ಬೆಂಗಳೂರು:ಥಲಸ್ಸೀಮಿಯ ರೋಗದಿಂದ ಬಳಲುತ್ತಿದ್ದ ಶ್ರೀಲಂಕಾದ ಮಕ್ಕಳಿಗೆ ಯಶಸ್ವಿ ಅಸ್ಥಿ ಮಜ್ಜೆ ವರ್ಗಾವಣೆ

Source: narayana | By Arshad Koppa | Published on 12th August 2017, 8:24 AM | State News | Special Report | Guest Editorial |

ಬೆಂಗಳೂರು, ಆಗಸ್ಟ್ 11, 2017:  ಜೀವಕ್ಕೆ ಬೆದರಿಕೆವೊಡ್ಡಿದ ಥಲಸ್ಸೀಮಿಯ ಮೇಜರ್ ತೊಂದರೆಯಿಂದ ಬಳಲುತ್ತಿದ್ದ ನಾಲ್ವರು ಶ್ರೀಲಂಕಾದ ಮಕ್ಕಳಿಗೆ ಸಂಬಂಧಿಯಲ್ಲದ ಅಸ್ಥಿ ಮಜ್ಜೆಯ ದಾನಿಯ ಮೂಲಕ ನಾರಾಯಣ ಹೆಲ್ತ್ ಸಿಟಿ ಚಿಕಿತ್ಸೆ ನೀಡಿದೆ. ಈ ರೋಗಿಗಳಿಗೆ ಹೊಂದುವಂತಹ ಅಸ್ಥಿ ಮಜ್ಜೆಯ ಜೀವಕೋಶಗಳನ್ನು ಜಗತ್ತಿನ ವಿವಿಧ ಕಡೆಗಳಿಂದ ವೈದ್ಯರು ಸಂಗ್ರಹಿಸಿ, ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ  ಕ್ಯಾನ್ಸರ್ ಸೆಂಟರ್‍ನಲ್ಲಿನ ಅಸ್ಥಿ ಮಜ್ಜೆ ಕಸಿ ಘಟಕದಲ್ಲಿ ಚಿಕಿತ್ಸೆಯನ್ನು ನಡೆಸಿದರು. ರೋಗಿಗಳಲ್ಲಿ 15 ತಿಂಗಳುಗಳ ವಯಸ್ಸಿನ ನೇತುಮಿ ಶೆನಾಯ ರಾಜಪಕ್ಷ ಬಮಲೂವೆ, 4 ವರ್ಷ ವಯಸ್ಸಿನ ಸುವಿನಿ ಉಮೇದ ಶ್ರೀಮಾಲಿ ಬಾಲಸೂರಿಯಾ, 5 ವರ್ಷ ವಯಸ್ಸಿನ ಪೂರ್ಣ ಮತ್ತು 10 ವರ್ಷ ವಯಸ್ಸಿನ ಮಿಥುನ್ ದಿಲೇಶ್ ವೆಲ್ಗಮಗೆ ಸೇರಿದ್ದರು.


