40ಷರ್ವಗಳಲ್ಲಿಯೇ ೫ವರ್ಷ ಪೂರ್ಣಗೊಳಿಸಿದ ಸಿದ್ಧರಾಮಯ್ಯ ಸರ್ಕಾರದ ದಾಖಲೆ

Source: sonews | By Staff Correspondent | Published on 28th March 2018, 5:46 PM | State News | Don't Miss |

ಬೆಂಗಳೂರು: ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿದ ರಾಜ್ಯದ ಕೊನೆಯ ಮುಖ್ಯಮಂತ್ರಿ ಡಿ. ದೇವರಾಜು ಅರಸು. ಅವರ ಬಳಿಕ 40 ವರ್ಷಗಳಲ್ಲಿ ಐದು ವರ್ಷಗಳ ಅಧಿಕಾರ ಅವಧಿ ಪೂರ್ಣಗೊಳಿಸುತ್ತಿರುವವರು ಸಿದ್ದರಾಮಯ್ಯ. ಕರ್ನಾಟಕದ ವಿಧಾನ ಸಭಾ ಚುನಾವಣೆ ಮೇ 12ಕ್ಕೆ ನಡೆಯಲಿದ್ದು, ಸಿದ್ದರಾಮಯ್ಯ ಅವರ 5 ವರ್ಷಗಳ ಅಧಿಕಾರ ಅವಧಿ ಮೇ 28ರಂದು ಪೂರ್ಣಗೊಳ್ಳಲಿದೆ.

ಸಿದ್ದರಾಮಯ್ಯ 2013 ಮೇಯಲ್ಲಿ ಅಧಿಕಾರ ಸ್ವೀಕರಿಸಿದ್ದರು. ಮೇ 28ರಂದು ಅವರು 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಲಿದ್ದಾರೆ. ಇದರೊಂದಿಗೆ ಕಳೆದ 40 ವರ್ಷಗಳಲ್ಲಿ 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಿದ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.

ಸಿದ್ದರಾಮಯ್ಯ ಅವರಂತೆ ಮೈಸೂರಿನವರೇ ಆಗಿದ್ದ ಡಿ. ದೇವರಾಜು ಅರಸು ಅವರು 5 ವರ್ಷದ ಅಧಿಕಾರ ಅವಧಿ ಪೂರ್ಣಗೊಳಿಸಿದ ರಾಜ್ಯದ ಕೊನೆಯ ಮುಖ್ಯಮಂತ್ರಿ. ಅವರು 1972ರಿಂದ 1977ರ ವರೆಗೆ ಅಧಿಕಾರ ನಡೆಸಿದ್ದರು. ಉಚ್ಛಾಟನೆಗೊಂಡ ಹಿನ್ನೆಲೆಯಲ್ಲಿ ಅರಸು ಅವರು 1980ರಲ್ಲಿ ರಾಜೀನಾಮೆ ನೀಡಿದ ಕಾರಣ ಅವರ ಎರಡನೇ ಹಂತದ ಅಧಿಕಾರಾವಧಿ ಕಡಿತಗೊಂಡಿತ್ತು. ಅವರ ಉತ್ತರಾಧಿಕಾರಿಯಾಗಿ ಆರ್. ಗುಂಡುರಾವ್ ಅಧಿಕಾರ ಸ್ವೀಕರಿಸಿದ್ದರು.

ಕರ್ನಾಟಕದ ಮುಖ್ಯಮಂತ್ರಿಗಳ ಹೆಸರನ್ನು ಈ ಕೆಳಗಿನ ಪಟ್ಟಿಯಲ್ಲಿ ಅನುಕ್ರಮವಾಗಿ ನೀಡಲಾಗಿದೆ. ಈ ಅವಧಿಯಲ್ಲಿ ಕರ್ನಾಟಕ 19 ಸರಕಾರಗಳನ್ನು ಕಂಡಿದೆ. ನಾಲ್ಕು ಅವಧಿಗಳಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒಳಗಾಗಿದೆ. ಈ ಪಟ್ಟಿಯಲ್ಲಿ ಹೊರಗುಳಿಯುವ ಏಕೈಕ ಮುಖ್ಯಮಂತ್ರಿ ಎಂದರೆ ಎಂಸ್.ಎಂ. ಕೃಷ್ಣ. ಅವರು ಸ್ಥಿರ ಸರಕಾರವನ್ನು (1999-2004) ಮುಂದುವರಿಸುತ್ತಿದ್ದರೂ ಆಡಳಿತ ಅವಧಿ ಮುಗಿಯುವುದಕ್ಕೆ ಐದು ತಿಂಗಳು ಮುನ್ನವೇ ಚುನಾವಣೆ ಎದುರಿಸಲು ನಿರ್ಧರಿಸಿದ್ದರು.

 

►ಆರ್. ಗುಂಡುರಾವ್: ಜನವರಿ 1980 - ಜನವರಿ 1983

►ರಾಮಕೃಷ್ಣ ಹೆಗ್ಡೆ: 1983-1988 (ಮೂರು ಬಾರಿ)

►ಎಸ್.ಆರ್. ಬೊಮ್ಮಾಯಿ: ಆಗಸ್ಟ್ 1988 - ಎಪ್ರಿಲ್ 1989

►ವೀರೇಂದ್ರ ಪಾಟೀಲ್: ನವೆಂಬರ್ 1989 - ಅಕ್ಟೋಬರ್ 1990

►ಎಸ್. ಬಂಗಾರಪ್ಪ: ಅಕ್ಟೋಬರ್ 1990 - ನವೆಂಬರ್ 1992

►ವೀರಪ್ಪ ಮೊಯ್ಲಿ: ನವೆಂಬರ್ 1992 - ಡಿಸೆಂಬರ್ 1994

►ಎಚ್.ಡಿ. ದೇವೆಗೌಡ: ಡಿಸೆಂಬರ್ 1994 - ಮೇ 1996

►ಜೆ.ಎಚ್. ಪಟೇಲ್: ಮೇ 1996 - ಅಕ್ಟೋಬರ್ 1999

►ಎಸ್.ಎಂ. ಕೃಷ್ಣ: 1999 - 2004

►ಧರಂ ಸಿಂಗ್: ಮೇ 2004 - ಜನವರಿ 2006

►ಎಚ್.ಡಿ. ಕುಮಾರಸ್ವಾಮಿ: ಪೆಬ್ರವರಿ 2006-ಅಕ್ಟೋಬರ್ 2007

►ರಾಷ್ಟ್ರಪತಿ ಆಳ್ವಿಕೆ: ನವೆಂಬರ್ 2007 - ಮೇ 2008

►ಬಿ.ಎಸ್. ಯಡಿಯೂರಪ್ಪ: ಮೇ 2008 - ಜುಲೈ 2011

►ಡಿ.ವಿ. ಸದಾನಂದ ಗೌಡ: ಅಗಸ್ಟ್ 2011- ಜುಲೈ 2012

►ಜಗದೀಶ್ ಶೆಟ್ಟರ್: ಜುಲೈ 2012 - ಮೇ 2013

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...