ಬಿಸಿಲಿನ ಝಳಕ್ಕೆ ಸತ್ತವರನ್ನು ಬಾಲಕೋಟ್ ವಾಯುದಾಳಿಯಲ್ಲಿ ಸತ್ತ ಉಗ್ರರೆಂದರು!

Source: sonews | By Staff Correspondent | Published on 8th March 2019, 6:05 PM | National News | Special Report | Don't Miss |

ಹೊಸದಿಲ್ಲಿ: ಸಾಮೂಹಿಕ ಸಮಾಧಿಗಳು ಹಾಗೂ ಬಿಳಿ ಬಟ್ಟೆಗಳಿಂದ ಮುಚ್ಚಲಾಗಿರುವ ಮೃತದೇಹಗಳ ಛಾಯಾಚಿತ್ರಗಳು  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ನಡೆಸಿದ ವಾಯು ದಾಳಿಯ ಪರಿಣಾಮ ಇದೆಂದು ಬಿಂಬಿಸಲಾಗಿದೆ. “ಬಾಲಕೋಟ್ ವಾಯುದಾಳಿಗೆ ಪುರಾವೆ ಕೇಳುತ್ತಿರುವ ಹರಾಮಿ ನೇತಾಗಳಿಗೆ ಇದು ಪುರಾವೆಯಾಗಿದ್ದು ನೀವು ದೇಶಭ್ರಷ್ಟರು ನಿಮ್ಮ ಮುಖಕ್ಕೇ ಚಪ್ಪಲಿಯಲ್ಲಿ ಬಡಿದುಕೊಂಡು ನಿಮ್ಮ ಬಾಯ್ಮುಚ್ಚಿಕೊಂಡು ದೇಶದ ಸೇನಾ ಪಡೆಗಳನ್ನು ಅಪಹಾಸ್ಯ ಮಾಡದೇ ಇರಬೇಕು'' ಎಂದು ಒಂದು ಕಡೆಯಲ್ಲಿ ಬರೆಯಲಾಗಿದ್ದರೆ “ಇದು ಪುರಾವೆ, ನಿಮ್ಮ ಕನ್ನಡಕಗಳನ್ನು ಹಾಕಿ ಸರಿಯಾಗಿ ನೋಡಿ'' ಎಂದು ಇನ್ನೊಂದು ಕಡೆ ಬರೆಯಲಾಗಿದೆ.

ಚಿತ್ರ 1

ಸಾಮೂಹಿಕ ಸಮಾಧಿಗಾಗಿ ತೋಡಲಾಗಿದೆಯೆಂಬಂತೆ ತೋರುವ ಹೊಂಡದಲ್ಲಿ ಕಳೇಬರಗಳನ್ನು ತೋರಿಸುವ ಹಲವು ಛಾಯಾಚಿತ್ರಗಳು.

ಮೂಲ ಚಿತ್ರ ಗೆಟ್ಟಿ ಇಮೇಜಸ್ ನಲ್ಲಿ ಆಲ್ಟ್ ನ್ಯೂಸ್ ಗೆ ಸಿಕ್ಕಿದೆ. “ಕರಾಚಿಯಲ್ಲಿ ಜೂನ್ 26, 2015ರಂದು ಬಿಸಿಲಿನ ಝಳಕ್ಕೆ ಬಲಿಯಾದವರ ಪೈಕಿ ವಾರಿಸುದಾರರಿಲ್ಲದ 50 ಮೃತದೇಹಗಳನ್ನು ಪಾಕಿಸ್ತಾನಿ ಈಧಿ ಚ್ಯಾರಿಟಿ ಸ್ವಯಂಸೇವಕರು ದಫನ ಮಾಡುತ್ತಿರುವುದು'' ಎಂಬ ವಿವರಣೆ ಮೂಲ ಚಿತ್ರಕ್ಕೆ ನೀಡಲಾಗಿದೆ.

ಚಿತ್ರ 2.

ಬಿಳಿ ಬಟ್ಟೆಗಳಿಂದ ಮುಚ್ಚಲ್ಪಟ್ಟ ಹಲವು ಕಳೇಬರಗಳನ್ನು ಕೊಠಡಿಯಲ್ಲಿ ವ್ಯಕ್ತಿಯೊಬ್ಬ ಮುಚ್ಚುತ್ತಿರುವುದು ಕಾಣಿಸುತ್ತದೆ.