 
ಥಲಸ್ಸೀಮಿಯ ಮೇಜರ್ ವಂಶವಾಹಿ ಆಧಾರಿತ ರಕ್ತದ ತೊಂದರೆಯಾಗಿದ್ದು ಇದರಲ್ಲಿ ದೇಹ ಸೂಕ್ತ ಸಂಖ್ಯೆಯ ಕೆಂಪು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗುತ್ತದೆ. ಜೊತೆಗೆ ಉತ್ಪಾದನೆಯಾದ ರಕ್ತ ಕಣಗಳು ಕೂಡ ಬೇಗನೇ ಮೃತಪಟ್ಟು ಅತ್ಯಂತ ಕಡಿಮೆ ಹಿಮೋಗ್ಲೊಬಿನ್ ಮಟ್ಟ ಉಂಟಾಗುತ್ತದೆ. ಈ ರೋಗಿಗಳಿಗೆ ಜೀವನದುದ್ದಕ್ಕೂ ರಕ್ತ ವರ್ಗಾವಣೆಯ ಅಗತ್ಯವಿರುತ್ತದೆ. ಅವರ ಜೀವನಾವಧಿ ತುಂಬಾ ಚಿಕ್ಕದಾಗಿರುತ್ತದೆ. ಸಂಕೀರ್ಣ ಪ್ರಕರಣಗಳನ್ನು ಎದುರಿಸುವಲ್ಲಿ ಶ್ರೀಲಂಕಾ ಹಲವಾರು ಸವಾಲುಗಳನ್ನು ಕಾಣುತ್ತಿದ್ದು ಅದರಲ್ಲೂ ಮುಖ್ಯವಾಗಿ ಯಾವುದೇ ಕುಟುಂಬದಲ್ಲಿನ ಹೊಂದಾಣಿಕೆಯಾಗುವಂತಹ ದಾನಿಗಳು ಇಲ್ಲದಿರುವಲ್ಲಿ ಮತ್ತಷ್ಟು ಸಮಸ್ಯೆ ಕಂಡುಬರುತ್ತಿದೆ. ನಾರಾಯಣ ಹೆಲ್ತ್ ಸಿಟಿ ಈ ಹಿನ್ನೆಲೆಯಲ್ಲಿ ಸಹಾಯ ಮಾಡಲು ಮುಂದಾಗಿತ್ತು. ಥಲಸ್ಸೀಮಿಯಾಗೆ ಸಾಮಾನ್ಯ ಚಿಕಿತ್ಸೆ ಎಂದರೆ ರಕ್ತ ವರ್ಗಾವಣೆ ಮಾಡುವುದು. ಆದರೆ, ಸತತವಾಗಿ ಹಲವಾರು ಬಾರಿ ರಕ್ತ ವರ್ಗಾವಣೆ ಮಾಡಿದ ನಂತರ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳಬಹುದು. ಅವುಗಳಲ್ಲಿ, ಅತಿಯಾದ ಕಬ್ಬಿಣದ ಅಂಶ ಉಳಿದುಕೊಳ್ಳುವುದು ಮತ್ತು  ರಕ್ತದಿಂದ ಉಂಟಾಗುವ ಸೋಂಕುಗಳು ಸೇರಿವೆ. ಅಸ್ಥಿ ಮಜ್ಜೆಯ ಕಸಿ ಚಿಕಿತ್ಸೆಯು ಆಯ್ಕೆಯಾಗಿದ್ದು, ಆದ್ದರಿಂದ ಶ್ರೀಲಂಕಾದ ನಾಲ್ಕು ಮಕ್ಕಳ ಕುಟುಂಬಗಳು ಈ ಚಿಕಿತ್ಸೆಯ ಮಾದರಿಯನ್ನು ಆರಿಸಿಕೊಳ್ಳಲು ನಿರ್ಧರಿಸಿದ್ದವು.
 
ನಾರಾಯಣ ಹೆಲ್ತ್ ಸಿಟಿಗೆ ಇದು ಒಂದು ಸವಾಲಾಗಿತ್ತು. ಈ ಮಕ್ಕಳ ಕುಟುಂಬಗಳಲ್ಲಿ ರೋಗಿಗಳಿಗೆ ಸರಿಹೊಂದುವ ಅಸ್ಥಿ ಮಜ್ಜೆಯ ದಾನಿಗಳನ್ನು ಹುಡುಕುವ ಹಿಂದಿನ ಪ್ರಯತ್ನಗಳು ವಿಫಲವಾಗಿದ್ದವು. ಅದೃಷ್ಟವಶಾತ್ ಎಲ್ಲಾ ನಾಲ್ಕು ಮಕ್ಕಳಿಗೆ ಸರಿಹೊಂದುವ ದಾನಿಗಳನ್ನು ಕಂಡುಹಿಡಿಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿತ್ತು. ಸುವಿನಿ ಮತ್ತು ಪೂರ್ಣ ಅವರಿಗೆ ದಾತ್ರಿ ರಿಜಿಸ್ಟ್ರಿ(ಭಾರತ)ಯಲ್ಲಿ ಜೀವ ಉಳಿಸುವವರು ಸಿಕ್ಕರೆ, ಉಳಿದ ಇಬ್ಬರಿಗೆ ಹೊಂದುವ ದಾನಿಗಳು ಜರ್ಮನ್ ರಿಜಿಸ್ಟ್ರಿ(ದಾನಿಯು ಲಂಡನ್‍ನಲ್ಲಿ)ನಲ್ಲಿ ಲಭಿಸಿದ್ದರು.
 
