ಬಾಳೆಹೊನ್ನೂರು:ಧಾರ್ಮಿಕ ಮನೋಭಾವನೆ ಬೆಳೆಸುವಲ್ಲಿ ಶಿವಾಚಾರ್ಯರ ಪಾತ್ರ ಹಿರಿದು 

Source: balanagoudra | By Arshad Koppa | Published on 18th January 2017, 11:41 PM | State News |

ರಂಭಾಪುರಿ ಪೀಠ (ಬಾಳೆಹೊನ್ನೂರು) -ಜನೇವರಿ-18: ಆಧುನಿಕ ಯುಗದಲ್ಲಿ ಜನರಲ್ಲಿ ಧಾರ್ಮಿಕ ಮನೋಭಾವನೆ ಬೆಳೆಸುವಲ್ಲಿ ಶಿವಾಚಾರ್ಯರ ಪಾತ್ರ ಹಿರಿದಾಗಿದೆ. ಮಳಖೇಡದ ಶ್ರೀ ಷ|| ಬ್ರ|| ಗಂಗಾಧರ ಶಿವಾಚಾರ್ಯ ಸ್ವಾಮಿಗಳು ತಮ್ಮ 86ನೇ ವಯಸ್ಸಿನಲ್ಲಿ ಮನೆ ಮನಗಳಲ್ಲಿ ಧಾರ್ಮಿಕತೆ ಬೆಳೆಸುವಲ್ಲಿ ಶ್ರಮಿಸುತ್ತಿರುವುದು ಸಂತಸದ ಸಂಗತಿ ಎಂದು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 
    ಅವರು ಶ್ರೀ ರಂಭಾಪುರಿ ಪೀಠದಲ್ಲಿ ತಮ್ಮ ಪೀಠಾರೋಹಣ ರಜತ ಮಹೋತ್ಸವದ ನಿಮಿತ್ಯ 3ನೇ ದಿನ ಜರುಗಿದ  ಅತಿರುದ್ರ ಹಾಗೂ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶ್ರೀ ಗಂಗಾಧರ ಶಿವಾಚಾರ್ಯರ 86ನೇ ವರ್ಷದ ಜನ್ಮ ದಿನದ ಸಂದರ್ಭದಲ್ಲಿ ಅವರಿಗೆ ಆಶೀರ್ವದಿಸಿ ಆಶೀರ್ವಚನ ನೀಡುತ್ತಿದ್ದರು.
    ಕಲಬುರ್ಗಿ ಭಾಗದಲ್ಲಿ ಧರ್ಮದ ಕಂಪನ್ನು ಪಸರಿಸುತ್ತಿರುವ ಗಂಗಾಧರ ಶಿವಾಚಾರ್ಯರು ಶ್ರೀ ರಂಭಾಪುರಿ  ವೀರಗಂಗಾಧರ ಜಗದ್ಗುರುಗಳವರಿಂದ ಆಶೀರ್ವದಿಸಲ್ಪಟ್ಟವರು. 1992ರಲ್ಲಿ ತಾವು ಪೀಠಾರೋಹಣ ಮಾಡಿದ ನಂತರ ಪ್ರಪ್ರಥಮವಾಗಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಗಂಗಾಧರ ಶ್ರೀಗಳು ಶಿಷ್ಯ ಬಳಗದೊಡಗೂಡಿ ಮೂಲ ಗುರು ಪೀಠವಾದ ರಂಭಾಪುರಿ ಕ್ಷೇತ್ರದಲ್ಲಿ ಅವರ ಜನ್ಮ ದಿನ ಆಚರಿಸಿಕೊಳ್ಳುತ್ತಿರುವುದು ತಮಗೆ ಸಂತಸ ತಂದಿದೆ ಎಂದರು. 
     ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾಮಠದ ರೇಣುಕ ಶಿವಾಚಾರ್ಯರು ಮಾತನಾಡಿ ಗಂಗಾಧರ ಶಿವಾಚಾರ್ಯರು ಸದಾ ತಮ್ಮ ಪೂಜೆ, ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡವರು. ಯುವ ಶಿವಾಚಾರ್ಯರಿಗೆ ಇವರು ಮಾದರಿಯಾಗಿದ್ದಾರೆ ಎಂದರು.
ಅತಿರುದ್ರ ಪೂಜಾ ಸಮಾರಂಭದ ನೇತೃತ್ವವನ್ನು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ವಹಿಸಿದ್ದರು. 
    ಸಮಾರಂಭದಲ್ಲಿ ಸುಳ್ಳ, ಮಳಲಿ, ಸುಲ್ತಾನಪುರ, ಮಾದನಹಿಪ್ಪರಗಿ, ಹುಣಸಘಟ್ಟ, ಸಂಗೊಳ್ಳಿ ಮೊದಲಾದ  ಮಠಾಧೀಶರು ಪಾಲ್ಗೊಂಡಿದ್ದರು.    

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!