ಬಸವಣ್ಣ ನನ್ನ ಯಕ್ಕಡಕ್ಕೆ ಸಮ ಎಂದು ಪೋಸ್ಟ್ ಹಾಕಿದ ಕಿಡಿಗೇಡಿ: ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

Source: sonews | By sub editor | Published on 19th May 2018, 11:59 PM | State News | Don't Miss |

ಬೆಂಗಳೂರು: ಕಿಡಿಗೇಡಿಯೊಬ್ಬ ಸಾಮಾಜಿಕ ಹರಿಕಾರ ಬಸವಣ್ಣರ ವಿರುದ್ಧ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ಬಗ್ಗೆ ವರದಿಯಾಗಿದೆ.

ಸುರೇಶ್ ಪ್ರಭಾಕರ್ ಎಂಬ ಹೆಸರಿನ ವ್ಯಕ್ತಿ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ 'ಅಲ್ಪಸಂಖ್ಯಾತ ಲಿಂಗಾಯತರು ನನ್ನ ಎಡಗಾಲಿನ ಎಕ್ಕಡಕ್ಕೆ ಸಮ', ‘ಬಸವ ಧರ್ಮ ಸ್ಥಾಪಕ ಬಸವಣ್ಣ ನನ್ನ ಎಕ್ಕಡಕ್ಕೆ ಸಮ' ಎಂದು ಬರೆದಿದ್ದಾನೆ. ದೇಶ ಧರ್ಮದ ಪ್ರೇಮಿ ಎಂದು ಈತನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಬರೆಯಲಾಗಿದ್ದು, ಬೆಂಗಳೂರಿನ ನಿವಾಸಿ ಎಂದು ತೋರಿಸುತ್ತದೆ. ಅಲ್ಲದೆ ಈತ ತನ್ನ ಫೇಸ್ ಬುಕ್ ಖಾತೆಯಲ್ಲಿ ‘ಈ ಬಾರಿ ಬಿಜೆಪಿ ಸರಕಾರ’ ಎನ್ನುವ ಫೋಟೊ ಹಾಕಿಕೊಂಡಿದ್ದಾನೆ.

ಇಷ್ಟೇ ಅಲ್ಲದೆ ಈತನ ಫೇಸ್ಬುಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರನ್ನು ನಿಂದಿಸಿ, ಗಾಂಧಿ ಹಂತಕ ಗೋಡ್ಸೆಯನ್ನು ಹೊಗಳಿ ಕೂಡ ಪೋಸ್ಟ್ ಹಾಕಲಾಗಿದೆ. "ಮಹಾತ್ಮನ ಕೊಂದ ಪುಣ್ಯಾತ್ಮ ಗೋಡ್ಸೆಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮದು ಗಾಂಧಿ ವಂಶವಲ್ಲ ಗೋಡ್ಸೆ ವಂಶ" ಎಂದು ಬರೆಯಲಾಗಿದೆ. ಸುರೇಶ್ ನ ಈ ಕಿಡಿಗೇಡಿ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

 

ಕೃಪೆ:vbnewsonline

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...