ಶಾಸಕ ವೈದ್ಯರ ಹತ್ಯೆಯ ಸಂಚು ವಿಫಲ; ವ್ಯಕ್ತಿಯ ಕೈಯಲ್ಲೆ ನಾಡಬಾಂಬು ಸ್ಪೋಟ

Source: sonews | By Staff Correspondent | Published on 26th February 2018, 5:18 PM | Coastal News | State News | Don't Miss |


•    ಶಾಸಕ ಮಾಂಕಾಳ್ ವೈದ್ಯ ಸುರಕ್ಷಿತ
•    ಪೊಲೀಸರಿಂದ ತನಿಖೆ ಚುರುಕು
•    ಭಾನುವಾರ ರಾತ್ರಿ ಹೊನ್ನಾವರ ತಾಲೂಕಿನ ಹೊಸಾಡ ಗ್ರಾಮದಲ್ಲಿ ನಡೆದ ಘಟನೆ

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳು ವೈದ್ಯರ ಹತ್ಯೆಗೆ ನಡೆಸಿದ ಸಂಚು ವಿಫಲಗೊಂಡಿದ್ದು ವೈದ್ಯರ ಸಭಾ ಕಾರ್ಯಕ್ರಮದಲ್ಲಿ ಸ್ಫೋಟಿಸಲು ಬಂದಿದ್ದ ವ್ಯಕ್ತಿಯ ಕೈಯಲ್ಲೇ ನಾಡಬಾಂಬೊಂದು ಸ್ಪೋಟಗೊಂಡು ವ್ಯಕ್ತಿಯು ಗಂಭೀರವಾಗಿ ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಹೊಸಾಡ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. 

ಘಟನೆ ಸಂಬಂಧಿಸಿದಂತೆ ಬಾಂಬು ಸ್ಪೋಟಿಸಲು ಬಂದಿದ್ದ ಹೊನ್ನಾವರದ ಪ್ರಭಾತ ನಗರದ ನಿವಾಸಿ ಎಂದು ಹೇಳಲಾಗಿರುವ ರೇಮಂಡ್ ಮಿರಾಂಡ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಆತನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಘಟನೆ ಹಿನ್ನೆಲೆ: ಹೊನ್ನಾವರ ತಾಲೂಕಿನ ಹೊಸಾಡ ಗ್ರಾಮದಲ್ಲಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ನಡೆದಿದ್ದು ಅದರ ಸಮಾರಂಭದಲ್ಲಿ ಶಾಸಕ ಮಂಕಾಳ ವೈದ್ಯ ಬಾಗಿಯಾಗಿದ್ದರು. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆ ಸಮೀಪ ನಾಡಬಾಂಬ್ ಎಸೆಯಲು ಬಂದಿದ್ದ ವ್ಯಕ್ತಿಯ ಕೈಯಲ್ಲೇ ಸ್ಪೋಟಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.  ಘಟನೆಯಲ್ಲಿ ನಾಡಬಾಂಬ್ ಕೈಯಲ್ಲೇ ಸ್ಪೋಟಗೊಂಡಿದ್ದರಿಂದ ರೇಮಾಂಡ್ ಎಂಬಾತನ ಕೈ ಹಾಗೂ ಮುಖಕ್ಕೆ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಪೊಲೀಸ್ ವರಿಷ್ಠ ವಿನಾಯಕ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು ಫಾರೆನ್ಸಿಕ್ ತಜ್ಞರು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸುತ್ತಿದ್ದಾರೆ ಅವರ ವರದಿಯ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 


