ಸೌಂದರ್ಯ ಲಹರಿ ಪಠಣದಿಂದ ಜ್ಞಾನ, ಸ್ವಾಸ್ತ್ಯ, ಧನ ಪ್ರಾಪ್ತ- ನರೇಂದ್ರ ಮೋದಿ

Source: sonews | By Staff Correspondent | Published on 29th October 2017, 9:48 PM | Coastal News | State News | National News | Don't Miss |

ಬೆಂಗಳೂರು: ಸೌಂದರ್ಯ ಲಹರಿ ಪಠಣದಿಂದ ಜ್ಞಾನ, ಸ್ವಾಸ್ತ್ಯ, ಧನ ಎಲ್ಲವು ಸಿಗುತ್ತದೆ. ಇದೇ ಸಂಸ್ಕೃತಿಯನ್ನು ನಮ್ಮ ಸರಕಾರದ ‘ನವ ಭಾರತ’ದ ಕಲ್ಪನೆ ಯೊಂದಿಗೆ ಜೋಡಿಸಲಾಗಿದೆ. ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರದ ಮೇಲೆ ವಿಶ್ವಾಸವಿಟ್ಟಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

 

ರವಿವಾರ ನಗರದ ಅರಮನೆ ಮೈದಾನದಲ್ಲಿ ಯಡತೋರೆ ಮಠದ ಶಂಕರ ಭಾರತಿ ಸ್ವಾಮಿ ನೇತೃತ್ವದಲ್ಲಿ ಆಯೋಜಿಸಿದ್ದ ‘ದಶಮ ಸೌಂದರ್ಯ ಲಹರಿ ಪಾರಾಯಣೋತ್ಸವ ಮಹಾ ಸರ್ಮಪಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸೌಂದರ್ಯ ಲಹರಿಯ ಮಂತ್ರಗಳಲ್ಲಿ ಶಕ್ತಿ, ಭಾವವಿದೆ. ನಾನು ಅನೇಕ ವರ್ಷಗಳಿಂದ ನವರಾತ್ರಿಯನ್ನು ಆಚರಿಸುತ್ತಿದ್ದು, ಅದರಲ್ಲಿ ಸೌಂದರ್ಯ ಲಹರಿಗೂ ಒಂದು ಸ್ಥಾನವಿದೆ. ಸೌಂದರ್ಯ ಲಹರಿಗೆ 10 ವರ್ಷ ಪೂರೈಸುತ್ತಿರುವುದಕ್ಕೆ ನಿಮಗೆಲ್ಲ ಅಭಿನಂದನೆಗಳು ಎಂದು ಹೇಳಿದರು.

ಕೇದಾರನಾಥಕ್ಕೆ ನಾನು ಕಳೆದ 8-10 ದಿನಗಳ ಹಿಂದೆ ಹೋಗಿದ್ದೆ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಅಲ್ಲಿಗೆ ಭೇಟಿ ನೀಡಲು ಕಷ್ಟವಾಗುತ್ತದೆ. ಆದರೆ, ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ಸಾವಿರಾರು ವರ್ಷಗಳ ಹಿಂದೆ ಹೇಗೆ ಬಂದಿರಬಹುದು. ಬರಿಗಾಲಿನಲ್ಲಿ ದೇಶವನ್ನು ಮೂರು ಬಾರಿ ಸುತ್ತಿದ್ದಾರೆ. ದೇಶದ ನಾಲ್ಕು ಭಾಗಗಳಲ್ಲಿ ಮಠಗಳನ್ನು ನಿರ್ಮಿಸಿ, ದೇಶವನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸಂಸ್ಕೃತಿಯಲ್ಲಿ ಸೇರಿಕೊಂಡಿದ್ದ ತಪ್ಪು ಆಚರಣೆಗಳನ್ನು ಅವರು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದರು. ಅಲ್ಲದೆ, ಮುಂದಿನ ಪೀಳಿಗೆಯು ಆ ತಪ್ಪು ದಾರಿಯಲ್ಲಿ ಹೋಗುವುದನ್ನು ತಡೆಯಲು ಪ್ರಯತ್ನಿಸಿದ್ದರು. ಜನರನ್ನು ಜ್ಞಾನ, ಭಕ್ತಿಯ ಮಾರ್ಗದಲ್ಲಿ ನಡೆಸಲು ಪ್ರೇರೆಪಿಸಿದರು. ಅಲ್ಲದೆ, ಮುಂದಿನ ಪೀಳಿಗೆಗಾಗಿ ಸೌಂದರ್ಯ ಲಹರಿಯ ರಚನೆ ಮಾಡಿದರು ಎಂದು ಹೇಳಿದರು.

