ಬಾಳೆಹೊನ್ನೂರು:ಅದ್ದೂರಿಯಾಗಿ  ಜಗದ್ಗುರುಗಳವರ ಪೀಠಾರೋಹಣ ಮತ್ತು ಜಾತ್ರೆ ಆಚರಿಸಲು ಸರ್ವ ಸಿದ್ದತೆ

Source: balanagoudra | By Arshad Koppa | Published on 24th February 2017, 2:10 PM | State News |

ಬಾಳೆಹೊನ್ನೂರು,ಶ್ರೀ ಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳವರ ಪೀಠಾರೋಹಣ ರಜತಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುವುದೆಂದು ಸ್ವಾಗತಸಮಿತಿ ಅಧ್ಯಕ್ಷ ಹೂವಿನಹಕ್ಲು ರಾಜಗೋಪಾಲ್ ಸ್ಪಷ್ಟಪಡಿಸಿದರು.


ಪಟ್ಟಣದ ಶ್ರೀ ರಂಭಾಪುರಿಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದು ಊರಿನಪ್ರತಿಷ್ಟೆ ರಾಜ್ಯದ ಗೌರವವನ್ನು ಎತ್ತಿ ಹಿಡಿದ ರಂಭಾಪುರಿ ಪೀಠ. ದೇಶದಲ್ಲೇ ಶಕ್ತಿ ಕೇಂದ್ರವಾಗಿದೆ.ಈಗಿನ ಪೀಠಾಧಿಪತಿಗಳಾದ ಶ್ರೀ ಸೋಮೇಶ್ವರ ಜಗದ್ಗುರುಗಳು ಕೇವಲ 25ವರ್ಷಗಳ ಅವಧಿಯಲ್ಲಿ ನೂರು ವರ್ಷಗಳ ಕಾಲಕ್ಕೆ ಬೇಕಾಗುವಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಲ್ಲದೇ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ಅಪಾರಕೋಡುಗೆ ನೀಡಿದ್ದಾರೆ.
ರಾಜ್ಯ,ದೇಶ ಹಾಗೂ ಹೋರದೇಶಗಳಲ್ಲಿ ಭಕ್ತರು ಹಾಗೂ ಶ್ರೀಪೀಠದ ಅಭಿಮಾನಿಗಳಿದ್ದು, ಈ ಸಂಧರ್ಭದಲ್ಲಿ ಗುರುಗಳ ಹಾಗೂ ಶ್ರೀಪೀಠದ ಸೇವೆ ಮಾಡುವುದರಿಂದ ಗ್ರಾಮಕ್ಕೆ ಒಳ್ಳೇಯದಾಗಲಿದೆ.ಈ ಕಾರ್ಯಕ್ರಮದ ಅರಿವುಮೂಡಿಸಲು ಪಟ್ಟಣವನ್ನು ಸಿಂಗರಿಸಿ ಅದ್ದೂರಿ ಕಾರ್ಯಕ್ರಮ ಮಾಡಲಾಗುವುದು ಭಕ್ತಾಧಿಗಳು ತನು ಮನ ಧನ ಸಹಕಾರನೀಡಿ ಸಹಕರಿಸಬೇಕೆಂದರು.
ಕಾರ್ಯಧ್ಯಕ್ಷ ಚನ್ನಗಿರಿಗೌಡ ಮಾತನಾಡಿ ಮಾಚ್ ್ 8ರಿಂದ ಜಾತ್ರಾಮಹೋತ್ಸವ ಪ್ರಾರಂಭವಾಗಲಿದ್ದು,9ರಂದು ರಂಭಾಪುರಿ ಶ್ರೀಗಳು ಹಾಗೂ ಕೇದಾರ ಶ್ರೀಗಳ ಅಡ್ಡಪಲ್ಲಕ್ಕಿ ಕಾರ್ಯಕ್ರಮನಡೆಯಲಿದೆ.ಬಂಡಿಮಠ ಸುಬ್ರಮಣ್ಯ ದೇವಸ್ಥಾನದಿಂದ ಪಟ್ಟಣದ ಮುಖ್ಯದ್ವಾರದ ಮೂಲಕ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದವರೆಗೆ ಶ್ರೀಗಳ ಅಡ್ಡಪಲ್ಲಕ್ಕಿ ತೆರಳಲಿದೆ ಸರ್ವಧರ್ಮಿಯರನ್ನು ಸೇರಿಕೊಂಡು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ತಿರ್ಮಾನಿಸಲಾಗಿದೆ ಎಂದರು.
