ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಇಲ್ಲಿದೆ ಮಾಹಿತಿ

Source: sonews | By sub editor | Published on 8th June 2018, 10:42 PM | State News | Don't Miss |

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಹಣಕಾಸು/ಅಬಕಾರಿ/ಇಂಧನ/ಮೂಲ ಸೌಕರ್ಯ ಅಭಿವೃದ್ಧಿ, ಜವಳಿ ಗುಪ್ತವಾರ್ತೆ/ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಂಪುಟ ವ್ಯವಹಾರ/ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ/ಯೋಜನೆ ಮತ್ತು ಸಾಂಖ್ಯಿಕ, ಸಾರ್ವಜನಿಕ ಉದ್ದಿಮೆ ಸೇರಿದಂತೆ 11 ಖಾತೆಗಳನ್ನು ಸಿಎಂ ಕುಮಾರಸ್ವಾಮಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಡಾ.ಜಿ.ಪರಮೇಶ್ವರ್-ಗೃಹ/ಬೆಂಗಳೂರು ನಗರಾಭಿವೃದ್ಧಿ/ ಯುವ ಸಬಲೀಕರಣ ಮತ್ತು ಕ್ರೀಡೆ,

ಎಚ್.ಡಿ.ರೇವಣ್ಣ-ಲೋಕೋಪಯೋಗಿ, ಆರ್.ವಿ.ದೇಶಪಾಂಡೆ- ಕಂದಾಯ/ಕೌಶಲ್ಯಾಭಿವೃದ್ಧಿ, ಬಂಡೆಪ್ಪ ಕಾಶಂಪೂರ್-ಸಹಕಾರ, ಡಿ.ಕೆ. ಶಿವಕುಮಾರ್-ಜಲಸಂಪನ್ಮೂಲ/ವೈದ್ಯಕೀಯ ಶಿಕ್ಷಣ, ಜಿ.ಟಿ. ದೇವೇಗೌಡ-ಉನ್ನತ ಶಿಕ್ಷಣ, ಕೆ.ಜೆ.ಜಾರ್ಜ್-ಬೃಹತ್ ಕೈಗಾರಿಕೆ/ಐಟಿ-ಬಿಟಿ.

ಡಿ.ಸಿ.ತಮ್ಮಣ್ಣ-ಸಾರಿಗೆ, ಕೃಷ್ಣಬೈರೇಗೌಡ -ಗ್ರಾಮೀಣಾಭಿವೃದ್ಧಿ/ಕಾನೂನು ಮತ್ತು ಸಂಸದೀಯ ವ್ಯವಹಾರ, ಎಂ.ಸಿ.ಮನಗೂಳಿ-ತೋಟಗಾರಿಕೆ, ಎನ್.ಎಚ್. ಶಿವಶಂಕರ್ ರೆಡ್ಡಿ- ಕೃಷಿ, ಎಸ್.ಆರ್.ಶ್ರೀನಿವಾಸ್-ಸಣ್ಣ ಕೈಗಾರಿಕೆ, ರಮೇಶ್ ಜಾರಕಿಹೊಳಿ-ಪೌರಾಡಳಿತ ಮತ್ತು ಬಂದರು/ ಒಳನಾಡು ಸಾರಿಗೆ, ವೆಂಕಟರಾವ್ ನಾಡಗೌಡ-ಪಶುಸಂಗೋಪನೆ ಮತ್ತು ಮೀನುಗಾರಿಕೆ, ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ, ಝಮೀರ್ ಅಹ್ಮದ್ ಖಾನ್-ಆಹಾರ ಮತ್ತ ನಾಗರಿಕ ಪೂರೈಕೆ/ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್, ಸಿ.ಎಸ್.ಪುಟ್ಟರಾಜು-ಸಣ್ಣ ನೀರಾವರಿ.

ಯು.ಟಿ.ಖಾದರ್ ನಗರಾಭಿವೃದ್ಧಿ/ವಸತಿ, ಸಾ.ರಾ.ಮಹೇಶ್-ಪ್ರವಾಸೋದ್ಯಮ ಮತ್ತು ರೇಶ್ಮೆ, ಎನ್.ಮಹೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಡಿ.ಸಿ. ತಮ್ಮಣ್ಣ- ಸಾರಿಗೆ, ಶಿವಾನಂದ ಪಾಟೀಲ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೆಂಕಟ ರಮಣಪ್ಪ-ಕಾರ್ಮಿಕ.

ರಾಜಶೇಖರ್ ಪಾಟೀಲ್-ಗಣಿ ಮತ್ತು ಭೂ ವಿಜ್ಞಾನ/ಮುಜರಾಯಿ, ಜಯಮಾಲ -ಮಹಿಳಾ ಮತ್ತು ಮಕ್ಕಳ ಕಲ್ಯಾಣ/ಕನ್ನಡಮತ್ತು ಸಂಸ್ಕೃತಿ ಇಲಾಖೆ, ಆರ್.ಶಂಕರ್-ಅರಣ್ಯ ಮತ್ತು ಪರಿಸರ, ಸಿ.ಪುಟ್ಟರಂಗಶೆಟ್ಟಿ-ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಜವಾಬ್ದಾರಿ ನೀಡಲಾಗಿದೆ.

 

Read These Next

ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ...

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...