ಸಂಘಪರಿವಾರದಿಂದ ೧೦ಹಿಂದೂ ೧೧ಮುಸ್ಲಿಮರ ಹತ್ಯೆ-ರಾಮಲಿಂಗರೆಡ್ಡಿ

Source: sonews | By sub editor | Published on 6th May 2018, 3:54 PM | Coastal News | State News | Don't Miss |

ಬೆಂಗಳೂರು : ಸಂಘಪರಿವಾರದಿಂದ 11 ಮಂದಿ ಎಸ್ ಡಿಪಿಐ ಕಾರ್ಯಕರ್ತರು ಹಾಗೂ 10 ಮಂದಿ ಹಿಂದೂಗಳ ಹತ್ಯೆಯಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ರವಿವಾರ ಬೆಳಗ್ಗೆ ನಗರದ ಪ್ರೆಸ್ ಕ್ಲಬ್ ನಲ್ಲಿ ಸಿಎಂ ಸಿದ್ದರಾಮಯ್ಯರೊಂದಿಗಿನ ಸಂವಾದ ಕಾರ್ಯಕ್ರಮಕ್ಕೂ ಮೊದಲು ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಈ ಹೇಳಿಕೆ ನೀಡಿದರು. 

ರಾಜ್ಯದಲ್ಲಿ ನಡೆದಿರುವ ಹತ್ಯೆ ಪ್ರಕರಣಗಳ ಕುರಿತು ಬಿಜೆಪಿ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಗೆ ನಡೆದಿರುವ ಹತ್ಯೆಗಳನ್ನು ಹಿಂದೂಗಳ ಹತ್ಯೆ ಎಂಬ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.  ಆದರೆ, ಕೋಮು ಪ್ರಚೋದನೆ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಪ್ರಕರಣಗಳಲ್ಲಿ ಸಂಘಪರಿವಾರ ನಡೆಸಿರುವ ಹತ್ಯೆಗಳೆ ಹೆಚ್ಚಾಗಿವೆ  ಎಂದು ಅವರು ತಿಳಿಸಿದರು.

ಕೃಪೆ:vbnewsonline

Read These Next