ಬಜ್ಪೆ: 6ಮಂದಿ ಗೋಕಳ್ಳರ ಬಂಧನ,ಬಜಪೆ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ 

Source: so english | By Arshad Koppa | Published on 6th November 2016, 3:29 PM | Coastal News | Incidents |

ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು- ಕುಳವೂರು ಬೊಳಿಯ ಎಂಬಲ್ಲಿನ ಮನೆಯೊಂದರ ಕೊಟ್ಟಿಗೆಯಿಂದ ಮೂರು ದನಗಳನ್ನು ಕಳವುಗೈದಿದ್ದ 6 ಗೋಕಳ್ಳ ತಂಡವನ್ನು ಬಜಪೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.


ಪ್ರಕರಣದ ಪ್ರಮುಖ ಆರೋಪಿ ಕಾವೂರು ಶಾಂತಿ ನಗರ ನಿವಾಸಿ ನವಾಜ್, ಕೆ.ಸಿ ರೋಡ್ ಕೋಟೆಕಾರಿನ ಮಹಮ್ಮದ್ ಮನ್ಸೂರ್, ಬಂಟ್ವಾಳ ಪುದು ನಿವಾಸಿ ಇಮ್ರಾನ್, ಬಂಟ್ವಾಳ ತಾ. ಪುದು ಅಮ್ಮೆಮಾರ್‍ನ ಇಮ್ತಿಯಾಜ್(32), ಅರ್ಕುಳದ ಭಾತೀಷ್(30), ಕೆಸಿ ರೋಡ್‍ನ ಅನ್ಸರ್ ಅಲಿಯಾಸ್ ಅಬ್ಬಾಸ್(30) ಅವರುಗಳೇ ಬಂಧಿತ ಆರೋಪಿಗಳು.


ಸಂಶಯದ ಮೇರೆಗೆ ಸ್ವಿಪ್ಟ್ ಕಾರಲ್ಲಿ ಹೋಗುತ್ತಿದ್ದ ನವಾಜ್‍ನನ್ನು ಬಂಧಿಸಲು ಹೋಗಿದ್ದ ಪೊಲೀಸ್ ಸಿಬ್ಬಂದಿ ರಾಜಾರಾಮ್ ಎಂಬವರ ಮೇಲೆ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದ ಎನ್ನಲಾಗಿದೆ. ಕಾವೂರಿನಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣದಲ್ಲೂ ನವಾಜ್ ಓರ್ವ ಪ್ರಮುಖ ಆರೋಪಿ. ಇಮ್ರಾನ್ ಎಂಬಾತ ಸಕಲೇಶಪುರದಲ್ಲಿ ಲಾರಿ ಡ್ರೈವರ್ ಒಬ್ಬನ ಕೊಲೆ ಪ್ರಕರಣದ ಓರ್ವ ಪ್ರಮುಖ ಆರೋಪಿ.


ನಾಯಿಗಳಿಗೆ ಬ್ರೆಡ್, ಜಾನುವಾರಗಳಿಗೆ ಸ್ವೀಟ್:- 
ಪೂರ್ವ ನಿಗದಿಯಂತೆ ಕಳವಿಗೆ ಮುನ್ನ ನಾಯಿಗಳಿಗೆ ಬ್ರೆಡ್ ಹಾಕಿ, ದನಗಳಿಗೆ ಸ್ವೀಟ್ ತಿನ್ನಿಸಿ ತಕ್ಷಣ ಅಪಹರಿಸಿ ಅರ್ಕುಳದ ಮನೆಯೊಂದರ ಬಳಿ ಇರುವ ಕಸಾಯಿಖಾನೆಗೆ ಸಾಗಿಸುವುದು ಈ ತಂಡದ ಎಂದಿನ ಕಾಯಕ.

ಹಲವು ತಂಡಗಳ ಲಿಂಕ್: 
ವ್ಯವಸ್ಥಿತ ಸಂಚಿನೊಂದಿಗೆ ಗೋಕಳವು ಮಾಡುವ ಈ ಗುಂಪಿಗೆ ಇತರ ಕಡೆಗಳ ಪ್ರಮುಖ ಗೋಕಳವು ತಂಡಗಳೊಂದಿಗೂ ಲಿಂಕ್ ಇದ್ದೂ ಆ ಬಗ್ಗೆಯೂ ಪೊಲೀಸರಿಗೆ ಪ್ರಮುಖ ಮಾಹಿತಿಗಳು ಲಭಿಸಿದೆ ಎನ್ನಲಾಗಿದೆ.

ದನ ಕಲವು ಕೃತ್ಯಕ್ಕೆ ಬಳಸಿದ್ದ 3 ಕಾರು, 6 ಮೊಬೈಲ್, 2 ಕತ್ತಿ, 1 ತಲವಾರು, ರೂ. 5300 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ

ಬಿಜೆಪಿ- ಮನವಿ: ಇತ್ತೀಚಿನ ದನ ಕಳವು ಪ್ರಕರಣಗಳ ಆರೋಪಿಗಳನ್ನು ಶೀಘ್ರ ಬಂಧಿಸಿ ಸತತವಾಗಿ ಪ್ರಕರಣಗಳು ಮರುಕಳಿಸದಂತೆ ಕಡಿವಾಣ ಹಾಕಲೇಬೇಕೆಂದು ಆಗ್ರಹಿಸಿ ಸ್ಥಳೀಯ ಬಿಜೆಪಿ  ಪ್ರಮುಖರು ಬಜಪೆ ಪೊಲೀಸ್ ಠಾಣೆಗೆ ಮನವಿ ನೀಡಿದ್ದರು.

ಬಾಡಿಗೆ ಕಾರಲ್ಲಿ ಸಾಗಾಟ: 
ದನ ಕಳವಿಗೆ ಬಾಡಿಗೆ ಕಾರುಗಳನ್ನು ಬಳಸುವ ತಂಡ ಅದೇ ದಿನ ಅವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಾರೆ. ಇಂತಹವುದೇ ಪ್ರಕರಣಗಳಲ್ಲಿ ಹಲವು ಕಡೆಗಳಲ್ಲಿ ಇದೇ ತಂಡ ಭಾಗಿಯಾಗಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದು ಬಂದಿದೆ.

ಪೊಲೀಸ್ ಕಮೀಷನರ್ ಚಂದ್ರಶೇಖರ್ ಅವರ ನಿರ್ದೇಶನದಂತೆ ಡಿಸಿಪಿ ಶಾಂತರಾಜು, ಸಂಜೀವ ಪಾಟೀಲ್, ಎಸಿಪಿ ರಾಜೇಂದ್ರ ಅವರ ಮಾರ್ಗದರ್ಶನದಂತೆ ಬಜಪೆ ಇನ್ಸ್‍ಪೆಕ್ಟರ್ ಟಿಡಿ ನಾಗರಾಜ್, ಎಸ್ಸೈ ಸತೀಶ್, ಸಿಬ್ಬಂದಿಗಳಾದ ಜಯಾನಂದ, ಮಹಮ್ಮದ್, ರಾಮಚಂದ್ರ, ಚಂದ್ರಶೇಖರ, ಶಶಿಧರ, ಪ್ರೇಮ್, ಭರತ್ ಅವರನ್ನೊಳಗೊಂಡ ತಂಡ ಶಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.


 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...