ಜೆ.ಡಿ.ಎಸ್. ವತಿಯಿಂದ ದಿ. ಬಂಗಾರಪ್ಪನವರ ಹುಟ್ಟುಹಬ್ಬ ಆಚರಣೆ. 

Source: S O News service | By Staff Correspondent | Published on 26th October 2016, 9:59 PM | Coastal News | State News | Don't Miss |

ಕಾರವಾರ:  ಅಂಕೋಲಾ ಕಾರವಾರ ಜೆ.ಡಿ.ಎಸ್. ಪಕ್ಷದ ವತಿಯಿಂದ ಕಾರವಾರದ ಜೆ.ಡಿ.ಎಸ್. ಕಛೇರಿಯಲ್ಲಿ ರಾಜ್ಯ ಮಾಜಿ ಮುಖ್ಯ ಮಂತ್ರಿ, ಬಡವರ ಪಾಲಿಗೆ ಕಣ್ಮಣಿಯರಾದ ದಿ. ಎಸ್. ಬಂಗಾರಪ್ಪನವರ ೮೪ನೇ ಹುಟ್ಟು ಹಬ್ಬದ ಜಯಂತಿಯನ್ನು ಆಚರಿಸಲಾಯಿತು.  

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪುರುಷೋತ್ತ ಸಾವಂತ ದಿ. ಎಸ್. ಬಂಗಾರಪ್ಪನವರು ಉತ್ತರ ಕನ್ನಡ ಜಿಲ್ಲೆಗೆ ಅತೀ ಜನಪ್ರಿಯ ನಾಯಕರಾಗಿದ್ದರು.  ಅವರು ರಾಜ್ಯದ ಮುಖ್ಯಮಂತ್ರಿ ಆದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳಾದ ಆಶ್ರಯ ಮನೆ, ಅಕ್ಷಯ ಯೋಜನೆ, ಆರಾಧನಾ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೃಪಾಂಕ ಯೋಜನೆ ಮತ್ತು ಗ್ರಾಮೀಣ ಕುಶಲ ಕಾರ್ಮಿಕರ ಏಳ್ಗೆಗಾಗಿ ವಿಶ್ವ ಯೋಜನೆ ಅಂಥಹ ಅನೇಕ ಜನಪರ ಯೋಜನೆಗಳನ್ನು ಜಾರಿಗೆಗೊಳಿಸಿ ಇಡೀ ಕರ್ನಾಟಕ ಜನತೆಯ ಪ್ರೀತಿಗೆ ಪಾತ್ರರಾಗಿದ್ದರು.  ಅಲ್ಲದೇ ನಮ್ಮ ಕಾರವಾರ ತಾಲೂಕಿನಲ್ಲಿ ಖಾರ್ಗೆಜೂಗಕ್ಕೆ ಡಿಂಗಿ (ಯಾಂತ್ರಿಕ ದೋಣಿ) ಯನ್ನು ಕೊಟ್ಟು ಇನ್ನೂವರೆಗೆ ಬಂಗಾರಪ್ಪರವರ ಹೆಸರಿನಲ್ಲಿ ಚಲಿಸುತ್ತಿದೆ ಎಂದು ಸ್ಮರಿಸಿದರು.  

ಅಂಕೋಲಾ ತಾಲೂಕ ಅಧ್ಯಕ್ಷ ಕೆ.ಜಿ.ನಾಯ್ಕ ಮಾತನಾಡಿ ಬಂಗಾರಪ್ಪನವರು ನಮ್ಮ ಜಿಲ್ಲೆಯ ಅಳಿಯರಾಗಿದ್ದು ಜೀವನದುದ್ದಕ್ಕೂ ರೈತ ಹೋರಾಟ, ಜನಪರ ಹೋರಾಟ ನಾಡಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಪಾಲುಗುಂಡಿದ್ದು ಎಲ್ಲರ ಮೆಚ್ಚಿನ ಜನನಾಯಕರಾಗಿದ್ದರು ಎಂದು ತಿಳಿಸಿದರು.  ಜೆ.ಡಿ.ಎಸ್. ಮುಖಂಡ ಪ್ರದೀಪ ಶೇಜವಾಡಕರ ಮಾತನಾಡಿ ಬಂಗಾರಪ್ಪನವರು ಒಬ್ಬ ಬಡವರ ಬಂದು ಎಂದು ಬಣ್ಣಿಸಿದರು.  ಅಲ್ಲದೇ ಶೇಜವಾಡದಲ್ಲಿ ಬಡವರಿಗಾಗಿ ಆಶ್ರಯ ಮನೆಗಳನ್ನು ಕಟ್ಟಿಸಿಕೊಟ್ಟು ಈಗಲೂ ಆ ಸ್ಥಳಕ್ಕೆ ಬಂಗಾರಪ್ಪ ನಗರ ಎಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.  

ಹಿರಿಯ ಜೆ.ಡಿ.ಎಸ್. ಮುಖಂಡರಾದ ಖಲಿಲುಲ್ಲಾ ಸರ್.  ಮತ್ತು ಶಂಕರ ಬುಬ್ರಕರ ವಾಸ್ತವಿಕವಾಗಿ ಭಾಷಣ ಮಾಡಿದರು.  ಸಭೆಯಲ್ಲಿ ಮಾರುತಿ ನಾಯ್ಕ ಅಂಕೋಲಾ, ಪುನೀತ ನಾಯ್ಕ, ಅಬ್ದುಲ್ ಖತೀಬ, ಏಕನಾಥ ನಾಯ್ಕ ಅರ್ಗಾ, ತಾಕು ದುರ್ಗೇಕರ, ರಾಜೇಜ ಕೊಡಾರ ಮುಂತಾದವರು ಹಾಜರಿದ್ದರು.  
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...