ಕೊಲ್ಲುವವನಿಗಿಂತ ಕಾಯುವ ದೇವರು ದೊಡ್ಡವನು-ವೈದ್ಯ
ನನ್ನನ್ನು ಮುಗಿಸಲು ಸಂಚು ರೂಪಿಸಿದ ವ್ಯಕ್ತಿ ಯಾರೇ ಇರಬಹುದು. ಕೊಲ್ಲುವವನಿಗಿಂತ ನನ್ನನ್ನು ಕಾಯುತ್ತಿರುವ ದೇವರು ದೊಡ್ಡವನು. ಭಗವಂತನ ರಕ್ಷಣೆ, ಕ್ಷೇತ್ರದ ಬಡ ಜನರ ಆಶೀರ್ವಾದ ನನ್ನ ಮೇಲೆ ಸದಾ ಇದ್ದೇ ಇರುತ್ತದೆ. ಆದ್ದರಿಂದಲೆ ಕೊಲ್ಲಲು ಬಂದವನ ಕೈಯಲ್ಲೇ ಸ್ಪೋಟಗೊಂಡಿದೆ ಎಂದು ಶಾಸಕ ಮಾಂಕಾಳ್ ವೈದ್ಯ ಹೇಳಿದ್ದಾರೆ. 

ನನ್ನ ಅಭಿವೃದ್ಧಿಯ ವೇಗ ಸಹಿಸದವರು ಇಂತಹ ಕೃತ್ಯ ಮಾಡುವ ಸಾಧ್ಯತೆಗಳಿದ್ದರೂ ನಾನು ಯಾರನ್ನೂ ಆರೋಪಿಸುವುದಿಲ್ಲ. ಆದರೆ ಇದು ರಾಜಕೀಯ ದುರುದ್ದೇಶದಿಂದಲೇ ಈ ಕೃತ್ಯ ನಡೆದಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏಕೆಂದರೆ ಕೊಲ್ಲಲು ಬಂದವ ಜೀವಂತವಾಗಿದ್ದಾನೆ. ಆಧಾರ ಪ್ರಮಾಣಸಹಿತ ಆತನನ್ನು ಪೊಲೀಸರು ಹಿಡಿದ್ದಾರೆ. ತನಿಖೆಯಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ. ಡಾ.ಚಿತ್ತರಂಜನ್ ರ ಕೊಲೆಯ ನಂತರ ಶಾಸಕನ ಹತ್ಯೆಗೆ ಪ್ರಯತ್ನಿಸಿದ್ದು ಇದು ಮೊದಲ ಘಟನೆಯಾಗಿದ್ದು ಇದರಿಂದಾಗಿ ಕ್ಷೇತ್ರದ ಜನರು ತುಂಬ ನೊಂದುಕೊಂಡಿದ್ದಾರೆ. ರಾಜಕೀಯವಾಗಿ ನನ್ನನ್ನು ತುಳಿಯುವ ಹಲವು ಪ್ರಯತ್ನಗಳು ನಡೆದಿವೆ. ಆದರೆ ಇಂತಹ ಮಾರ್ಗ ತುಳಿಯುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ನನಗೆ ದೇವರ ಮೇಲೆ ಅಪಾರ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರೇ ನನ್ನ ಭದ್ರತೆಗೆ ನಿಂತುಕೊಂಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳುತ್ತದೆ. ಪೊಲೀಸರ ಮೇಲೆ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಅವರ ಕಾರ್ಯಕ್ಷಮತೆಯ ಬಗ್ಗೆ ನನಗೆ ಸಂಶಯವಿಲ್ಲ. ಈ ಕೃತ್ಯದ ಹಿಂದೆ ಯಾರಿದ್ದಾರೆ? ಯಾಕಾಗಿ ಕೊಲೆ ಮಾಡಲು ಬಂದಿದ್ದ ಎಂಬ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಸೂಕ್ತ ಉತ್ತರ ನೀಡಬಲ್ಲದು ಎಂದು ಅವರು ಹೇಳಿದರು. 

