ಪಂಚರ ಮೀನು ಕೃಷಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Source: sonews | By Staff Correspondent | Published on 14th September 2018, 6:37 PM | Coastal News |

ಕಾರವಾರ:  ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಹಾಗೂ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಪ್ರಾಯೋಜಕತ್ವದ ತೆರದ ನೀರಿನ ಪಂಚರ ಕೃಷಿ ಯೋಜನೆಯಡಿ ಕರ್ನಾಟಕದ ಕರಾವಳಿಯಲ್ಲಿ ಮೀನುಗಾರಿಕೆ ಕೃಷಿ ಮಾಡುವ ಫಲಾನುಭವಿಗಳಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಸಿಎಂಎಫ್‍ಆರ್‍ಐ ಪಂಜರ ಕೃಷಿ ತಂತ್ರಜ್ಞಾನವನ್ನು ಪ್ರಮಾಣಿಕರಿಸಿ ಭಾರತದ ವಿವಿಧ ಕರಾವಳಿ ರಾಜ್ಯಗಳಲ್ಲಿ ಯಶಸ್ವಿ ಪ್ರಾತ್ಯಕ್ಷಿಕೆ ಪ್ರಯೋಗವನ್ನು ಪ್ರದರ್ಶಿಸಿದೆ. ಈ ಯಶಸ್ವಿಯೊಂದಿಗೆ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹೈದರಾಬಾದ್ ಇವರ ಪ್ರಾಯೋಕತ್ವದಲ್ಲಿ ಕರ್ನಾಟಕ ಕರಾವಳಿ ಸಮುದಾಯಕ್ಕಾಗಿ ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ತೆರೆದ ನೀರಿನ ಪಂಜರ ಕೃಷಿ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಕರ್ನಾಟಕಕ್ಕೆ 500 ಪಂಜರ ಮಂಜೂರು ಮಾಡಲಾಗಿದೆ.
    
ಮಂಡಳಿಯ ಮಾರ್ಗಸೂಚಿ ಪ್ರಕಾರ ವೈಯಕ್ತಿಕ ಅಥವಾ ಗುಂಪುಗಳಿಗೆ ಸಹಾಯಧನ ನೀಡಲು ಅವಕಾಶವಿದ್ದಿ ಆಸಕ್ತ ಫಲಾನುಭವಿಗಳು ರಾಜ್ಯ ಮೀನುಗಾರಿಕಾ ಇಲಾಖೆ ಮೂಲಕ ಕಾರವಾರ ಸಂಶೋಧನಾ ಕೇಂದ್ರ. ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಕೇಂದ್ರ ಐಸಿಎಆರ್-ಸಿಎಂಎಫಾರ್‍ಐ, ನಂ.05, ಕಾರವಾರ-581301, ಉತ್ತರ ಕನ್ನಡ ಜಿಲ್ಲೆ, ದೂರವಾಣಿ 08382-222639, ಇಮೇಲ್ [email protected] ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...