ಗೋ ರಕ್ಷಕರೆಲ್ಲಿ?

Source: sonews | By sub editor | Published on 28th September 2017, 8:24 PM | Coastal News | National News | Special Report | Public Voice | Don't Miss |

@ಪರ್ವಾಝ ರಹ್ಮಾನಿ

ಉತ್ತರ ಪ್ರದೇಶದ ಲಿಖೀಂಪುರ ಖೇರಿ ಜಿಲ್ಲೆಯ ವರದಿ. ಅಲ್ಲಿನ ಗ್ರಾಮಗಳ ಮತ್ತು ಹಳ್ಳಿಗಳ ರೈತರು ಉಂಡಾಡಿ ಜಾನುವಾರುಗಳಿಂದ ಕಂಗಾಲಾಗಿದ್ದಾರೆ. ಈ ಜಾನುವಾರುಗಳನ್ನು ಏನು ಮಾಡುವುದೆಂದು ತೋಚದಾಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಈ ಜಾನುವಾರುಗಳಿಗೆ ಒಂದು ಆಶ್ರಯ ತಾಣ ಮಾಡಿಕೊಡಬೇಕೆಂದು ರೈತರು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಈ ಜಾನುವಾರುಗಳಲ್ಲಿ ಬಹುತೇಕ ಗೋವುಗಳಾಗಿವೆ. ಕೊನೆಗೆ ಅವರು ಪರಸ್ಪರ ಸಮಾಲೋಚನೆ ನಡೆಸಿ ಈ ಜಾನುವಾರುಗಳನ್ನು ವಾಕಾ ಬ್ಲಾಕ್‍ನ ಒಂದು ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಕೂಡಿ ಹಾಕುವುದೆಂದು ತೀರ್ಮಾನಿಸಿದರು. ಹಾಗೆ ಸುಮಾರು ನೂರು ಮಂದಿ ರೈತರು 150 ದನಗಳನ್ನು ಶಾಲೆಗೆ ಕೊಂಡು ಹೋಗಿ ಅಲ್ಲಿನ ಅಧ್ಯಾಪಕರು ಮತ್ತು ಮಕ್ಕಳೊಂದಿಗೆ ನೀವೆಲ್ಲ ನಿಮ್ಮ ನಿಮ್ಮ ಮನೆಗೆ ಹೋಗಿರಿ. ಇನ್ನು ಈ ದನಗಳೇ ಇಲ್ಲಿರುವುವು ಎಂದು ಹೇಳಿದರು. ಈ ಶಾಲೆ ಯಾವಾಗ ತೆರೆಯುವುದು, ಯಾವಾಗ ಪಾಠ ಆರಂಭವಾಗುವುದು, ಶಾಲೆಯಲ್ಲಿ ದನಗಳನ್ನು ನೋಡಿಕೊಳ್ಳುವವರು ಯಾರು ಎಂದು ಯಾರಿಗೂ ತಿಳಿದಿಲ್ಲ. ರೈತರು ಹೇಳುವಂತೆ, ಈ ಜಾನುವಾರು ಗಳು ಅವರಿಗೊಂದು ತಲೆಬೇನೆಯಾಗಿದೆ. ಸಿಕ್ಕ ಸಿಕ್ಕ ಹೊಲಗಳಿಗೆ ಅವು ನುಗ್ಗಿ ಮೇಯುತ್ತಿವೆ. ಜನವಾಸ ಕೇಂದ್ರಗಳಿಗೂ ನುಗ್ಗುತ್ತಿವೆ. ಸ್ವಾರಸ್ಯಕರ ವೇನೆಂದರೆ ಶಾಲೆಗೆ ಹೋಗುವ ರೈತರೊಂದಿಗೆ ಕೆಲವು ವಿದ್ಯಾರ್ಥಿಗಳ ಹೆತ್ತವರೂ ರೈತರಿಗೆ ಬೆಂಬಲವಾಗಿ ಹೋಗಿದ್ದಾರೆ. ಟೈಮ್ಸ್ ಆಫ್ ಇಂಡಿಯದ ಆಗಸ್ಟ್ 30ರ ವರದಿಯಂತೆ, ಇಂತಹ ಘಟನೆಗಳು ಈ ಪ್ರದೇಶದಲ್ಲಿ ಮುಂಚೆಯೂ ಆಗಿವೆ. ಅಲ್ಲಿನ ಜನರು ಜಾನು ವಾರುಗಳ ಕಾಟದಿಂದ ಬೇಸತ್ತು ಅವುಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಕಟ್ಟಿ ಹಾಕಿದ್ದಾರೆ.
ಲಿಖೀಂಪುರದ ರೈತರಿಗೆ ಮಾಡಿದ್ದು ಸರಿಯೆ. ಆದರೆ ಇನ್ನೊಂದು ಕೆಲಸವೂ ಆಗಬಹುದಿತ್ತು. ಅದು ಅವರ ಗಮನಕ್ಕೆ ಬಂದಿರಲಿಲ್ಲ. ಅದು ಈಗಲೂ ಆಗಬಹುದು. ಗೋಪೂಜಕರು ಮತ್ತು ಗೋರಕ್ಷಕರು ಬಂದು ಗೋವುಗಳ ಪೈಕಿ ಒಂದೊಂದೋ, ಎರಡೆರಡೋ ಗೋವುಗಳನ್ನು ಕೊಂಡು ಹೋಗಿ ತಂತಮ್ಮ ಮನೆಗಳಲ್ಲಿ ಆರೈಕೆ ಮಾಡಲಿ ಎಂದು ಆಗ್ರಹಿಸಬೇಕಿತ್ತು. ಈ ಕಾರ್ಯವು ಇಡೀ ದೇಶದಲ್ಲಿ ನಡೆಯಬೇಕು. ಗ್ರಾಮ ಗ್ರಾಮ ಗಳಲ್ಲೂ ದೆಹಲಿ, ಕಲ್ಕತ್ತದಂತಹ ನಗರಗಳಲ್ಲಿಯೂ ನಡೆಯಬೇಕು.
