ಬಾಳೆಹೊನ್ನೂರು: ಚುಟುಕು ಸಾಹಿತ್ಯಕ್ಕೆ ಒಳ್ಳೆಯ ನೆಲೆ-ಬೆಲೆ ಇದೆ  : ಶ್ರೀ ರಂಭಾಪುರಿ ಜಗದ್ಗುರುಗಳು

Source: balanagoudra | By Arshad Koppa | Published on 20th February 2017, 8:03 AM | State News |

ರಂಭಾಪುರಿ ಪೀಠ (ಬಾಳೆಹೊನ್ನೂರು) - ಫೆಬ್ರುವರಿ-19: 
     ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಚುಟುಕು ಸಾಹಿತ್ಯ ಸಹಕಾರಿ. ಚುಟುಕು ಸಾಹಿತ್ಯಕ್ಕೆ ಒಳ್ಳೆಯ ನೆಲೆ-ಬೆಲೆ ಇದೆ ಎಂದು ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.       

ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಜಗದ್ಗುರು ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸಿರುವ ಪೂಜ್ಯ ಜಗದ್ಗುರುಗಳವರ ಗುರುವಂದನೆ ಮತ್ತು ಜಿಲ್ಲಾ ಚು.ಸಾ.ಪರಿಷತ್ತಿನ 20ನೆಯ ವರ್ಷದ ಸಂಭ್ರಮಾಚರಣೆ ಸಮಾವೇಶದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ರವಿವಾರ ಆರ್ಶೀವಚನ ನೀಡಿದರು. 
     ಚುಟುಕು ಸಾಹಿತ್ಯ ಇಂದು ಜನಪ್ರಿಯ ಸಾಹಿತ್ಯ ಪ್ರಕಾರವಾಗಿ ವಿಕಾಸಗೊಳ್ಳುತ್ತಿದೆ. ಅವಸರದ ಬದುಕಿನಲ್ಲಿ ಪರಿಣಾಮಕಾರಿಯಾಗಿ ಸಂದೇಶವನ್ನು ಜನಮನಕ್ಕೆ ತಲುಪಿಸುತ್ತಿದೆ. ಸಾಹಿತ್ಯ ಸಂಸ್ಕøತಿ ಸಂವರ್ಧಿಸಲಿ ಎಂಬುದು ನಮ್ಮ ಆಶಯ. ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಉತ್ತಮ ಸಾಹಿತ್ಯ, ಸಂಗೀತ, ಕಲೆ, ಸಹಕಾರಿ. ಪೀಠ ಪರಿಸರದಲ್ಲಿ ಹತ್ತು ಹಲವು ಚಿಂತನಾಪರ ಸಭೆ ಸಮಾರಂಭಗಳು ನಡೆದು ಬರುತ್ತಿವೆ. ಸತ್ವಯುತ ಸಮಾಜಕ್ಕೆ ಆದರ್ಶಸಾಹಿತ್ಯ ಸೃಷ್ಟಿ ಅವಶ್ಯಕ ಎಂದ ಜಗದ್ಗುರುಗಳವರು, ಮನುಷ್ಯ ಜೀವನದ ವಿಕಾಸ ಮತ್ತು ಉನ್ನತಿಗೆ ಸಂಸ್ಕಾರ ಸದ್ವಿಚಾರಗಳ ಪರಿಪಾಲನೆ ಅಗತ್ಯ ಎಂದರು.
     ಮಾನವ ಜೀವನದ ಉನ್ನತಿಗೆ ಧರ್ಮಾಚರಣೆ ಅಗತ್ಯ. ಅರಿವು ಮತ್ತು ಆಚಾರನ್ಮ್ನಂಟು ಮಾಡುವುದೇ ನಿಜವಾದ ಧರ್ಮ. ಸಾತ್ವಿಕ ಸಮೃದ್ಧ ಸಮಾಜ ಎಲ್ಲೆಡೆ ನಿರ್ಮಾಣಗೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕøತಿ ಪರಂಪರೆಯ ಜೊತೆಗೆ ರಾಷ್ಟ್ರಪ್ರಜ್ಞೆ, ಕರ್ತವ್ಯಶೀಲತೆ, ಸಹಬಾಳ್ವೆ, ಸೌಹಾರ್ದತೆ, ಶಾಂತಿ ಇವುಗಳನ್ನು ಹುಟ್ಟು ಹಾಕುವುದೆ ಎಲ್ಲರ ಗುರಿ. ಚುಟುಕು ಸಾಹಿತ್ಯ ಜನಮನದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ನಾಲ್ಕೈದು