ಬಹರೈನ್: ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಇದರ ವತಿಯಿಂದ "ಐಕ್ಯತಾ ದಿನ" ಆಚರಣೆ

Source: bahrain | By Arshad Koppa | Published on 21st February 2017, 8:00 AM | Gulf News |

ಮನಾಮಾ, ಫೆ ೨೦: ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಇದರ ವತಿಯಿಂದ "ಐಕ್ಯತಾ ದಿನ" ಕಾರ್ಯಕ್ರಮವು ದಿನಾಂಕ 17-02-2017 ರ ಶುಕ್ರವಾರದಂದು ಸಂಜೆ 7.3೦ಕ್ಕೆ ಬ್ಯಾಂಗ್ ಕಾಕ್ (Bangkok) ಆಡಿಟೋರಿಯಂ ಉಮ್ಮುಲ್ ಹಸಮ್ ನಲ್ಲಿ ನಡೆಯಿತು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಹ್ರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಪ್ರಧಾನ ಕಾರ್ಯದರ್ಶಿ ಮುಹಮ್ಮೆದ್ ಯಹ್ಯಾ , ಮುಖ್ಯ ಭಾಷಣಕ್ಕಾಗಿ ಹಬೀಬುರ್ರಹ್ಮಾನ್ ಪ್ರಾಧ್ಯಾಪಕರು ಕಿಂಗ್ಡಮ್ ವಿಶ್ವವಿದ್ಯಾನಿಲಯ ಬಹ್ರೈನ್, ಮುಹಮ್ಮೆದ್ ಅಥಾವುಲ್ಲ ಸುಳ್ಯ ಪ್ರಧಾನ ಕಾರ್ಯದರ್ಶಿ ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಹಮ್ಮೆದ್ ಇರ್ಶಾದ್ ತುಂಬೆ ಅಧ್ಯಕ್ಷರು ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ಉಪಸ್ಥಿತರಿದ್ದರು.

ಮುಹಮ್ಮದ್ ಇರ್ಶಾದ್ ತುಂಬೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಪ್ರಭಾಷಣೆಯನ್ನು  ಪ್ರೊಫೆಸರ್ ಹಬೀಬುರ್ರಹ್ಮಾನ್ ಮಾತನಾಡಿ ಪ್ರಸಕ್ತ ಭಾರತದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಬಗ್ಗೆ ಎಚ್ಚರ ವಹಿಸಬೇಕು. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ದಮನಿಸಲ್ಪಟ್ಟ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಎಸಗುತ್ತಾ ಬಂದಿದೆ ಮಾತ್ರವಲ್ಲದೆ ಮುಸ್ಲಿಂ ಸಮುದಾಯದ ಅವನತಿಗೆ ನಿರಂತರವಾಗಿ ತನ್ನ ಕೆಲಸವನ್ನು ಮುಂದುವರಿಸುತ್ತಾ ಬಂದಿದೆ. ಅದಲ್ಲದೇ ನಮ್ಮ ಸಮುದಾಯದ ಒಳಗಿನಿಂದಲೇ ತಮ್ಮ ಅಜೆಂಡಾವನ್ನು ಜಾರಿಗೊಳಿಸಲು ಕೆಲವು ಏಜೆಂಟರನ್ನು ನೇಮಿಸುತ್ತಾ ಬಂದಿದೆ. ಇಂತಹ ಒಂದು ಫ್ಯಾಸಿಸಂನ ನಿದ್ಧಾಂತದ ಬಗ್ಗೆ ನಾವೆಲ್ಲರೂ ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು.

ಸಂಘಟನೆಯ ಕಾರ್ಯ ವೈಖರಿಯ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಅತಾವುಲ್ಲಾಹ್ ಪ್ರಧಾನ ಕಾರ್ಯದರ್ಶಿ ಬಹರೈನ್ ಇಂಡಿಯಾ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕ ನೀಡಿದರು. ಸೆಮಿನಾರ್ ಮತ್ತು ಚಟುವಟಿಕೆಯನ್ನು ಸಿದ್ದೀಖ್ ಮಂಜೇಶ್ವರ ನಡೆಸಿಕೊಟ್ಟರು. ಆಸಿಫ್ ನಂದರಬೆಟ್ಟು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Read These Next