ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ – 30 ಕೋಟಿ ರೂ. ನಿವ್ವಳ ಲಾಭ

Source: sonews | By Staff Correspondent | Published on 28th July 2017, 6:48 PM | State News | Don't Miss |

ಬೆಂಗಳೂರು:  2016-17ರ ವರ್ಷದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‍ಎಫ್‍ಸಿ) ಯು               30 ಕೋಟಿ ರೂ. ನಿವ್ವಳ ಲಾಭಗಳಿಸಿದೆ. 

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ಘಟಕಗಳಿಗೆ ಸಂಸ್ಥೆಯಿಂದ ಹಣಕಾಸಿನ ನೆರವನ್ನು ನೀಡಿದ್ದು, ಈ ನಿಟ್ಟಿನಲ್ಲಿ 2016-17 ಮತ್ತು ಹಿಂದಿನ ಹಣಕಾಸಿನ ವರ್ಷದಲ್ಲಿ ಸಂಸ್ಥೆಯ ಕಾರ್ಯ ಸಾಧನೆಯಾಗಿದೆ. ರೂ. 733.43 ಕೋಟಿ ಗಳ ಒಟ್ಟಾರೆ ಮಂಜೂರಾತಿಯಲ್ಲಿ ತಯಾರಿಕಾ ವಲಯಕ್ಕೆ ರೂ 309.22 ಕೋಟಿ ಮೊತ್ತದ ಹಣಕಾಸಿನ ನೆರವನ್ನು ಸಂಸ್ಥೆಯಿಂದ ನೀಡಲಾಗಿದ್ದು, ಅದು ಒಟ್ಟು ಮಂಜೂರಾತಿಯ ಶೇ 42 ರಷ್ಟಿದೆ.  ಪ್ರವಾಸೋದ್ಯಮ ವಲಯ ಹಾಗೂ ರಿಯಲ್ ಎಸ್ಟೇಟ್ ವಾಣಿಜ್ಯ ವಲಯಕ್ಕೆ ಅನುಕ್ರಮವಾಗಿ ರೂ 77.31 ಕೋಟಿ ಹಾಗೂ 58.92 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡಲಾಗಿದ್ದು ಒಟ್ಟು ಮಂಜೂರಾತಿಯಲ್ಲಿ ಪ್ರತಿ ವಲಯದ ಪಾಲು ಶೇ  11 ಹಾಗೂ ಶೇ 8 ರಷ್ಟಿದೆ.  ಇನ್ನುಳಿದ ಮೊತ್ತವಾದ ರೂ 37.39 ಕೋಟಿ ಮತ್ತು ರೂ. 250.59 ಕೋಟಿ ಒಟ್ಟು ಮಂಜೂರಾತಿಯ ಶೇ 39 ರಷ್ಟಿದ್ದು ಅದು ಆರೋಗ್ಯ ಹಾಗೂ ಇತರೆ ವಲಯಗಳ ಪಾಲಿನದ್ದಾಗಿದೆ.

ಸಂಸ್ಥೆಯ ಒಟ್ಟಾರೆ ಮಂಜೂರಾತಿಯಾದ ರೂ 733.43 ಕೋಟಿಗಳಲ್ಲಿ ಶೇ 55 ರಷ್ಟು ಅಂದರೆ ರೂ. 405.39 ಕೋಟಿ ಮೊತ್ತವನ್ನು ಮಹಿಳಾ ಉದ್ದಿಮೆದಾರರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಶೇ 4 ರ ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ಶೇ 8 ರ ಬಡ್ಡಿ ಸಹಾಯ ಧನವ ವಿಶೇಷ ಯೋಜನೆಯಡಿಯಲ್ಲಿ ಸಂಸ್ಥೆಯು ಸಾಲ ಮಂಜೂರು ಮಾಡಿದೆ.   ಇನ್ನುಳಿದ ಶೇ 45 ರಷ್ಟು ಮೊತ್ತವನ್ನು ಸಾಮಾನ್ಯ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿದೆ.

ಹಣಕಾಸಿನ ವರ್ಷದ ಪ್ರಾರಂಭದಲ್ಲಿದ್ದ ರೂ 245.12 ಕೋಟಿ ಮೊತ್ತದ ಅನುತ್ವಾದಕ ಆಸ್ತಿಗಳಲ್ಲಿ ಇಳಿಕೆ ಕಂಡು ಬಂದಿದ್ದು ಅದು 31-03-2017 ರವರೆಗೆ ರೂ 217.80 ಕೋಟಿಗಳಾಗಿದೆ.  ಹಿಂದಿನ ವರ್ಷದಲ್ಲಿ ಶೇ 13.47 ರಷ್ಟಿದ್ದ ಒಟ್ಟು ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ 12 ರಷ್ಟಾಗಿದ್ದು,  ಪ್ರಸ್ತುತ ವರ್ಷದಲ್ಲಿ ಮತ್ತಷ್ಟು ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.

