ಗೌರಿಲಂಕೇಶ್ ಸೇರಿದಂತೆ ವಿಚಾರವಾದಿಗಳ ಹತ್ಯಗೆ ಬಳಕೆಯಾದ ಪಿಸ್ತೂಲ್ ಮಧ್ಯಪ್ರದೇಶದಿಂದ ಬಂದಿತ್ತೆ?

Source: sonews | By Staff Correspondent | Published on 25th June 2018, 10:44 PM | State News | Don't Miss |

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಮಹಾರಾಷ್ಟ್ರ ಮತ್ತಿತರೆಡೆ ವಿಚಾರವಾದಿಗಳ ಹತ್ಯೆಗೆ ಬಳಕೆಯಾದ ಪಿಸ್ತೂಲ್  ಬಿಜೆಪಿ ಆಡಳಿತದ ಮಧ್ಯಪ್ರದೇಶ ರಾಜ್ಯದಿಂದ ಬಂದಿದ್ದೆ? ಎನ್ನುವ ಪ್ರಶ್ನೆಯೊಂದು ಸಿಟ್ ತನಿಖಾಧಿಕಾರಿಗಳಿಗೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.  

ಕೃತ್ಯ ನಡೆಸಿರುವ ಆರೋಪಿಗಳು, ಪಿಸ್ತೂಲು ಅನ್ನು ಮಧ್ಯಪ್ರದೇಶದಿಂದ ವಿಜಯಪುರಕ್ಕೆ ತಂದು, ಬಳಿಕ ವ್ಯವಸ್ಥಿತವಾಗಿ ಬೆಂಗಳೂರಿಗೆ ತೆಗೆದುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಅಲ್ಲದೆ, ಇನ್ನಿತರೆ ಕೊಲೆಗಳ ಹಿಂದೆಯೂ ಮಧ್ಯಪ್ರದೇಶ ಪಿಸ್ತೂಲುಗಳನ್ನು ಬಳಕೆ ಮಾಡಿರುವ ಆರೋಪ ದಟ್ಟವಾಗಿದೆ.

ಎಲ್ಲಿಂದ?: ಗೌರಿ ಲಂಕೇಶ್ ಹತ್ಯೆಯ ನಂತರ ಪಿಸ್ತೂಲು ಎಲ್ಲಿಂದ ಬಂತು ಎನ್ನುವುದರ ಬಗ್ಗೆ ಸಿಟ್ ತನಿಖೆ ಮುಂದುವರೆಸಿದೆ. ಅದೇ ರೀತಿ, ಪಿಸ್ತೂಲಿನ ಗುಂಡುಗಳ ಬಗ್ಗೆಯೂ ತನಿಖೆ ಕೈಗೊಳ್ಳಲಾಗುತಿದ್ದು, ಮಧ್ಯಪ್ರದೇಶದಲ್ಲಿಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಪೊಲೀಸ್ ತಂಡ: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಮಧ್ಯಪ್ರದೇಶದ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗುತಿದ್ದು, ವಿಚಾರವಾದಿಗಳ ಹತ್ಯೆ ಹಿಂದಿರುವ ದುಷ್ಕರ್ಮಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ನಿರ್ಲಕ್ಷ: ಮಹಾರಾಷ್ಟ್ರದಲ್ಲಿಯೂ ನಡೆದ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಇದುವರೆಗೂ ಆರೋಪಿಗಳ ಸುಳಿವು ದೊರೆಯದ ಹಿನ್ನೆಲೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೃತ್ಯವೆಸಗಿರುವ ಆರೋಪಿಗಳು ಕರ್ನಾಟಕ ಪೊಲೀಸರನ್ನು ನಿರ್ಲಕ್ಷ ಮಾಡಿಯೇ ಸಿಕ್ಕಿಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

Read These Next