ಈ ಉಂಡಾಡಿ ಹಾಗೂ ಅಸಹಾಯಕ ಜಾನುವಾರುಗಳ ಕಾಟ ದೊಡ್ಡ ನಗರ ಗಳಲ್ಲೂ ಕಡಿಮೆಯೇನಲ್ಲ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಇವುಗಳ ದಂಡೇ ಕುಳಿತಿರುತ್ತವೆ. ಕೆಲವು ಪ್ರದೇಶಗಳ ಹೆದ್ದಾರಿ ಮತ್ತು ಪೇಟೆಗಳಲ್ಲಿ ಇವು ಕಂಡು ಬರುತ್ತವೆ. ಹಸಿವು ಬಾಯಾರಿಕೆ ಯಿಂದ ಕಂಗಾಲಾದ ಸ್ಥಿತಿಗಳಲ್ಲಿ! ಅನೇಕ ಜಾನುವಾರುಗಳ ಚರ್ಮಗಳು ಮೂಳೆಗೆ ಅಂಟಿಕೊಂಡಿರುತ್ತವೆ. ತ್ಯಾಜ್ಯ ಗಳ ರಾಶಿಯಲ್ಲಿ ಬಾಯಿ ಹಾಕಿ ಸಿಕ್ಕಿದ್ದನ್ನು ತಿಂದು ಹಾಕುತ್ತವೆ. ಬಹಳಷ್ಟು ಜಾನುವಾರುಗಳು ಸತ್ತು ಹೋಗುತ್ತವೆ. ಅಲ್ಲಿ ಅವುಗಳ ಪೂಜಕರೂ ಇರುವು ದಿಲ್ಲ. ರಕ್ಷಕರೂ ಇರುವುದಿಲ್ಲ. ಹತ್ತಿರ ದಿಂದ ಸಾಗುವ ದಾರಿಹೋಕರಲ್ಲಿ ಈ ದನಗಳ ಬಗ್ಗೆ ಅನುಕಂಪವೂ ಗೋಚರಿ
ಸುತ್ತಿಲ್ಲ. ಈ ನಿರಾಶ್ರಿತ ದನಗಳನ್ನು ನಗರ ಪ್ರದೇಶಗಳಲ್ಲಿ ಯಾರಾದರೂ ಪ್ರೇಮ ಹಾಗೂ ಭಕ್ತಿಯೊಂದಿಗೆ ತಮ್ಮ ಜೊತೆಗೆ
ಕರೆದೊಯ್ಯುವುದೂ ಕಾಣುತ್ತಿಲ್ಲ.
ಗೋವುಗಳೊಂದಿಗೆ ಈ ದುರ್ವ ರ್ತನೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಸರಕಾರಿ ಆಶ್ರಯತಾಣ ಮತ್ತು ಗೋ ಶಾಲೆಗಳಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಗೋರಕ್ಷಣೆಯ ಹೆಸರಲ್ಲಿ ಜನರು ಸರಕಾರದಿಂದ ಭಾರೀ ಹಣವನ್ನು ಪಡೆಯುತ್ತಾರೆ. ಬಹಳಷ್ಟನ್ನು ತಾವೇ ಕಬಳಿಸುತ್ತಾರೆ. ಸ್ಪಲ್ಪಂಶ ಈ ಬಡ ಪ್ರಾಣಿಗಳಿಗೆ ಖರ್ಚು ಮಾಡುತ್ತಾರೆ. ಈ ಕೆಲಸವನ್ನು ಸ್ವಯಂ ಆಡಳಿತ ಪಕ್ಷದ ಜನರೇ ಮಾಡುತ್ತಾರೆ. ಮಧ್ಯ ಪ್ರದೇಶ, ಛತ್ತೀಸ್ಗಡ್ ಮತ್ತು ರಾಜಸ್ತಾನದ ಗೋ ಶಾಲೆಗಳಲ್ಲಿ ಗೋವುಗಳು ಸಾಯುತ್ತಿವೆ. ಆದರೆ ವಿಷಯ ಆಡಳಿತ ಪಕ್ಷದವರದಲ್ಲವೇ? ಆದ್ದರಿಂದ ಮಾಧ್ಯಮಗಳು ಈ ಪ್ರಕರಣಗಳನ್ನು ಸರಿಯಾಗಿ ಎತ್ತುತ್ತಿಲ್ಲ. ದಾರಿಗಳಲ್ಲಿ, ಪೇಟೆಗಳಲ್ಲಿ ಹಾಗೂ ರೈಲು ಗಾಡಿಗಳಲ್ಲಿ ಗೂಂಡಾಗಿರಿ ಮಾಡುವ ಗೋರಕ್ಷಕರೂ ಇವರನ್ನೇನೂ ಮಾಡುವುದಿಲ್ಲ. [ಅಸಹಾಯಕ ಗೋವುಗಳ ರಕ್ಷಣೆ ಮತ್ತು ಆರೈಕೆಗೆ ಸರಕಾರವು ಪ್ರಾಯೋಗಿಕ ಯೋಜನೆ ರೂಪಿಸಬೇಕು. ನಮ್ಮ ದೃಷ್ಟಿಯಲ್ಲಿ ಮೇನಕಾ ಗಾಂಧಿಯವರ ಸಚಿವಾಲಯವು ಈ ಕಾರ್ಯವನ್ನು ಮಾಡಬಲ್ಲುದು. ಟಿ.ವಿ. ಮತ್ತು ವಾರ್ತಾ ಮಾಧ್ಯಮಗಳಲ್ಲಿ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ, ಈ ಗೋವುಗಳನ್ನು ತಮ್ಮ ಮನೆಗೊಯ್ಯುವಂತೆ ಗೋ ಪೂಜಕರು ಮತ್ತು ಗೋರಕ್ಷಕರಿಗೆ ಪ್ರೇರಣೆ ನೀಡಬೇಕು.] ವಾಸ್ತವದಲ್ಲಿ ಇಂದು ಕಾಣು ತ್ತಿರುವ ಗೋ ಭಕ್ತಿ ಮತ್ತು ಗೋ ಪ್ರೇಮದ ಬಿರುಗಾಳಿಯ ಹಿನ್ನಲೆಯಲ್ಲಿ ಪೇಟೆಗಳಲ್ಲೂ ಬೀದಿಗಳಲ್ಲೂ ಒಂದೇ ಒಂದು ನಿರಾಶ್ರಿತ ಗೋವು ಕಾಣಬಾರ ದಿತ್ತು. ಈಗೆಲ್ಲಿದ್ದಾರೆ ಗೋವಿನ ಹೆಸರಲ್ಲಿ ಮಾನವರನ್ನು ಕಡಿಯುವ ಗೋರಕ್ಷಕರು!
ಕೃಪೆ: ದಅವತ್  ಅನು: ಸನ್ಮಾರ್ಗ ವಾರಪತ್ರಿಕ

