ಬಹರೇನ್: ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್ ಕರ್ನಾಟಕ ಘಟಕ ಹಮ್ಮಿಕೊಂಡ "ಈದ್ ಸ್ನೇಹ ಸಮ್ಮಿಲನ - 2016" 

Source: irshad thumbay | By Arshad Koppa | Published on 11th July 2016, 8:26 AM | Gulf News | Special Report |

ಬಹರೇನ್, ಜು ೧೦: ಇಂಡಿಯನ್ ಸೋಶಿಯಲ್ ಫೋರಂ ಬಹ್ರೈನ್ ಕರ್ನಾಟಕ ಘಟಕ ಹಮ್ಮಿಕೊಂಡ "ಈದ್ ಸ್ನೇಹ ಸಮ್ಮಿಲನ - 2016" ಉಮ್ಮುಲ್ ಹಸಮ್ ನ ಬ್ಯಾಂಕಾಕ್ ಆಡಿಟೋರಿಯಂನಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಮೊಹಮ್ಮದ್ ಹಫೀಝ್  ಉಳ್ಳಾಲ ಮಾತನಾಡಿ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ದ ನಡೆಯುತ್ತಿರುವ ಅನ್ಯಾಯ, ಅಕ್ರಮ ಮತ್ತು ತಾರತಮ್ಯ ನೀತಿಯನ್ನು ಮನವರಿಕೆ ಮಾಡಿಕೊಟ್ಟು ಅದನ್ನು ಖಂಡಿಸಿ , ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಪ್ರಸ್ತಾಪಿಸಿ ಕಳವಳ ಮತ್ತು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಬಹರೈನ್ ಇದರ ಅಧ್ಯಕ್ಷರಾದ ಹಂಝ ಪಟ್ಟಾಂಬಿ ಮಾತನಾಡಿ ಸಂಘಟನೆಯ ಕಾರ್ಯಚಟುವಟಿಕೆಯ ಬಗ್ಗೆ ಹಾಗೂ ಅದರ ಅವಶ್ಯಕತೆಯನ್ನು ವಿವರಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ಮೊಹಮ್ಮದ್ ಫರಾಝ್  ಕಾವಲ್ಕಟ್ಟೆ ಮಾತನಾಡಿ ಸ್ನೇಹ ಸಮ್ಮಿಲನದ ಉದ್ದೇಶವನ್ನು ಜನರಿಗೆ ತಿಳಿಹೇಳಿದರು.


ವೇದಿಕೆಯಲ್ಲಿ ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಬಹರೈನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೊಹಮ್ಮೆದ್ ಯಹ್ಯಾ, ಇಂಡಿಯನ್ ಫ್ರಾಟೆರ್ನಿಟಿ ಫೋರಮ್ ಕರ್ನಾಟಕ ಘಟಕಾಧ್ಯಕ್ಷ ಮುಹಮ್ಮೆದ್ ಇರ್ಶಾದ್ ತುಂಬೆ ಉಪಸ್ತಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ಕ್ವಿಝ್  ಹಾಗೂ ಇನ್ನಿತರ ಮನೋರಂಜನೆಯ ಸ್ಪರ್ದೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ಸ್ಪರ್ದೆಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನು ನೀಡಿತ್ತು. ಹಂಝ ಪಟ್ಟಾಂಬಿ ಹಾಗೂ ಮೊಹಮ್ಮದ್ ಯಹ್ಯಾ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಎಲ್ಲಾ ರೀತಿಯ ಮನೋರಂಜನಾ ಅಟೋಟ ಕಾರ್ಯಕ್ರಮವನ್ನು ಸಫ್ವಾನ್ ವಿಟ್ಳ, ಮೊಇದೀನ್ ಇಶಾಕ್ ಉಚ್ಚಿಲ, ಸಿದ್ದೀಕ್ ಮಂಜೇಶ್ವರ ನಡೆಸಿಕೊಟ್ಟರು. ಅಥಾವುಲ್ಲಾ ಸುಳ್ಯ ಸ್ವಾಗತಿಸಿ ನಿಝಾಮ್ ಮಂಗಳೂರು ವಂದಿಸಿದರು. ಇರ್ಫಾನ್ ಅಹ್ಮದ್ ಗುಲ್ಬರ್ಗ ಕಾರ್ಯಕ್ರಮವನ್ನು ನಿರೂಪಿಸಿದರು.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆಗೆ ಮುಂದುವರಿದ ಆಕ್ರೋಶ; 17 ದೇಶಗಳ ಖಂಡನೆ; ಗಲ್ಫ್ ಸಹಕಾರ ಮಂಡಳಿಯಿಂದಲೂ ಆಕ್ಷೇಪ

ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...