ಚಿಕಿತ್ಸೆ ಕುರಿತು ವಿವರಿಸಿದ ನಾರಾಯಣ ಹೆಲ್ತ್ ಸಿಟಿಯಲ್ಲಿನ ಮಕ್ಕಳ ರಕ್ತರೋಗ ಶಾಸ್ತ್ರ, ಕ್ಯಾನ್ಸರ್  ರೋಗಶಾಸ್ತ್ರ ಮತ್ತು ಅಸ್ಥಿ ಮಜ್ಜೆಯ ಕಸಿ ವಿಭಾಗದ ಮುಖ್ಯಸ್ಥರಾದ ಹಿರಿಯ ಸಲಹಾತಜ್ಞ ಡಾ. ಸುನಿಲ್ ಭಟ್ ಅವರು ಮಾತನಾಡಿ, ಎಲ್ಲಾ ನಾಲ್ಕು ಮಕ್ಕಳಿಗೆ ಸರಿಹೊಂದುವ ಮಾನವ ಲ್ಯೂಕೊಸೈಟ್ ಆಂಟಿಜೆನ್(ಎಚ್‍ಎಲ್‍ಎ) ದಾನಿಗಳನ್ನು ಕಂಡುಹಿಡಿಯುವುದಲ್ಲದೆ, ಅತ್ಯಂತ ದೊಡ್ಡ ಸವಾಲೆಂದರೆ ಸ್ವೀಕರಿಸುವವರ ವ್ಯವಸ್ಥೆ ಈ ಕಾಂಡಕೋಶಗÀಳನ್ನು ಪಡೆದುಕೊಳ್ಳುವ ಖಾತ್ರಿ ಮಾಡಿಕೊಳ್ಳುವುದಾಗಿತ್ತು. ಸಂಬಂಧಿತರಾದ ದಾನಿಗಳಲ್ಲಿರದಂತೆ ಸ್ವೀಕರಿಸುವವರು ಮತ್ತು ದಾನಿಗಳ ವಂಶವಾಹಿ ರಚನೆ ಮತ್ತು ರೋಗನಿರೋಧಕ ವ್ಯವಸ್ಥೆಗಳು ಬಹಳ ವ್ಯತ್ಯಾಸ ಹೊಂದಿರುತ್ತವೆ. ಆದ್ದರಿಂದ, ಕಸಿ ನಡೆಯುವಾಗ ಮತ್ತು ನಂತರದ ಸಮಯದಲ್ಲಿ ಸಂಕೀರ್ಣ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಬಹಳಷ್ಟು ಉನ್ನತಮಟ್ಟದ್ದಾಗಿರುತ್ತವೆ. ಅದೃಷ್ಟವಶಾತ್ ಈ ಮಕ್ಕಳ ಪ್ರಕರಣದಲ್ಲಿ ಅವರ ದೇಹಗಳು ಕಸಿ ಕ್ರಮಕ್ಕೆ ಬಹಳಷ್ಟು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದವು. ಇದರಿಂದ ಅವರನ್ನು ಥಲಸ್ಸೀಮಿಯ ಮೇಜರ್‍ನಿಂದ ಗುಣಪಡಿಸಲು ನಮಗೆ ಸಹಾಯವಾಯಿತು. ಶ್ರೀಲಂಕಾದಲ್ಲಿ ಸಂಬಂಧಿಗಳಲ್ಲದ ದಾನಿಗಳ ರಿಜಿಸ್ಟ್ರಿಗಳು ಇಲ್ಲವಾದ್ದರಿಂದ ಒಂದೇ ದೇಶದ ಹಿನ್ನೆಲೆ ಹೊಂದಿರುವವರಿಗಿಂತ ರೋಗಿಗೆ ಹೊಂದುವ ದಾನಿಗಳನ್ನು ಬೇರೆ ಕಡೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಶ್ರೀಲಂಕಾದಲ್ಲಿ ಅವರಿಗೆ ದಾನಿಗಳನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು’’ ಎಂದರು.
 
