ಬಹರೇನ್: ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ರಾಧಾಕೃಷ್ಣ ಸ್ಪರ್ಧೆ: ಅತಿಥಿಯಾಗಿ ನಟ ಪ್ರಥ್ವಿ ಅಂಬರ್ ಆಗಮನ

Source: billawas bahrain | By Arshad Koppa | Published on 27th July 2017, 7:27 AM | Gulf News | Guest Editorial |

ಬಹ್ರೇನ್ ಬಿಲ್ಲವಾಸ್ ಆಯೋಜಿಸುವ ``ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ರಾಧಾಕೃಷ್ಣ ಸ್ಪರ್ಧೆ''ಗೆ ಪ್ರಖ್ಯಾತ ತುಳು ಚಿತ್ರರಂಗದ ನಟ ಪ್ರಥ್ವಿ ಅಂಬರ್ ಗೌರವ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

ಗುರು ಸೇವಾ ಸಮಿತಿ, 15 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಬಿಲ್ಲವ ಸಮುದಾಯ ಸಂಘಟನೆ ಬಹ್ರೇನ್ ಬಿಲ್ಲವಾಸ್ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪರವಾಗಿ ರಾಧಾಕೃಷ್ಣ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಬಹ್ರೇನ್ನಲ್ಲಿ ವಾಸಿಸುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ಸಮುದಾಯದ ಸದಸ್ಯರಿಗೆ ಈ ಸ್ಪರ್ಧೆ ತೆರೆದಿರುತ್ತದೆ.

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಈ ಮಹಾ ಆಯೋಜನೆಗೆ ಶೀರ್ಷಿಕೆ ಪ್ರಾಯೋಜಕರು.

ಈ ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಬಹ್ರೇನ್ ಬಿಲ್ಲವಾಸ್ ಸಾಮಾಜಿಕ ಜಾಲತಾಣ ಫೇಸ್ಬುಕ್ ಪುಟ ಹಾಗೂ ಎರಡನೇ ಹಂತದ ನೇರ ಪ್ರಸಾರ ಕಾರ್ಯಕ್ರಮ ಆಗಸ್ಟ್ 11, 2017 ರಂದು ಬಹ್ರೇನ್ ನ ಇಂಡಿಯನ್ ಕ್ಲಬ್ ಸಭಾಗ್ರಹದಲ್ಲಿ ನಡೆಯಲಿದೆ.

ಇದೇ ಮೊತ್ತ ಮೊದಲ ಬಾರಿಗೆ, ಬಹ್ರೇನ್ ದ್ವೀಪ ರಾಷ್ಟ್ರದಲ್ಲಿ ನೆಲೆಸಿರುವ ತುಳುವ ಕನ್ನಡಿಗರು ಈ ಮಹಾಸ್ಪರ್ಧೆಯಲ್ಲಿ ಭಾಗವಹಿಸಿ ಇತಿಹಾಸಕ್ಕೆ ನಾಂದಿ ಹಾಡಲಿದ್ದಾರೆ.

ಪ್ರಖ್ಯಾತ ತುಳು ಚಿತ್ರ ತಾರೆ ಪ್ರಥ್ವಿ ಅಂಬರ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಹ್ರೇನ್ ಬಿಲ್ಲವಾಸ್ ಅಧ್ಯಕ್ಷ ಅಜಿತ್ ಬಂಗೇರ ತಿಳಿಸಿದ್ದಾರೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಪ್ರಥ್ವಿ ಅಂಬರ್ ಹಾಗೂ ಬಹ್ರೇನ್ ವಿವಿಧ ಸಾಮಾಜಿಕ-ಸಾಂಸ್ಕೃತಿಕ ಸಂಘಟಣೆಗಳ ನೃತ್ಯ ಪ್ರದರ್ಶನಗಳು.

Read These Next

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...