ಸಾಲುಗಳಷ್ಟು ಇದ್ದರೂ ಪುಟಗಟ್ಟಲೆ ವಿಶಾಲವಾದ ಅರ್ಥವನ್ನು ಹೊಂದಿ ಜೀವನದ ಉನ್ನತಿಗೆ ಕಾರಣವಾಗುತ್ತದೆ ಎಂದ ಶ್ರೀ ಜಗದ್ಗುರುಗಳು, 20 ವರ್ಷಗಳಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಯಜ್ಞಪುರುಷ ಭಟ್ಟರ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಸುತ್ತಿದೆ ಎಂದರು.
     ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ ದೊಡ್ಡ ದೊಡ್ಡ ಪವಿತ್ರ ಗ್ರಂಥಗಳನ್ನು ಒತ್ತಡದ ಬದುಕಿನಲ್ಲಿ ವ್ಯವಧಾನವಿಲ್ಲದೆ ಓದಲಾಗುತ್ತಿ¯್ಲ. ಚಿಕ್ಕ ಚುಟುಕುಗಳ ರೂಪದಲ್ಲಿದ್ದರೆ ಓದಬಹುದಾಗಿದೆ. ಕೊಂಡು ಓದುವ ಸಂಸ್ಕøತಿ ನಮ್ಮದಾಗಬೇಕೆಂದರು.
ಕೇಂದ್ರ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಸಂಚಾಲಕ ಎಮ್.ಜಿ.ಆರ್ ಅರಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಲ್ಕು ಸಾಲುಗಳಲ್ಲಿ ಜೀವನ ಸಾರವನ್ನು ಬಿಂಬಿಸುವ ಚುಟುಕುಗಳು ತಿಳಿವಳಿಕೆಯ ಮಂತ್ರಗಳೆಂದರು. 
ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಪ್ರಭುಲಿಂಗಶಾಸ್ತ್ರಿ ಮಾತನಾಡಿ ಆರಂಭದಲ್ಲಿ  ಫಿಲ್ಲರ್‍ಗಳಾಗಿ ಪತ್ರಿಕೆಗಳಲ್ಲಿ ಬಳಕೆಯಾಗುತ್ತಿದ್ದ ಚುಟುಕುಗಳು ಇಂದು ನಿಯತ ಕಾಲಿಕೆಗಳ ಅವಿಭಾಜ್ಯ ಅಂಗಗಳಾಗಿವೆ ಎಂದರು. ಮೈಸೂರಿನ ಶ್ರೀಚುಟುಕುಸಿರಿ ರತ್ನ ಹಾಲಪ್ಪಗೌಡ ಸಮಾವೇಶ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಬಿ. ತಿಪ್ಪೇರುದ್ರಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ. ಎಮ್. ರಾಜಶೇಖರ, ಹುಬ್ಬಳ್ಳಿ ಬಯೋ ಕ್ಲಬ್ ಮುಖ್ಯಸ್ಥೆ ಶಶಿಕಲಾ ಶೀರಿ ಮಾತನಾಡಿದರು 
     ದೊಡ್ಡಗುಣ  ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಪ್ರದೀಪ ಪಟೇಲ, ಮಹೇಶ ಆಚಾರ್ಯ, ರಾಜಪ್ಪಗೌಡ, ವಿ.ವಿ.ಶೀರಿ ವೇದಿಕೆಯಲ್ಲಿದ್ದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತು ಅಧ್ಯಕ್ಷ ಯಜ್ಞಪುರುಷ ಭಟ್ ಪ್ರಾಸ್ತಾವಿಸಿದರು. ಗದಿಗಯ್ಯ ಹಿರೇಮಠ ವೇದಘೋಷ ಮಾಡಿದರು ಹಿರಿಯಣ್ಣ ಸ್ವಾಗತಿಸಿ ವಂದಿಸಿದರು. ರಾಘವೇಂದ್ರ ಕಿಗ್ಗಾ ಪ್ರಾರ್ಥಿಸಿದರು.. ವೀರೇಶ ಕುಲಕಣ ್ ಕಾರ್ಯಕ್ರಮ ನಿರೂಪಿಸಿದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...