ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಲ್ಲಿ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಆರಂಭ 

Source: so english | By Arshad Koppa | Published on 29th July 2017, 1:14 PM | State News | Editorial | Technology | Don't Miss |

ಬೆಂಗಳೂರು, ಜುಲೈ 28, 2017; ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್‍ನಲ್ಲಿ ಪರಿಣಿತ ವೃತಿಪರ ವೈದ್ಯರು, ತರಬೇತಿಯುಕ್ತ ಶುಶ್ರೂಷಕಿಯರನ್ನು ಒಳಗೊಂಡ ನಿಯೋಜಿತ ಥೈರಾಯ್ಡ್ ಕ್ಲಿನಿಕ್ ಅನ್ನು ಇಂದು ಆರಂಭಿಸಲಾಯಿತು.


ಈ ಕ್ಲಿನಿಕ್‍ನಲ್ಲಿ ಬಹುಹಂತದ ಚಿಕಿತ್ಸೆ ಒದಗಿಸುವ ವೈದ್ಯರತಂಡ ಅಂದರೆ ಹೆಡ್ ಅಂಡ್ ನೆಕ್ ಆಂಕೊ ಸರ್ಜನ್ಸ್, ಎಂಡೊಕ್ರಿನಾಲಿಜಿಸ್ಟ್, ರೇಡಿಯಾಲಾಜಿಸ್ಟ್, ಪ್ಯಾಥಾಲಾಜಿಸ್ಟ್, ನ್ಯೂಕ್ಲಿಯರ್ ಫಿಜಿಸಿಯನ್ ಇದ್ದು, ಅದೇ ದಿನದಲ್ಲಿ ಥೈರಾಯ್ಡ್ ಕ್ಯಾನ್ಸರ್‍ಗೆ ಚಿಕಿತ್ಸೆಯ್ನು ಒದಗಿಸಲಿದೆ. ಇದು, ಈ ಕೇಂದ್ರದ ವಿಶೇಷವೂ ಹೌದು. ಈ ತಪಾಸಣೆಯ ಕೆಲ ಪರೀಕ್ಷೆಗಳಲ್ಲಿ ಎಂಡೊಕ್ರಿಮಿನಾಲಜಿ ಕ್ಲಿನಿಕಲ್ ತಪಾಸಣೆ, ಸಮಾಲೋಚನೆ, ಥೈರಾಯ್ಡ್ ಕಾರ್ಯನಿರ್ವಹಣಾ ಪರೀಕ್ಷೆ (ರಕ್ತ ಪರೀಕ್ಷೆ),ಯುಸಿಜಿ ಇದೆ. ಕ್ಲಿನಿಕ್‍ನ ಸೇವೆಗಾಗಿ ಆಸಕ್ತರು 186-02080208 ಸಂಖ್ಯೆಗೆ ಕರೆ ಮಾಡಬಹುದು.
ಥೈರಾಯ್ಡ್ ಪರಿಸ್ಥಿತಿಗೆ ಚಿಕಿತ್ಸೆ ಲಭ್ಯವಿದ್ದರೂ ಅನೇಕರು ಕಡೆಗಣಿಸುತ್ತಾರೆ. ಹೈಪೋಥೈರಾಡ್ಡ್ ಮತ್ತು ಹೈಪೋ ಥೈರಾಡ್ಡಿಸಂ ಇದ್ದರೆ ಅದು ಥೈರಾಯ್ಡ್ ಕ್ಯಾನ್ಸರ್ ಸಾಧ್ಯತೆಗಳನ್ನು ಹೆಚ್ಚಿಸುವುದಿಲ್ಲ.  ಈ ಮೊದಲೇ ಇದ್ದ ಥೈರಾಯ್ಡ್   ಅಂದರೆ ಗೊಯಿಟರ್ ಅಥವಾ ಇನ್‍ಫ್ಲೇಮೇಷನ್‍ನಿಂದ ಥೈರಾಯ್ಡ್ ಕ್ಯಾನ್ಸರ್ ವ್ಯಾಪಿಸುವ ಸಾಧ್ಯತೆಗಳು ಇವೆ. 