ಆದಿ ಶಂಕರಾಚಾರ್ಯರ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಶಂಕರ ಭಾರತಿ ಸ್ವಾಮಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಇಡೀ ವಿಶ್ವವನ್ನು ಒಂದು ಕುಟುಂಬ ಎಂದು ಭಾವಿಸಿ, ಆತ್ಮಭಾವದಿಂದ ಶಂಕರಚಾರ್ಯರ ಸಂದೇಶವನ್ನು ವೇದಾಂತ ಭಾರತೀಯ ಮೂಲಕ ಜನರಿಗೆ ತಲುಪಿಸುತ್ತಿದ್ದಾರೆ ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವವು ಎದುರಿಸುತ್ತಿರುವ ಅನೇಕ ಜಟಿಲ ಸಮಸ್ಯೆಗಳಿಗೆ ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಪರಿಹಾರವಿದೆ. ಯಾರು ಯಾರ ವಿರುದ್ಧವು ದ್ವೇಷ ಮಾಡಬಾರದು ಎಂಬುದು ನಮ್ಮ ಸಂಸ್ಕೃತಿ. ನಮ್ಮ ಪರಂಪರೆಯನ್ನು ನಾಶ ಮಾಡಲು ಪ್ರಯತ್ನಗಳು ನಡೆದವು. ಆದರೆ, ಸಾವಿರಾರು ವರ್ಷಗಳ ಈ ಭವ್ಯ ಸಂಸ್ಕೃತಿಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದರು.

ಇವತ್ತಿನ ಯುವಕರು ಮೊಬೈಲ್‌ನಲ್ಲಿ ಎಲ್ಲವನ್ನು ಓದುತ್ತಾರೆ. ಪುಸ್ತಕಗಳಲ್ಲಿ ಇರುವ ಜ್ಞಾನದ ಬಗ್ಗೆ ಅವರಿಗೆ ಹೇಗೆ ಗೊತ್ತಾಗಬೇಕು. ಶಾಲಾ ಮಕ್ಕಳಿಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಭಾರತೀಯ ಸಂಸ್ಕೃತಿ, ಋಷಿ, ಮುನಿಗಳ ಪರಿಚಯಿಸುತ್ತಿರುವ ಶಂಕರ ಭಾರತಿ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

‘ವಿವಿಧತೆಯಲ್ಲಿ ಏಕತೆ, ಭಾರತದ ವಿಶೇಷತೆ’ ಎನ್ನುತ್ತೇವೆ. ಆದರೆ, ನಾವು ಸಿಂಗಾಪುರದ ಬಗ್ಗೆ ತಿಳಿದುಕೊಂಡಷ್ಟು ಬಂಗಾಲದ ಬಗ್ಗೆ ಹಾಗೂ ದುಬೈ ಬಗ್ಗೆ ತಿಳಿದುಕೊಂಡಿರುವಷ್ಟು ಡೆಹ್ರಾಡೂನ್ ಬಗ್ಗೆ ತಿಳಿದು ಕೊಂಡಿರುವುದಿಲ್ಲ. ನಾವು ನಮ್ಮವರನ್ನೆ ಮರೆಯುತ್ತಿದ್ದೇವೆ. ಆದುದರಿಂದಲೇ, ನಮ್ಮ ಸರಕಾರ ‘ಏಕ್ ಭಾರತ್, ಶ್ರೇಷ್ಠ್ ಭಾರತ್’ ಅಭಿಯಾನವನ್ನು ಆರಂಭಿಸಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್‌ ಕುಮಾರ್, ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ
ನನ್ನ ಪ್ರೀತಿಯ ಮಾತಾ, ಭಗಿನೀಯರೆ, ಸಹೋದರರೇ, ಈ ಸೌಂದರ್ಯ ಲಹರಿಯ ಮಹಾ ಸಮರ್ಪಣೆ ಮಾಡಲು ಬಂದಿರುವ ನಿಮಗೆಲ್ಲ ನಮಸ್ಕಾರಗಳು, ಪೂಜ್ಯ ಸ್ವಾಮಿಗಳಿಗೆ ನನ್ನ ಪ್ರಣಾಮಗಳು’ ಎಂದು ಕನ್ನಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...