ಅಭಿವೃದ್ಧಿ ಸಹಿದವರ ಹೀನಾ ಕೃತ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ವೈದ್ಯ, ಹಿಂತಿರುಗಿ ನೋಡಲೇ ಇಲ್ಲ. ತನ್ನ ಅಧಿಕಾರಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಲ್ಲದೆ ಸುಮಾರು 1500 ಕೋಟಿ ರೂ ಯೋಜನೆಗಳನ್ನು ತನ್ನ ಕ್ಷೇತ್ರಕ್ಕೆ ಮಂಜೂರಿ ಮಾಡಿಸಿ ಜನರ ಸಾವಿರ ಕೋಟಿಯ ಸರದಾರ, ಅಭಿವೃದ್ಧಿಯ ಹರಿಕಾರ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ವೇಗ ಎಷ್ಟಿತ್ತೆಂದರೆ ವಿರೋಧ ಪಕ್ಷದವರು ಒಂದು ವಿರೋಧದ ಮಾತನಾಡಿದರೂ ಅದಕ್ಕೆ ಅವರ ಬಳಿ ಉತ್ತರ ಸಿದ್ದವಿರುತ್ತಿತ್ತು. ಇಂತಹ ಶಾಸಕನ ವೇಗಕ್ಕೆ ಬ್ರೇಕ್ ಹಾಕಬೇಕು, ಮುಂದಿನ ಚುನಾವಣೆಯಲ್ಲಿ ಹೆದರಿಕೆಯ ತಂತ್ರವನ್ನು ಬಳಸಿ ಅವರನ್ನು ಮೂಲೆಗುಂಪನ್ನಾಗಿ ಮಾಡಬೇಕು ಎನ್ನುವ ಕುತಂತ್ರದಿಂದಾಗಿ ಹತಾಶೆಗಿಳಿದ ಜನರೇ ಇದನ್ನು ಮಾಡಿಸಿದ್ದಾರೆ ನಮ್ಮ ಶಾಸಕರು ಯಾರ ಹೆದರಿಕೆಗೂ ಬೆದರುವವರಲ್ಲ ಎಂದು ಅವರು ಅಭಿಮಾನಿಗಳು ಹೇಳುತ್ತಿದ್ದಾರೆ. 

ಇದೊಂದು ರಾಜಕೀಯ ದ್ವೇಷನೂ ಅಥವಾ ಇನ್ನಾವುದೇ ಕಾರಣನೂ ಒಟ್ಟನಲ್ಲಿ ಪೊಲೀಸ್ ತನಿಖೆಯೇ ಇದಕ್ಕೆ ಉತ್ತರಸಬಲ್ಲುದು. 

“ಒಳ್ಳೆ ಕೆಲಸ ಮಾಡುವವರನ್ನು ದೇವರು ಕಾಪಾಡುತ್ತಾನೆ. ಶಾಸಕ ಮಂಕಾಳ ವೈದ್ಯರ ಮಾಡಿದ ಪುಣ್ಯವೇ ನಮ್ಮನ್ನೆಲ್ಲಾ ಕಾಪಾಡಿದೆ ನಾವಿರುವ ವೇದಿಕೆಯನ್ನು ಸ್ಪೊಟಿಸಲು ಬಂದವನು ಎಸೆಯುವ ಅವಸರದಲ್ಲಿ ಕೈಯಲ್ಲೇ ಸ್ಪೋಟಿಸಿಗೊಂಡು ಕೈ ಚೂರು ಚೂರು ಮಾಡಿ ಕೊಂಡು ಆತ್ಮಹತ್ಯೆ ಗೆ ಯತ್ನಿಸುತ್ತಿರುವ ಸಂದರ್ಭ ದಲ್ಲಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಶಾಸಕರ ಮೇಲೆ ಇಂತಹ ಹೇಯಕೃತ್ಯ ಮಾಡಲೆತ್ನೀಸಿದವರಿಗೆ ದಿಕ್ಕಾರ.....” ಎಂಬ ಮಾತುಗಳು ವಾಟ್ಸಪ್ ಮೂಲಕ ಹರಿದಾಡುತ್ತಿವೆ.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...