ಬಿ.ಸಿ ಗೀತಾ ಮಾತನಾಡಿ ಪೀಠಾರೋಹಣದ 25ನೇ ವರ್ಷದ ಕಾರ್ಯಕ್ರಮವನ್ನು ಮಾಡಲು ಪ್ರತಿಯೋಬ್ಬರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸಾಹಿತ್ಯ ಪರಿಷ್ಯತ್‍ನ ಹೆಚ್.ಜಿ ಕೃಷ್ಣಮೂರ್ತಿ ಭಟ್ ಮಾತನಾಡಿ ವಿಶೇಷವಾಗಿ ಪ್ರಮುಖವೃತ್ತ ಹಾಗೂ ಮುಖ್ಯರಸ್ತೆಗಳಲ್ಲಿ ಚಪ್ಪರ,ತೋರಣ,ಸ್ವಾಗತಕಮಾನುಗಳಿಂದ ಸಿಂಗರಿಸಿ ಮನೆಯ ಹಬ್ಬದಂತೆ ಆಚರಿಸಲಾಗುವುದೆಂದರು.
ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಸಾನಿಧ್ಯವಹಿಸಿ ಮಾತನಾಡಿ ರಜತಮಹೋತ್ಸವ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಾಚ್ ್ 08ರಿಂದ ಮಾ.14ರವರೆಗೆ ನಡೆಯಲಿದೆ. 1ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಲಿದ್ದು,ಊಟ,ವಸತಿ,ಕುಡಿಯುವನೀರು,ವಿದ್ಯುತ್ ವ್ಯವಸ್ಥೆ,ಸಮುದಾಯಭವನ, ವಾಹನನಿಲುಗಡೆ ವ್ಯವಸ್ಥೆ ಮಾಡಲಾಗಿದೆ.ಭಕ್ತರಹಿತದೃಷ್ಟಿಯಿಂದ 4ಅಡಿಕಡೆ ಊಟದ ಹಾಲ್ ಗಳನ್ನು ತೆರೆಯಲಾಗಿದೆ.ಜಿಲ್ಲಾಡಳಿತ ನೇರವಿನಿಂದ ಶೌಚಾಲಯ,ಹಾಗೂ ಗ್ರಾ.ಪಂ ವತಿಯಿಂದ ಕುಡಿಯುವನೀರು,ಸ್ವಚ್ಚತೆ ದೃಷ್ಟಿಯಿಂದ ಅಲ್ಲಲ್ಲಿ ಕಸದತೋಟ್ಟಿಗಳನ್ನು ನಿರ್ಮಿಸಲಿದ್ದು,ವೈದ್ಯಕೀಯ,ಪೋಲಿಸ್,ವಿದ್ಯುತ್ ವ್ಯವಸ್ಥೆ ಮಾಡುವಂತೆ ಎಲ್ಲಾ ಇಲಾಖೆಯನ್ನು ಕೋರಲಾಗಿದೆ.ರಾಜ್ಯದ ವಿವಿಧೇಡೆಯಿಂದ ಸ್ವಯಂ ಸೇವಕರು ಹಾಗೂ ಊರಿನ ಸಂಘಸಂಸ್ಥೆಗಳು ಕಾರ್ಯನಿರ್ವಹಿಸಲಿವೆ.ಭಕ್ತರಿಗೆ ಹೋರೆ ಆಗದಂತೆ ಪೀಠಾರೋಹಣ ಹಾಗೂ ಜಾತ್ರಾಮಹೋತ್ಸವ ಎರಡು ಕಾರ್ಯಕ್ರಮವನ್ನು ಒಂದೆ ವೇದಿಕೆಯಡಿ ಮಾಡಲಾಗಿದೆ.
ಮಾರ್ಚ್ 10ರಂದು ಮಾಜಿಪ್ರಧಾನಿಗಳಾದ ಹೆಚ್.ಡಿ ದೇವೆಗೌಡ,ಮಾಜಿಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮತ್ತು ಮಾ.11ರಂದು ರಾಜ್ಯ ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಜಿ.ಪರಮೇಶ್ವರ್,ಸಚಿವ ಜಯಚಂದ್ರ,ವಿಧಾನಪರಿಷತ್ ಸದಸ್ಯ ಈಶ್ವರಪ್ಪ,ಹೆಚ್.ಕೆ ಪಾಟೀಲ್ ಸೇರಿದಂತೆ ಹಲವು ಗಣ್ಯರು,ಮಠಾಧಿಶರು ಕಾರ್ಯಕ್ರಮದಲ್ಲಿ ಪಾಲ್ಗೋಳಲಿದ್ದಾರೆ.ಸತತ 7ದಿನಗಳ ಕಾಲ ಹಲವು ಧಾರ್ಮಿಕ ಹಾಗೂ ಸಾಂಸ್ಕøತೀಕ ಕಾರ್ಯಕ್ರಮ ಜರುಗಲಿವೆ ಎಂದರು.
ಶ್ರೀ ಪೀಠದಲ್ಲಿ ಆರೋಹಣ ಕಾರ್ಯಕ್ರಮ ಮಾಡಿದಾಗ ಮಳೆ,ಬೆಳೆ,ಶಾಂತಿ,ಸಮೃದ್ದಿ,ಸಂಪತ್ತು ಬರಲಿದೆ.ಶ್ರೀ ಪೀಠದ ಚರಿತ್ರೆ ಇತಿಹಾಸದಲ್ಲಿ ಚಾರಿತ್ರಿಕವಾಗಿ ಉಳಿಯಲಿದೆ ಎಂದರು.
ಕಾರ್ಯದರ್ಶಿ ಹಿರಿಯಣ್ಣ,ತಾಲ್ಲೂಕು ಬಿ.ಜೆ.ಪಿ ವಕ್ತಾರ ಜಗದೀಶ್ಚಂದ್ರ, ,ಪ್ರಚಾರಸಮಿತಿಯ ಬಿ.ಆರ್ ನಾಗರಾಜ್,ಪರ್ತಕರ್ತರ ಸಂಘದ ಸತೀಶ್ ಜೈನ್ ಉಪಸ್ಥಿತರಿದ್ದರು

 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...