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ರಾಜ್ಯದ ೨೨೪ ಶಾಸಕರ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹಿಸಿ ರೈತಸಂಘದಿಂದ ವಿನೂತನ ಪ್ರತಿಭಟನೆ

ಕೋಲಾರ: ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಿ ರಾಜ್ಯದ ಜ್ವಾಲಂತ ಸಮಸ್ಯೆಗಳಿಗೆ ಸ್ಪಂಧಿಸದೆ ಸಿಂಹಾಸನಕ್ಕಾಗಿ ಬೀದಿ ನಾಯಿಗಳಂತೆ ...

ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ

ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ...

ಗೋವುಗಳ ರಕ್ಷಣೆ ನೆಪದಲ್ಲಿ ಅಮಾಯಕರ ಹತ್ಯೆ ನಡೆಯುತ್ತಿರುವುದು ಘೋರ ಅಪರಾಧ; ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣವನ್ನು ತಡೆಯಲು ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವವರನ್ನು ...

ಹಾಲು ಖರೀದಿ ದರ ಪರಿಷ್ಕರಣೆ 

ಒಕ್ಕೂಟದಲ್ಲಿ ಲಾಭ ಗಳಿಸಿದಾಗ ಉತ್ಪಾದಕರಿಗೆ ಉತ್ತೇಜನ ನೀಡಲು ಹಾಲು ಖರೀದಿ ದರವನ್ನು ಹೆಚ್ಚಿಸುವುದು, ಅದೇ ರೀತಿ ಸುಗ್ಗಿ ಕಾಲದಲ್ಲಿ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...