ವಿಶೇಷ ಕ್ಲಿನಿಕ್‍ನ ಅಗತ್ಯವನ್ನು ಪ್ರತಿಪಾದಿಸಿದ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್‍ನ ಆಂಕಾಲಜಿ ವಿಭಾಗದ ಮುಖ್ಯಸ್ಥ, ಆಂಕಾಲಜಿ ಮತ್ತು ಹಿರಿಯ ಕನ್ಸಲ್ಟಂಟ್ ಡಾ. ಮೋನಿ ಅಬ್ರಹ್ಮಾಂ ಕುರಿಯಕೊಸ್ ಅವರು, `ಥೈರಾಯ್ಡ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ನಗರಗಳಲ್ಲಿ ಬೆಂಗಳೂರೂ ಒಂದು. ವಾಸ್ತವವಾಗಿ ತಲೆ ಮತ್ತು ಕ್ಯಾನ್ಸರ್ ಪ್ರಕರಣಗಳು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಪಿಬಿಸಿಆರ್ ಪ್ರಕಾರ (ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿ ವರದಿ ಅನುಸಾರ) ಥೈರಾಯ್ಡ್‍ನ ಪ್ರಮಾಣ ಬಾಯಿ ಕ್ಯಾನ್ಸರ್‍ಗಳ ಪೈಕಿ ಶೇ 4ರಷ್ಟಿದೆ. ಈ ಹಿನ್ನಲೆಯಲ್ಲಿ ಇಂಥದೇ ಪ್ರಕರಣಗಳ ಚಿಕಿತ್ಸೆಗೆ ಕ್ಲಿನಿಕ್ ಆರಂಭಿಸ ಲಾಗಿದೆ. ಥೈರಾಯ್ಡ್ ಏರಿಳಿತಗಳಿಗೆ ಚಿಕಿತ್ಸೆ ಒದಗಿಸಲಿರುವ ಮೊದಲ ವಿಶೇಷ ಕ್ಲಿನಿಕ್ ಇದಾಗಿದೆ’ ಎಂದರು.
ಥೈರಾಯ್ಡ್ ಒಂದು ಪ್ರಮುಖ ಎಂಡೊಕ್ರೈನ್ ಗ್ಲ್ಯಾಡ್ ಆಗಿದ್ದು, ದೇಹದಲ್ಲಿ ಹಾರ್ಮೊನ್ ಉತ್ಪತ್ತಿ ಮಾಡಲಿದೆ. ಇದು, ದೇಹದಲ್ಲಿನ ಅನೇಕ ಮೆಟಾಬಾಲಿಕ್ ಚಟುವಟಿಕೆಗಳನ್ನು ನಿಯಂತ್ರಿಸಲಿದೆ. ಪ್ರಸ್ತುತ ಸೂಕ್ಷ್ಮ ಜೀವಿಶಾಸ್ತ್ರ ಮತ್ತು ಅನ್ವಯಿಕ ವಿಜ್ಞಾನ ಕುರಿತ ಅಂತರರಾಷ್ಟ್ರೀಯ ನಿಯತಕಾಲಿಕೆ ಅನುಸಾರ ವಿಶ್ವದಲ್ಲಿ 300 ಮಿಲಿಯನ್ ಜನರು ಇದರಿಂದ ಬಳಲುತ್ತಿದ್ದಾರೆ. ಇªರಲಿ 42 ಮಿಲಿಯನ್ ಜನರು ಭಾರತದಲ್ಲಿ ಇದ್ದಾರೆ ಎಂದರು. 
ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಕುರಿತು:
ಎನ್‍ಎಚ್ ಹೆಲ್ತ್ ಸಿಟಿ, ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಇದ್ದು, ನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸ್ (ಎನ್‍ಐಸಿಎಸ್), ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮಜುಂದಾರ್ ಶಾ ಮೆಡಿಕಲ್ ಸೆಂmರ್ (ಎಂಎಸ್‍ಎಂಸಿ), ಕ್ಯಾನ್ಸರ್ ಚಿಕಿತ್ಸೆಗಾಗಿ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ನರರೋಗ ಚಿಕಿತ್ಸೆ, ನೆಫ್ರೋಲಜಿ, ಯುರಾಲಜಿ ವಿಭಾಗಗಳಿವೆ. ಭಾರತದ ಅತಿದೊಡ್ಡ ಬೋನ್‍ಮಾರೊ ಕಸಿ ಘಟಕವನ್ನು