ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ನಿಂದ ಪ್ರತಿಭಾಪುರಸ್ಕಾರ

Source: sonews | By Staff Correspondent | Published on 8th September 2018, 10:58 PM | State News | Don't Miss |

ಬೆಂಗಳೂರು: ಸಮಾಜದಲ್ಲಿ ಶಿಕ್ಷಣವನ್ನು ವ್ಯಾಪಕಗೊಳಿಸಲು ಶ್ರಮಿಸುತ್ತಿರುವ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ ಕಾರ್ಯವು ನಿಜಕ್ಕು ಶ್ಲಾಘನೀಯವಾಗಿದೆ ಎಂದು ವೈಟ್‍ಫಿಲ್ಡ್ ಡಿಸಿಪಿ ಹಾಗೂ ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅಭಿಪ್ರಾಯ ವ್ಯಕ್ತಪಡಿಸಿದರು. 

ಅವರು ಇತ್ತೀಚೆಗೆ ಬಿಐಇ ವತಿಯಿಂದ ಇಲ್ಲಿಯ ಬಿಫ್ಟ್ ಹಾಲ್‍ನಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ಮಟ್ಟದ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಧಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 
ಮುಸ್ಲಿಮ್ ಸಮುದಾಯ ಇಂದು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯನ್ನು ಸಾಧಿಸಬೇಕಾಗಿದೆ. ಸತತ ಪರಿಶ್ರಮವಿದ್ದರೇ ಯಾವ ಕಾರ್ಯವು ಕೂಡಾ ಕಷ್ಟಕರವಲ್ಲ, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉಜ್ವಲ ಕನಸಿನೊಂದಿಗೆ ಮುನ್ನಡೆಯುವ ಅವಶ್ಯಕತೆ ಇದೆ. ನಮ್ಮ ರಾಜ್ಯದ ಕನ್ನಡ ಒಂದು ಸುಂದರ ಭಾಷೆಯಾಗಿದ್ದು ನಮ್ಮಲ್ಲಿ ಪ್ರತಿಯೊಬ್ಬರು  ಈ ಭಾಷೆಯಲ್ಲಿ ಹಿಡಿತವನ್ನು ಸಾಧಿಸಲು ಪ್ರಯತ್ನಿಸಬೇಕು. ಸಮಾಜದಲ್ಲಿನ ಕೆಡುಕುಗಳನ್ನು ತಡೆಯಲು ಕಾನೂನಿನ ಚೌಕಟ್ಟಿನಲ್ಲಿದ್ದುಕೊಂಡು ಎಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ ಎಂದರು. 

ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಸಯ್ಯದ್ ತನ್ನೀರ್ ಅಹ್ಮದ್ ‘ಇಂದು ಶಿಕ್ಷಣವು ವ್ಯಾಪಕಗೊಂಡಂತೆ ಸಮಸ್ಯೆಗಳು ಕೂಡಾ ಹೆಚ್ಚಾಗುತ್ತಿವೆ ಶಿಕ್ಷಣ ಮನುಷ್ಯನನ್ನು ಸಂಸ್ಕಾರ ಕಲಿಸಿಕೊಡುವ ಸಾಧನವಾಗಬೇಕು ಆದರೆ ಇಂದು ನಾವು ಕಲಿಸುತ್ತಿರುವ ಶಿಕ್ಷಣ ಕೇವಲ ಭೌತಿಕವಾದಿಗಳಾಗಿ ರೂಪಿಸುತ್ತಿರುವುದು ಖೇದಕರ ಸಂಗತಿಯಾಗಿದೆ’ ಎಂದರು. ಸಾಲಾರ್ ಉರ್ದು ಪತ್ರಿಕೆಯ ನಿಕಟ ಪೂರ್ವ ಸಂಪಾದ ಕೆ. ಇಫ್ತಿಕಾರ್ ಅಹ್ಮದ್ ಶರೀಫ ‘ತಮ್ಮ ಜೀವನವನ್ನು ಸಕಲ ಕೆಡುಕಿನಿಂದ ರಕ್ಷಿಸಬೇಕಾದರೆ ಇಂದಿನ ಯುವ ತಲೆಮಾರು ಧಾರ್ಮಿಕ ಶಿಕ್ಷಣದ ಗಳಿಕೆಗೆ ಆದ್ಯತೆಯನ್ನು ನೀಡಬೇಕು ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಬಿಐಇ ಕಳೆದ ಹದಿನೈದು ವರ್ಷದಿಂದ ಧಾರ್ಮಿಕ ಶಿಕ್ಷಣವನ್ನು ಸರಿಯಾದ ನೆಲೆಯಲ್ಲಿ ವ್ಯಾಪಕಗೊಳಿಸಲು ಪ್ರಯತ್ನಿಸುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯವಾಗಿದೆ’ ಎಂದರು. ಇನ್ನೋರ್ವ ಅತಿಥಿ ಜ. ಝಿಯಾವುಲ್ಲಾಹ್ ಕಾರ್ಯದರ್ಶಿ ಸಲ್‍ಸಬೀಲ್ ಎಜುಕೇಶನ್ ಟ್ರಸ್ಟ್ ಬೆಂಗಳೂರು ಸಂದರ್ಭೊಚಿವಾಗಿ ಮಾತನಾಡಿದರು. 

ಜ.ಇ.ಹಿಂದ್ ರಾಜ್ಯ ಕಾರ್ಯದರ್ಶಿ ಡಾ. ಮುಹಮ್ಮದ್ ಸಾದ್ ಬೆಲಗಾಮಿ ಅಧ್ಯಕ್ಷತೆ ವಹಿಸಿದ್ದರು. ಬೋರ್ಡ್‍ನ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಫಿಝ್ ಸಯ್ಯದ್ ಝುಬೇರ ಅಹ್ಮದ್ ಉಮ್ರಿ ಅವರ ಕುರ್‍ಆನ್ ಉದ್ಭೋದನೆಯಿಂದ ಕಾರ್ಯಕ್ರಮ ಆರಂಭಗೊಂಡಿತು.  

ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಮುಹಮ್ಮದ್ ಸಾಕಿಬ್ ನಿರೂಪಿಸಿ ಕೊನೆಯಲ್ಲಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಪ್ರಶಸ್ತಿಪತ್ರ ಹಾಗೂ ಡಿಪ್ಲೊಮಾ ಕೊರ್ಸ್‍ನಲ್ಲಿ ರ್ಯಾಂಕ್ ಗಳಿಸಿದ ಒಟ್ಟು 29 ವಿಧ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು. 

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...