ಕಂದಾಯ ಸಚಿವ ಪ್ರವಾಸ ಆರ್.ವಿ.ಡಿ. ಮಳೆಹಾನಿಗೊಳಗಾದ ಪ್ರದೇಶಕ್ಕೆ ಬೇಟಿ 

Source: sonews | By sub editor | Published on 18th August 2018, 10:54 PM | Coastal News | Don't Miss |

ಬೆಂಗಳೂರು :ಮಳೆಯಿಂದ ತೀವ್ರ ಹಾನಿಗೊಳಗಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಆಗಸ್ಟ್ 19ರಂದು (ಭಾನುವಾರ) ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ.

ಅಲ್ಲದೆ, ಬರದ ಛಾಯೆಗೆ ಸಿಲುಕಿರುವ ಕೋಲಾರ ಜಿಲ್ಲೆಗೆ ಸಚಿವರು ಆಗಸ್ಟ್ 21ರ ಮಂಗಳವಾರದಂದು ಪ್ರವಾಸ ಕೈಗೊಳ್ಳಲಿದ್ದಾರೆ.     

19ರಂದು ಬೆಳಗ್ಗೆ 9.30ಕ್ಕೆ ಮಂಗಳೂರನ್ನು ತಲುಪಲಿರುವ ಕಂದಾಯ ಸಚಿವರು, ಸಾರ್ವಜನಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬಳಿಕ, ಸೂಕ್ತ ಪರಿಹಾರೋಪಾಯಗಳಿಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. 

ಉಡುಪಿ ಜಿಲ್ಲೆಯಲ್ಲಿ ಇದೇ ರೀತಿಯ ಸಭೆ ಮಧ್ಯಾಹ್ನ 2.30ಕ್ಕೆ ನಡೆಯಲಿದೆ. 21ರಂದು ಕೋಲಾರದಲ್ಲಿ ನಿಗದಿಯಾಗಿರುವ ಕಾರ್ಯಕ್ರಮದಲ್ಲಿ ಸಚಿವ ದೇಶಪಾಂಡೆಯವರು, ಕೋಲಾರ ಮತ್ತು ಚಿಕ್ಕಬಳ್ಳಾಫುರ ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂದಿನ ಕ್ರಮ ಮತ್ತು ಪರ್ಯಾಯ ಯೋಜನೆಗಳ ಬಗ್ಗೆ ಚರ್ಚಿಸಲಿದ್ದಾರೆ.

Read These Next