ಕಳೆದ  ವರ್ಷಗಳಲ್ಲಿ ಇಂತಹ ಪ್ರಕರಣಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರೋಗಿಗಳಿಗೆ ನಾರಾಯಣ ಹೆಲ್ತ್ ಸಿಟಿ ಅತ್ಯಂತ ಹೆಚ್ಚಿನ ಆಯ್ಕೆಯ ಆರೋಗ್ಯ ಚಿಕಿತ್ಸೆಯ ಗುರಿಯಾಗುವತ್ತ ಚಾಲನೆ ನೀಡಿದೆ. ತನ್ನ ಅತ್ಯಾಧುನಿಕ ಸೌಲಭ್ಯಗಳು ಮತ್ತು ಅನುಭವಿ ವೈದ್ಯರುಗಳೊಂದಿಗೆ ನಾರಾಯಣ ಹೆಲ್ತ್ ಸಿಟಿ ಹೃದಯ ರೋಗಗಳಿಗೆ ಉತ್ಕøಷ್ಟತೆಯ ಕೇಂದ್ರವಾಗಿದ್ದಲ್ಲದೆ, ತನಗಾಗಿ ಪ್ರತ್ಯೇಕವಾದ ಹೆಸರನ್ನು ಈಗಾಗಲೇ ಸಂಪಾದಿಸಿದೆ. ಜೊತೆಗೆ ಅಸ್ಥಿ ಮಜ್ಜೆ ಕಸಿ ಸೇರಿದಂತೆ ಹಲವಾರು ವೈದ್ಯಕೀಯ ಚಿಕಿತ್ಸೆಗಳಿಗೆ ಶಿಫಾರಸ್ಸು ಮಾಡುವಂತಹ ಮುಂಚೂಣಿಯ ಕೇಂದ್ರವಾಗಿದೆ.
 
ತನ್ನ ಹರ್ಷವನ್ನು ಹಂಚಿಕೊಂಡ ಸುವಿನಿ ಉಮೇದ ಶ್ರೀಮಾಲಿ ಬಾಲಸೂರಿಯಾ ಅವರ ತಂದೆಯಾದ ಹಾಗೂ ಥಲಸ್ಸೀಮಿಯ ಸೊಸೈಟಿಯ ಕಾರ್ಯದರ್ಶಿಯಾಗಿರುವ ಜಯಂತ ಬಾಲಸೂರಿಯಾ ಅವರು ಮಾತನಾಡಿ, ``ನಮ್ಮ ದೇಶದಲ್ಲಿ ಥಲಸ್ಸೀಮಿಯ ಮೇಜರ್ ವಾಸಿಯಾಗದಂತಹ ರೋಗ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಸಂಬಂಧಿತ ದಾನಿಗಳು ಇಲ್ಲದಂತಹ ಮಕ್ಕಳಲ್ಲಿ ಈ ಪರಿಗಣನೆ ಹೆಚ್ಚಾಗಿದೆ. ಮಕ್ಕಳು ರಕ್ತವರ್ಗಾವಣೆಯ ಮೇಲೆ ಆಧರಿಸಿರುತ್ತಾರೆ. ಇದರಿಂದ ಜೀವನದಲ್ಲಿ ಬಹಳ ಬೇಗ ತೊಂದರೆಗಳಿಗೆ ಗುರಿಯಾಗಿ ಮೃತಪಡುತ್ತಾರೆ. ನಾರಾಯಣ ಹೆಲ್ತ್ ಸಿಟಿಯಲ್ಲಿ ಅಸ್ಥಿ ಮಜ್ಜೆ ಕಸಿ ಬಗ್ಗೆ ಅದೃಷ್ಟವಶಾತ್ ನಾವು ಕೇಳಿದ್ದೆವು. ಈ ಅಪಾಯಕಾರಿ ರೋಗದಿಂದ ನನ್ನ ಮಗಳನ್ನು ಮಾತ್ರವಲ್ಲದೆ, ನನ್ನ ಸ್ನೇಹಿತರ ಮಕ್ಕಳನ್ನು ಗುಣಪಡಿಸಿರುವ ಡಾ. ಸುನಿಲ್ ಭಟ್ ಮತ್ತು ಸಂಪೂರ್ಣ ತಂಡಕ್ಕೆ ನಾವು ಕೃತಜ್ಞರಾಗಿದ್ದೇವೆ.’’ ಎಂದರು. ಜೊತೆಗೆ ಬಾಲಸೂರಿಯಾ ಅವರು ಶ್ರೀಲಂಕಾದಲ್ಲಿ ದಾನಿಗಳ ರಿಜಿಸ್ಟ್ರಿಯ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ, ಇದರಿಂದ ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ನೆರವಾಗುತ್ತದೆ ಎಂದರು.
 