ಆಸ್ಪತ್ರೆ ಹೊಂದಿದೆ. ಎನ್‍ಎಚ್ ಹೆಲ್ತ್ ಸಿಟಿ ಸ್ಟೆಮ್‍ಸೆಲ್ ಬ್ಯಾಂಕ್ ಅನ್ನು ನಿರ್ವಹಣೆ ಮಾಡುತ್ತಿದೆ. ಎನ್‍ಎಚ್ ಇದುವರೆಗೂ 600ಕ್ಕೂ ಅಧಿಕ ಬೋನ್ ಮಾರೋ ಕಸಿಚಿಕಿತ್ಸೆ ನೆರವೇರಿಸಿದೆ. ಎನ್‍ಎಚ್ ಹೆಲ್ ಸಿಟಿ ಸ್ಟೆಮ್ ಸೆಲ್ ಬ್ಯಾಂಕ್ ಅನ್ನು ನಿರ್ವಹಣೆ ಮಾಡುತ್ತಿದೆ.
ನಾರಾಯಣ ಹೆಲ್ತ್ ಕುರಿತು:
ವಿಶ್ವದರ್ಜೆ ಗುಣಮಟ್ಟದ ಸೂಪರ್ ಸ್ಪೆಷಾಲಿಟಿ ಸೌಲಭ್ಯದೊಂದಿಗೆ ನಾರಾಯಣ ಹೆಲ್ತ್, ಎಲ್ಲರಿಗೂ ಒಂದೇ ಚಾವಣಿಯಡಿ ಅಗತ್ಯ ಸೌಲಭ್ಯ ಕಲ್ಪಿಸಲಿದೆ. ಡಾ.ದೇವಿಶೆಟ್ಟಿ ಅವರು ಸ್ಥಾಪಿಸಿದ, ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ನಾರಾಯಣ ಹೆಲ್ತ್ ಗ್ರೂಪ್ ದೇಶz ಎರಡನೇ ಅತಿದೊಡ್ಡ ಆರೋಗ್ಯ ಸೇವಾ ಸಂಸ್ಥೆಯಾಗಿದೆ.
2000ರಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 225 ಹಾಸಿಗೆ ಸಾಮಥ್ರ್ಯದ ಸೌಲಭ್ಯದೊಂದಿಗೆ ಆರಂಭವಾಯಿತು. ಕಂಪೆನಿಯು ಇಂದು ವಿವಿಧೆಡೆ  ಆಸ್ಪತ್ರೆಗಳನ್ನು ನಿರ್ವಹಣೆ ಮಾಡುತ್ತಿದ್ದು, ಇದರಲ್ಲಿ  24 ಆಸ್ಪತ್ರೆಗಳು 7 ಹಾರ್ಟ್ ಸೆಂಟರ್‍ಗಳು ದೇಶಾದ್ಯಂತ ಇದ್ದು, 5900 ಹಾಸಿಗೆ ಸಾಮಥ್ರ್ಯದಿಂದ 7100 ಹಾಸಿಗೆಗಳ ಸಾಮಥ್ರ್ಯಕ್ಕೆ ವಿಸ್ತರಣೆಯಾಗಿದೆ. ಇದರಲ್ಲಿ ಪ್ರದೇಶಾನುಸಾರ ಆರೈಕೆ ಸೇವೆ, 7 ಹೃದಯ ಚಿಕಿತ್ಸಾ ಕೇಂದ್ರಗಳು ಸೇರಿವೆ). ವಿವರಗಳಿಗೆ ಭೇಟಿ ಕೊಡಿ: www.narayanahealth.org 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ರೇಣು ಪ್ರವೀಣ್ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |   9742279654    
ರಾಗಿಣಿ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |  9513339906
ವಸಂತ ಕುಮಾರ್ | ಆ್ಯಡ್ ಫ್ಯಾಕ್ಟರ್ಸ್ ಪಿಆರ್ |  9880938950
 

Read These Next

ಮತ್ತೆ ಶರಣರ ತಲೆದಂಡವಾಗದಿರಲಿ

‘‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕುಯ್ಯುವೆ, ನೋಡಯ್ಯ ಮಹಾದಾನಿ ...