ಸಂಸ್ಥೆಯ ವತಿಯಿಂದ ಪ್ರಾರಂಭದಿಂದಲೂ ಹಲವಾರು ವಿಶೇಷ ಯೋಜನೆಯಡಿಯಲ್ಲಿ ರೂ 3286.21 ಕೋಟಿಗಳ ಅವಧಿ ಸಾಲವನ್ನು ಸಉಮಾರು 29890 ಮಹಿಳಾ ಉದ್ದಿಮೆದಾರರಿಗೆ ನೀಡುವ ಮೂಲಕ ಯಶಸ್ವಿ ಉದ್ದೆಇಮದಾರರಾಗುವಂತೆ ಪ್ರೇರೇಪಿಸಲಾಗಿದೆ.  ಅಲ್ಲದೆ, ಸುಮಾರು 20,776 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ಒಟ್ಟು ರೂ 1265.95 ಕೋಟಿ ಮೊತ್ತದ ಹಣಕಾಸಿನ ನೆರವನ್ನು ನೀಡುವ ಮೂಲಕ ಉದ್ದಿಮೆಗಳನ್ನು ಸ್ಥಾಪಿಸಲು ಸಂಸ್ಥೆಯು ಸಹಾಯಹಸ್ತ ನೀಡಿದೆ.

ಇದಲ್ಲದೆ, ಅಲ್ಪಸಂಖ್ಯಾರ ವರ್ಗಗಳ ಉದ್ದಿಮೆದಾರರಿಗೆ ಉತ್ತೇಜನ ನೀಡಲು ಸಂಸ್ಥೆಯವತಿಯಿಂದ ರೂ 1,182.94 ಜೋಟಿ ಮೊತ್ತದ ಹಣಕಾಸಿನ ನೆರವನ್ನು 19,052 ಉದ್ದಿಮೆದಾರರಿಗೆ ನೀಡಲಾಗಿದೆ.  ಕರ್ನಾಟಕ ರಾಜ್ಯದಲ್ಲಿ ಕೈಗಾರೀಕರಣವನ್ನು ಉತ್ತೇಜಿಸಲು ಕಳೆದ 58 ವರ್ಷಗಳಿಂದಲೂ ಸತತವಾಗಿ ಸಂಸ್ಥೆಯು 1,71,414 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾನದ ಕೈಗಾರಿಕಾ ಘಟಕಗಳ (ಎಂ.ಎಸ್.ಎಂ.ಇ.ಎಸ್) ಸ್ಥಾಪನೆಗೆ ಒಟ್ಟು ರೂ 15,276.05 ಕೋಟಿ ಮೊತ್ತವನ್ನು ಮಂಜೂರು ಮಾಡುವ ಮೂಲಕ ಗಮನಾರ್ಹ/ಅಸಾಧಾರಣ ಸೇವೆಯನ್ನು ಸಂಸ್ಥೆಯು ಮಾಡಿದೆ.

ಕರ್ನಾಟಕ ಸರ್ಕಾರವು ಸಂಸ್ಥೆಗೆ ಮಹಿಳಾ/ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ವಿಶೇಷ ಯೋಜನೆಯಡಿಯಲ್ಲಿ ಬಡ್ಡಿ ಸಹಾಯಧನದ ನೆರವನ್ನು ನೀಡಿದೆ.

2017-18 ನೇ ಸಾಲಿನ ಮುನ್ನೋಟ:

ಪ್ರಸ್ತುತ ವರ್ಷದಲ್ಲಿ ಸಂಸ್ಥೆಯು ತನ್ನ ಎಲ್ಲಾ ಕಾರ್ಯಾಚರಣೆಗಳ ವಿಭಾಗಗಳಲ್ಲಿ ಸಾಧಾರಣ ಪ್ರಗತಿ ಸಾಧಿಸಿರುವುದು ಕಂಡುಬಂದಿದೆ.  ರಾಜ್ಯದ ರೋಚಕ ಆರ್ಥಿಕತೆ ಹಾಗೂ ಕರ್ನಾಟಕ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ಮಹಿಳಾ ಉದ್ಯಮಿಗಳ, ಮೊದಲ ಪೀಳಿಗೆ ಉದ್ದಿಮೆದಾರರ ಯೋಜನೆಗಳಿಗೆ ವಿಸ್ತರಿಸಿರುವ ಬಡ್ಡಿ ಸಹಾಯಧನವ ಹೆಚ್ಚಳ ಮತ್ತು ಮರುಪಾವತಿ ಅವಧಿ ವಿಸ್ತರಣೆಯಿಂದಾಗಿ ಸಂಸ್ಥೆಯ ಮುಂದಿನ ವರ್ಷವೂ ಸಹ ಉತ್ತಮ ಪ್ರಗತಿ ತೋರುವ ಆಶಾಭಾವನೆ ಕಾಣುತ್ತಿದೆ.  ಬಡ್ಡಿ ಸಹಾಯಧನ ಯೋಜನೆಯನ್ನು ಎಂಎಸ್‍ಎಂಇ ಗಳಿಗೆ ವಿಸ್ತರಿಸುವ ಪ್ರಸ್ತಾವನೆ ಕರ್ನಾಟಕ ಸರ್ಕಾರದ ಧನಾತ್ಮಕ ಪರಿಗಣನೆಯಲ್ಲಿದ್ದು ಇದು ಜಾರಿಗೆ ಬಂದಲ್ಲಿ ಸಂಸ್ಥೆಯ ವ್ಯವಹಾರ ಮುಂದಿನ ವರ್ಷಗಳಲ್ಲಿ ಸಾಕಷ್ಟು ಬಲವರ್ಧನೆಯಾಗುವ ನಿರೀಕ್ಷೆಯಿದೆ ಎಂದು ಪ್ರಕಟಣೆ ತಿಳಿಸಿದೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...