ಗದಿಂದ ಮೋಹನ ಕೊರ್ಗಪ್ಪ ನಾಯ್ಕ, ಹರೀಶ ವೆಂಕಟೇಶ ನಾಯ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ಕಮಲಾ ರಾಮಚಂದ್ರ ನಾಯ್ಕ, ಗಾಯತ್ರಿ ವಿಜಯಕುಮಾರ ನಾಯ್ಕ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಂಜು ಮಂಜು ಮೊಗೇರ್, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ನಾಗಯ್ಯ ಮಾಸ್ತಿ ಗೊಂಡ, ಸಾಲಗಾರರಲ್ಲದ ಕ್ಷೆತ್ರದಿಂದ ಈಶ್ವರ ಮಂಜುನಾಥ ನಾಯ್ಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಸಹಕಾರಿ ಅಧಿಕಾರಿ ಭಾಸ್ಕರ ನಾಯ್ಕ ಕಾರ್ಯನಿರ್ವಹಿಸಿದ್ದರು.

Read These Next

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...

ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಖ್ಯಾತ ಸಾಹಿತಿ ಕೋ.ಚೆನ್ನಬಸ್ಸಪ್ಪನವರು ಇನ್ನಿಲ್ಲ

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ನಿವೃತ್ತ ನ್ಯಾಯಾಧಿಶ, ಕನ್ನಡದ ಖ್ಯಾತ ಸಾಹಿತಿ, ಚಿಂತಕ, ಕನ್ನಡದ ಸಾಕ್ಷಿ ಪ್ರಜ್ಞೆ ಎಂದೇ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...