ನಾರಾಯಣ ಹೆಲ್ತ್ ಸಿಟಿಯಲ್ಲಿನ ಮಜುಂದಾರ್ ಷಾ ಕ್ಯಾನ್ಸರ್ ಕೇಂದ್ರದ ಅಸ್ಥಿ ಮಜ್ಜೆ ಕಸಿ ಘಟಕ ವಿಶ್ವವ್ಯಾಪಿಯಾಗಿ ಮಾನ್ಯತೆ ಗಳಿಸಿದ್ದು ಆಟೋಲೋಗಸ್ ಮತ್ತು ಅಲೋಜಿನಿಕ್ ಸ್ಟೆಮ್ ಕಸಿಗೆ ಮುಂಚೂಣಿಯ ಶಿಫಾರಸ್ಸು ಹೊಂದಿರುವ ಕೇಂದ್ರವಾಗಿದೆ. ಈ ಘಟಕ 775ಕ್ಕೂ ಹೆಚ್ಚಿನ ಸ್ಟೆಮ್‍ಸೆಲ್ ಕಸಿ ಕ್ರಮಗಳನ್ನು ಕೈಗೊಂಡಿದ್ದು ಇವುಗಳಲ್ಲಿ ಸಂಕೀರ್ಣ ಕಸಿ ಕ್ರಮಗಳಾದ ಹ್ಯಾಪ್‍ಲೊ-ಐಡೆಂಟಿಕಲ್(ಅರ್ಧ ಹೊಂದುವ ಕಸಿಗಳು) ಮತ್ತು ಸಂಬಂಧಿತರನ್ನು ಹೊಂದಿರದ ಕಸಿ ಕ್ರಮಗಳು ಸೇರಿವೆ.
 
ನಾರಾಯಣ ಹೆಲ್ತ್ ಕುರಿತು :-
ವೈದ್ಯಕೀಯ ಜಗತ್ತು ನೀಡಬಹುದಾದ ಎಲ್ಲ ವಿಶೇಷವಾದ ಉನ್ನತ ಹಂತದ ಆರೈಕೆ ಸೌಲಭ್ಯಗಳನ್ನು ಒಳಗೊಂಡಿರುವ ನಾರಾಯಣ ಹೆಲ್ತ್ ಎಲ್ಲರಿಗೆ ಸರ್ವ ಚಿಕಿತ್ಸೆಯ ಏಕ ಕೇಂದ್ರವಾಗಿದೆ. ಡಾ. ದೇವಿ ಶೆಟ್ಟಿಯವರಿಂದ ಸ್ಥಾಪಿತವಾಗಿದ್ದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನಾರಾಯಣ ಹೆಲ್ತ್ ಗ್ರೂಪ್ ದೇಶದಲ್ಲಿ ಕಾರ್ಯಾಚರಣೆಯ ಹಾಸಿಗೆಯ ಲೆಕ್ಕಾಚಾರದ ಮೇಲೆ 2ನೇ ಅತ್ಯಂತ ದೊಡ್ಡದಾದ ಆರೋಗ್ಯ ಶುಶ್ರೂಷೆ ಪೂರೈಕಾ ಸಂಸ್ಥೆಯಾಗಿದೆ. ಬೆಂಗಳೂರಿನಲ್ಲಿ ನಾರಾಯಣ ಹೆಲ್ತ್‍ನಲ್ಲಿ ಮೊದಲ ಸೌಲಭ್ಯವನ್ನು 2000 ವರ್ಷದಲ್ಲಿ ಸರಾಸರಿ 225 ಕಾರ್ಯಾಚರಣೆಯಲ್ಲಿರುವ ಹಾಸಿಗೆಗಳೊಂದಿಗೆ ಸ್ಥಾಪಿಸಲಾಗಿತ್ತು. ಕಂಪನಿ ಇಂದು ಬಹುವಿಶೇಷತೆಯ ಮೂರನೇ ಉನ್ನತ ಹಂತದ ಮತ್ತು ಪ್ರಾಥಮಿಕ ಆರೋಗ್ಯ ಶುಶ್ರೂಷೆಯ ಸೌಲಭ್ಯಗಳನ್ನು 24 ಆಸ್ಪತ್ರೆಗಳು ಮತ್ತು 7 ಹೃದಯ ಕೇಂದ್ರಗಳು ಮತ್ತು ಕೇಮನ್ ದ್ವೀಪಗಳಲ್ಲಿನ ಒಂದು ಆಸ್ಪತ್ರೆ ಜಾಲದ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. 5600ಕ್ಕೂ ಹೆಚ್ಚಿನ ಕಾರ್ಯಾಚರಣೆಯಲ್ಲಿರುವ ಹಾಸಿಗೆಗಳನ್ನು ತನ್ನ ಎಲ್ಲಾ ಕೇಂದ್ರಗಳಲ್ಲಿ ಹೊಂದಿರುವುದರೊಂದಿಗೆ 6900 ಹಾಸಿಗೆಗಳನ್ನು ತಲುಪುವ ಸಾಮಥ್ರ್ಯವನ್ನು ಸಂಸ್ಥೆ ಹೊಂದಿದೆ. (ಹೆಚ್ಚಿನ ವಿವರಗಳಿಗೆ www.Narayanahealth.org  ರಲ್ಲಿ ಸಂದರ್ಶಿಸಿ.)
 
ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು :-
ಎನ್‍ಎಚ್ ಹೆಲ್ತ್ ಸಿಟಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿದ್ದು ಇದರಲ್ಲಿ ನಾರಾಯಣ ಹೃದಯ ವಿಜ್ಞಾನಗಳ ಸಂಸ್ಥೆ(ಎನ್‍ಐಸಿಎಸ್) ಸೇರಿದ್ದು ಇದು ಹೃದಯರೋಗಶಾಸ್ತ್ರ ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಉನ್ನತ ವಿಶೇಷತೆಯ ಆಸ್ಪತ್ರೆಯಾಗಿದೆ. ಜೊತೆಗೆ ಮಜುಂದಾರ್ ಷಾ ವೈದ್ಯಕೀಯ ಕೇಂದ್ರ (ಎಂಎಸ್‍ಎಂಸಿ) ಇಲ್ಲಿದ್ದು ಇದು ಕ್ಯಾನ್ಸರ್ ಆರೈಕೆ, ನರರೋಗ ಶಾಸ್ತ್ರ ಮತ್ತು ನರಸಂಬಂಧಿ ಶಸ್ತ್ರಚಿಕಿತ್ಸೆ, ಮೂತ್ರಪಿಂಡ ರೋಗಶಾಸ್ತ್ರ, ಮೂತ್ರರೋಗಶಾಸ್ತ್ರಗಳಿಗೆ ಕೇಂದ್ರವಾಗಿದೆ. ಜೊತೆಗೆ ದೇಶದಲ್ಲಿ ಅತ್ಯಂತ ದೊಡ್ಡದಾದ ಮೂಳೆ ಕೊಬ್ಬು ಕಸಿ ಘಟಕವನ್ನು ಹೊಂದಿದೆ. ಎನ್‍ಎಚ್ ಹೆಲ್ತ್ ಸಿಟಿ ಕಾಂಡಕೋಶ ಬ್ಯಾಂಕ್ ಅನ್ನು ಕೂಡ ನಡೆಸುತ್ತಿದೆ.
 
ಮಾಧ್ಯಮ ಸಂಪರ್ಕಗಳಿಗಾಗಿ:

ಆ್ಯಡ್‍ಫ್ಯಾಕ್ಟರ್ಸ್ ಪಿಆರ್.
ರೇನು ಪ್ರವೀಣ್ : 9742279654 [email protected]
ವಸಂತ್ ಕುಮಾರ್: 9880938950 /  [email protected]

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...