ಗೂಗಲ್ ನಲ್ಲಿ ರಿವರ್ಸ್ ಸರ್ಚ್ ಮಾಡಿದಾಗ ಮೂಲ ಫೋಟೋ ಗೆಟ್ಟಿ ಇಮೇಜಸ್ ನಲ್ಲಿ ಕಂಡು ಬಂತು. 2015ರಲ್ಲಿ ಪಾಕಿಸ್ತಾನದಲ್ಲಿ ಬಿಸಿಲಿನ ಝಳಕ್ಕೆ ನೂರಾರು ಮಂದಿ ಸಾವಿಗೀಡಾಗಿದ್ದ ಸಂದರ್ಭ ತೆಗೆಯಲಾದ ಚಿತ್ರವಿದು. ವಾರಸುದಾರರಿಲ್ಲದ ಈ ಬಿಳಿ ಬಟ್ಟೆಗಳಲ್ಲಿ ಮುಚ್ಚಲಾದ ಕಳೇಬರಗಳಿಗೆ ವ್ಯಕ್ತಿಯೊಬ್ಬ ಐಡೆಂಟಿಫಿಕೇಶನ್ ಪೇಪರ್ಸ್ ಅಂಟಿಸುತ್ತಿದ್ದಾನೆ.

ಚಿತ್ರ 3 ಹಾಗೂ 4

ಬಿಳಿ ಬಟ್ಟೆಯಲ್ಲಿ ಮುಚ್ಚಲ್ಪಟ್ಟ ಕಳೇಬರಗಳ ಎರಡು ಇತರ ಚಿತ್ರಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬಾಲಕೋಟ್ ವಾಯು ದಾಳಿಯಲ್ಲಿ ಮೃತಪಟ್ಟವರು ಎಂಬಂತೆ ಬಿಂಬಿಸಲಾಗಿದೆ.

ಈ ಚಿತ್ರಗಳೂ ಪಾಕಿಸ್ತಾನದಲ್ಲಿ 2015ರಲ್ಲಿ ಬಿಸಿಲಿನ ಝಳಕ್ಕೆ ಬಲಿಯಾದವರ  ಚಿತ್ರ. ಒಂದು ಚಿತ್ರ ಟೈಮ್ ಮ್ಯಾಗಝಿನ್ ನಲ್ಲಿ ಕಂಡಿದ್ದರೆ ಇನ್ನೊಂದು ಗೆಟ್ಟಿ ಇಮೇಜಸ್ ನಲ್ಲಿತ್ತು.

ಚಿತ್ರ 5

ಕೊನೆಯ ಚಿತ್ರದಲ್ಲಿ ಜನರು ಸತ್ತವರನ್ನು ಹೂಳುತ್ತಿರುವುದು ಕಾಣಿಸುತ್ತದೆ. ಈ ಚಿತ್ರದ ಮೂಲ ತಿಳಿಯುವುದು ಸಾಧ್ಯವಿಲ್ಲವಾದರೂ ಅದು ಅಂತರ್ಜಾಲದಲ್ಲಿ 2016ರಿಂದಿತ್ತು ಎಂದು ತಿಳಿದು ಬರುತ್ತದೆ.

ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ 2013ರಲ್ಲಿ ನ್ಯೂಯಾರ್ಕ್ ಟೈಮ್ಸ್ ಲೇಖನದ ಭಾಗವಾಗಿ ಇಂತಹುದೇ ಚಿತ್ರವಿತ್ತು. ಅಸೋಸಿಯೇಟೆಡ್ ಪ್ರೆಸ್ ಫೋಟೋ ಎಂದು ಲೇಖನದಲ್ಲಿ ಬರೆಯಲಾಗಿತ್ತಲ್ಲದೆ ``ಪಾಕಿಸ್ತಾನದ ಖ್ವೆಟ್ಟಾದಲ್ಲಿ  ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಸಾವಿಗೀಡಾದವರಿಗೆ ರವಿವಾರ ಫೆಬ್ರವರಿ 17, 2013ರಲ್ಲಿ ಪಾಕಿಸ್ತಾನೀಯರು ಸಾಮೂಹಿಕ ಸಮಾಧಿ ಸಿದ್ಧಪಡಿಸುತ್ತಿದ್ದಾರೆ,'' ಎಂದು ಬರೆಯಲಾಗಿದೆ.

ಈಗ ವೈರಲ್ ಆಗಿರುವ ಚಿತ್ರಕ್ಕೂ ಇದಕ್ಕೂ ಸಾಮ್ಯತೆಯಿದ್ದು, ಎರಡನ್ನೂ ವಿಭಿನ್ನ ಕೋನಗಳಿಂದ ತೆಗೆಯಲಾಗಿದೆ.

ಕೃಪೆ:varthabharati.in

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...