ಕಾರವಾರ: ‘ಪ್ರೀತಿಯ ಬಾಪು (ಮಹಾತ್ಮಾ ಗಾಂಧಿ) ನೀನು ನನಗೆ ಸ್ಪೂರ್ತಿ’ ವಿಷಯದಲ್ಲಿ ರಾಷ್ಟ್ರೀಯ ಪತ್ರ ಬರಹ ಸ್ಪರ್ಧೆ

Source: varthabhavan | By Arshad Koppa | Published on 15th July 2017, 8:30 PM | National News | Special Report |

ಕಾರವಾರ ಜುಲೈ 15 : ಅಂಚೆ ಇಲಾಖೆಯಿಂದ 18 ವರ್ಷದೊಳಗಿನ ಮತ್ತು 18 ವರ್ಷ ಮೇಲ್ಪಟ್ಟ ವಯೋಮಾನದವರಿಗಾಗಿ ರಾಷ್ಟ್ರೀಯ ಪತ್ರ ಬರಹ ಸ್ಪರ್ಧೆಯನ್ನು ಆಯೋಜಿಸಲಾಗಿದೆ. 

ಸ್ಪರ್ಧೆಯ ವಿಷಯ ‘ಪ್ರೀತಿಯ ಬಾಪು (ಮಹಾತ್ಮಾ ಗಾಂಧಿ) ನೀನು ನನಗೆ ಸ್ಪೂರ್ತಿ’ (‘Dear Bapu, you inspire me’)ಆಗಿದ್ದು ಸ್ಪರ್ಧೆಯನ್ನು ಎರಡು ವಿಭಾಗಗಳಲ್ಲಿ ಅಂದರೆ ಇನ್‍ಲೆಂಡ್ ಪತ್ರಗಳಲ್ಲಿ 500 ಪದಗಳಲ್ಲಿ ಮತ್ತು ಎನವಲಪ್ ಪತ್ರಗಳಲ್ಲಿ 1000 ಪದಗಳಲ್ಲಿ ಪತ್ರ ಬರೆಯುವ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಿಂದ ವಿಜೇತರಿಗೆ 50 ಸಾವಿರ ಪ್ರಥಮ  25 ಸಾವಿರ ದ್ವೀತಿಯ, 10 ಸಾವಿರ ರಾಷ್ಟ್ರ ಮಟ್ಟದ ಬಹುಮಾನ  ನೀಡಲಾಗುವುದು. 

ಸ್ಪರ್ಧೆ ಪತ್ರಗಳನ್ನು ಆಗಸ್ಟ 15 ರೊಳಗಾಗಿ ಚಿಫ್ ಪೊಸ್ಟಮಾಸ್‍ರ್ ಜೆನೆರಲ್, ಕರ್ನಾಟಕ ಸರ್ಕಲ್, ಪ್ಯಾಲೆಸ್ ರೋಡ್, ಬೆಂಗಳೂರು 560001 ವಿಳಾಕ್ಕೆ ಕಳುಹಿಸಿಕೊಡಬೇಕು. ಹೆಚ್ಚಿನ ವಿವರಗಳಿಗಾಗಿ www.indiapost.gov.inನೋಡಲು ಅಂಚೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
 

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...