ವೈದ್ಯರ ಮುಷ್ಕರ ಮೂರು ಸಾವು: ಸಚಿವ ರಮೇಶ್ ಕುಮಾರ್ ಕ್ಷಮಾಪಣೆ

Source: sonews | By sub editor | Published on 15th November 2017, 12:05 AM | State News | Don't Miss |

ಬೆಳಗಾವಿ(ಸುವರ್ಣ ವಿಧಾನಸೌಧ): ವೈದ್ಯರು ನಡೆಸುತ್ತಿರುವ ಮುಷ್ಕರಿಂದಾಗಿ ಮೂರು ಸಾವುಗಳು ಸಂಭವಿಸಿವೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಅದಕ್ಕಾಗಿ, ಆರೋಗ್ಯ ಸಚಿವನಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಮೃತರ ಕುಟುಂಬಗಳ ಕ್ಷಮೆಯನ್ನು ಕೋರುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

 

 ಮಂಗಳವಾರ ವಿಧಾನಪರಿಷತ್ತಿನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಮಹಾಂತೇಶ್ ಕವಗಟಿಮಠ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಸೈದ್ಧಾಂತಿಕವಾಗಿ ನಾನು ಆರೆಸ್ಸೆಸ್ ನಂಬುವುದಿಲ್ಲ. ಆದರೆ, ಆರೆಸ್ಸೆಸ್ ಕಾರ್ಯಕರ್ತರು ಸರಳ ಜೀವನವನ್ನು ನಡೆಸುತ್ತಾರೆ ಎಂದರು.

ಈಶ್ವರಪ್ಪನವರು ಆರೆಸ್ಸೆಸ್ ಕಾರ್ಯಕರ್ತರ ಸಭೆಯನ್ನು ಕರೆಯಲಿ. ನಾನು ಮಾತನಾಡುತ್ತೇನೆ. ಅವರು ಮಾತನಾಡಲಿ. ಬಡವರು, ಸಾಮಾನ್ಯ ಜನರಿಗೆ ಈ ವಿಧೇಯಕದಿಂದ ತೊಂದರೆಯಾಗುತ್ತಿದೆ ಎಂದು ಆವರು ಹೇಳಿದರೇ, ಅದೇ ಕ್ಷಣ ನಾನು ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗುತ್ತೇನೆ ಎಂದು ರಮೇಶ್‌ಕುಮಾರ್ ಸವಾಲು ಹಾಕಿದರು.

ನಾನು ಹಕ್ಕುಚ್ಯುತಿ ಮಂಡನೆ ಮಾಡಬಹುದಿತ್ತು. ಆದರೆ, ಹಕ್ಕುಚ್ಯುತಿ ಎಂಬುದು ತನ್ನ ಘನತೆಯನ್ನು ಇತ್ತೀಚಿನ ದಿನಗಳಲ್ಲಿ ಕಳೆದುಕೊಂಡಿದೆ. ಎಲ್ಲ ಪಕ್ಷಗಳಲ್ಲಿಯೂ ಈ ವಿಧೇಯಕವನ್ನು ಸ್ವಾಗತಿಸುವವರು-ವಿರೋಧಿಸುವವರು ಇದ್ದಾರೆ ಎಂದು ರಮೇಶ್‌ಕುಮಾರ್ ಹೇಳಿದರು. 2007ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿಧೇಯಕಕ್ಕೆ ತಿದ್ದುಪಡಿ ತರಲು ಮುಂದಾದೆವು. ಈ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಖಾಸಗಿ ವೈದ್ಯರ ಪ್ರತಿನಿಧಿಗಳಿಗೆ ತಿದ್ದಪಡಿ ವಿಧೇಯಕದ ಕರಡು ಪ್ರತಿಯನ್ನು ನೀಡಲಾಗಿತ್ತು.

ಕರಡು ಪ್ರತಿ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ ಪ್ರತಿನಿಧಿಗಳು, ಆನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಈ ವಿಧೇಯಕ ಜಾರಿಗೆ ಬಂದಲ್ಲಿ ತುಂಬಾ ಸಮಸ್ಯೆಗಳು ಎದುರಾಗುತ್ತವೆ ಎಂಬ ರೀತಿಯಲ್ಲಿ ಬಿಂಬಿಸಲಾಯಿತು. ಇದರಿಂದಾಗಿ, ನನ್ನ ಒತ್ತಾಸೆಯಂತೆ ಈ ವಿಧೇಯಕದ ಪರಿಶೀಲನೆಗಾಗಿ ಜಂಟಿ ಸದನ ಸಮಿತಿಯನ್ನು ರಚಿಸಲಾಯಿತು.

ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ನನ್ನನ್ನು ಕೊಲೆಗಡುಕ, ಮಕ್ಕಳು ಇಲ್ಲದವರು ಎಂದು ಕರೆದಿದ್ದಾರೆ. ನನಗೀಗ 68 ವರ್ಷ ವಯಸ್ಸು, ಸ್ವಲ್ಪ ಮರುಳು ಹೆಚ್ಚಾಗಿದೆ. ಯಾವುದಾದರೂ ಕೊಲೆಯಾದರೆ ಅದಕ್ಕೆ ಸಂಬಂಧಿಸಿದಂತೆ ಯಾವ ಪೊಲೀಸ್ ಠಾಣೆ, ನ್ಯಾಯಾಲಯದಲ್ಲಿ ಪ್ರಕರಣ, ದೂರು ದಾಖಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ರಮೇಶ್‌ಕುಮಾರ್ ಹೇಳಿದರು.

 ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಮಗಳು ಅಮೆರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾಳೆ. ಮಗ ಸೈನ್ಯಕ್ಕೆ ಸೇರಬೇಕೆಂದು ನನ್ನ ಮಹದಾಸೆಯಾಗಿತ್ತು. ಆದರೆ, ಆತ ಬೇರೆ ತೀರ್ಮಾನವನ್ನು ಕೈಗೊಂಡು ವಿದೇಶದಲ್ಲಿದ್ದಾನೆ. ಮತ ಕೇಳುವವರು ನಾವು ಮಾನಗೆಟ್ಟವರು. ಆದರೆ, ನನ್ನ ಮಕ್ಕಳು ಮಾನಗೆಟ್ಟವರಲ್ಲ ಎಂದು ಅವರು ಹೇಳಿದರು. ನನ್ನ ವರ್ತನೆ, ಹಠದಿಂದ ಈ ಪ್ರಾಣಗಳು ಹೋಗಿದ್ದರೆ. ಅದಕ್ಕೆ ಇಲಾಖೆಯ ಮುಖ್ಯಸ್ಥನಾಗಿ ನಾನೇ ಹೊಣೆಗಾರರನಾಗುತ್ತೇನೆ. ಅಲ್ಲದೆ, ನಾನೇ ಕೊಲೆಗಡುಕನಾಗುತ್ತೇನೆ ಎಂದು ರಮೇಶ್‌ಕುಮಾರ್ ತಮ್ಮದೇ ಆದ ಶೈಲಿಯಲ್ಲಿ ಹೇಳಿದರು.

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...