ಬರಹೇನ್: ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ

Source: so english | By Arshad Koppa | Published on 10th September 2017, 12:21 PM | Gulf News |

ಪ್ರಗತಿಪರ ಚಿಂತಕಿ, ಸತ್ಯವನ್ನು ದೈರ್ಯದಿಂದ ಬರೆಯುವ ಅನುಭವಿ ಪತ್ರಕರ್ತೆ ಮತ್ತು ಲಂಕೇಶ್ ಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಅಮಾನವೀಯವಾಗಿ, ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಆತ್ಮಸಾಕ್ಷಿಯ ದೈರ್ಯಶಾಲಿ ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಸಾಯಿಸಲಾಗಿದೆ ಎಂಬ ಸುದ್ದಿಯು ಬಹಳ ಆಘಾತಕಾರಿ ಹಾಗೂ ಕಳವಳಕಾರಿ ಸಂಗತಿಯಾಗಿದೆ.

ಈ ಹತ್ಯೆಯು ಪ್ರಜಾಪ್ರಭುತ್ವದ ಹತ್ಯೆಯಾಗಿದೆ. ಇದು ನಮ್ಮ ದೇಶದಲ್ಲಿರುವ ಅಸಹಿಷ್ಣುತೆಯನ್ನು ತೋರಿಸುತ್ತದೆ.ಇದು ಅತ್ಯಂತ ಖಂಡನೀಯ ಮತ್ತು ನಾನು ಅತ್ಯಂತ ಕಟು ಶಬ್ದದಿಂದ ಖಂಡಿಸುತ್ತೇನೆ. ವೈಚಾರಿಕತೆಯನ್ನು ವೈಚಾರಿಕತೆಯಿಂದ ಎದುರಿಸಲಾಗದ ಹೇಡಿಗಳು ಎಸಗಿದಂತ ಕೃತ್ಯವಾಗಿದೆ. ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳಿಗಾಗಿ ಹೋರಾಡಿದ ಹಾಗೂ ಕೋಮುವಾದಿ ಫ್ಯಾಸಿಸಂ ವಿರುದ್ಧ ರಾಜಿಯಾಗದೆ ನಿಷ್ಟೆಯಿಂದ, ದೈರ್ಯದಿಂದ ಪಟ್ಟುಹಿಡಿದ ಹೋರಾಟಕ್ಕಾಗಿ ಅವರು ನೆನಪಿಸಿಕೊಳ್ಳುತ್ತಾರೆ. ಪತ್ರಿಕೋದ್ಯಮದಿಂದ ಕೋಮುವಾದವನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ಇದರಿಂದಾಗಿ ಅವರು ಹಲವಾರು ಕೋಮು ವಿಕೃತಿಯ ಮನೋಭಾವ ಇರುವವರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಹತ್ಯೆಯಿಂದ ಅವರ ವೈಚಾರಿಕತೆಯು ಯವತ್ತೂ ಸಾಯಲಾರದು. ಅದು ಹೆಚ್ಚು ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಬೆಳೆಯಲಿದೆ. ಈ ಹುತಾತ್ಮತೆಯು ಹೆಚ್ಚು ಹೆಚ್ಚು ಜನರನ್ನು ಅವರ ವೈಚಾರಿಕತೆ, ಸಾಮಾಜಿಕ ಕಳಕಳಿ ಮತ್ತು ಕೋಮುವಾದದ ವಿರುದ್ಧ ಹೋರಾಟಕ್ಕೆ ಆಕರ್ಷಿತರನ್ನಾಗಿ ಮಾಡಲಿದೆ.

ಅವರನ್ನು ಕೊಂದ ದುಷ್ಕರ್ಮಿಗಳ ಪರವಾಗಿ ಮಾತನಾಡುವ ಮತ್ತು ಅವರು ಮರಣ ಹೊಂದಿದ ನಂತರವು ನಿಂದಿಸುವುದು ಅಮಾನವೀಯ ಮತ್ತು ಹೀನ ಕೃತ್ಯವಾಗಿದೆ. ಇದರಿಂದ ಅಸಹಿಷ್ಣುತೆ ಮತ್ತು ಕೋಮು ವಿಕೃತಿಯ ದುಷ್ಟತನ ಎದ್ದು ಕಾಣುತ್ತದೆ. ಸರಕಾರವು ತನಿಖೆಯನ್ನು ತೀವ್ರಗೊಳಿಸಿ ಈ ದುಷ್ಕ್ರಿತ್ಯ ಎಸಗಿದವರನ್ನು ಹಾಗೂ ಇದರ ಹಿಂದಿರುವ ಕಾಣದ ಕೈಗಳನ್ನು ಕಾನೂನಿನ ಮತ್ತು ಜನರ ಮುಂದೆ ತರಬೇಕಾಗಿ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ ಕರ್ನಾಟಕ ಘಟಕವು ಈ ಮೂಲಕ ಸರಕಾರವನ್ನು ಒತ್ತಾಯಿಸುತ್ತಿದ್ದೇವೆ. ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಾಂತ್ವನವನ್ನು ವ್ಯಕ್ತಪಡಿಸುತ್ತಿದ್ದೇವೆ ಎಂದು ತಿಳಿಸುತ್ತಿದ್ದೇವೆ.

ಅತಾವುಲ್ಲ ಸುಳ್ಯ, ಪ್ರಧಾನ ಕಾರ್ಯದರ್ಶಿ  - ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಂ ಕರ್ನಾಟಕ ಘಟಕ 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.