ಡಿ.8ರಂದು ಎಪಿಸಿಆರ್ ವತಿಯಿಂದ ರಾಜ್ಯಮಟ್ಟದ ಕಾನೂನು ಕಾರ್ಯಗಾರ

Source: sonews | By sub editor | Published on 5th December 2018, 11:48 PM | Coastal News | State News | Don't Miss |

 * ಮಾಜಿ ಮುಖ್ಯ ನ್ಯಾಯಾಮೂರ್ತಿ ಜಸ್ಟಿಸ್ ವೆಂಕಟಚಲಯ್ಯ ರಿಂದ ಸ್ಮರಣ ಸಂಚಿಕೆ ಬಿಡುಗಡೆ

ಬೆಂಗಳೂರು: ಅಸೋಸಿಯೇಶನ್ ಫಾರ್ ಪ್ರೋಟೆಕ್ಷನ್ ಆಫ್ ಸಿವಿಲ್ ರೈಟ್ಸ್( ಎಪಿಸಿಆರ್) ನಾಗರೀಕ ಹಕ್ಕುಗಳ ಸಂರಕ್ಷರಣಾ ಸಂಸ್ಥೆಯು ಡಿ.8 ರಂದು ಬೆಂಗಳೂರಿನ ಕ್ವಿನ್ಸ್ ರಸ್ತೆಯಲ್ಲಿರುವ ಐಎಟಿ ಆಡಿಟೋರಿಯಂ ಹಾಲ್ ನಲ್ಲಿ ಒಂದು ದಿನದ ರಾಜ್ಯಮಟ್ಟದ ಕಾನೂನು ಕಾರ್ಯಗಾರವನ್ನು ಆಯೋಜಿಸಿದೆ ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯಾವಾದಿ ನಿಯಾಝ್ ಆಹಮದ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ. 

ಡಿ.8ರಂದು ಶನಿವಾರ ಬೆಳಿಗ್ಗೆ 10.30ಗಂಟೆಯಿಂದ ಸಂಜೆ 5.00ಗಂಟೆ ವರೆಗೆ ನಡೆಯುವ ಈ ಕಾನೂನು ಕಾರ್ಯಗಾರದ ಅಧ್ಯಕ್ಷತೆಯನ್ನು ಎಪಿಸಿಆರ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮುಂಬೈ ಹೈಕೋರ್ಟ್ ನ ಸಿನೀಯರ್ ಕೌನ್ಸಿಲ್ ನ್ಯಾಯಾವಾದಿ ಯೂಸೂಫ್ ಮಛಾಲೆ ವಹಿಸುವರು. ಕರ್ನಾಟಕ ಹೈಕೋರ್ಟ್‍ನ ಮಾಜಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಟಿ.ವೆಂಕಟೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 

ರಾಜ್ಯದ ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಎಪಿಸಿಆರ್ ಸಂಸ್ಥೆಯ ಕಾರ್ಯಕರ್ತರು, ಸದಸ್ಯರು ಕಾನೂನು ಸಂಬಂಧಿ ಸಂಪೂರ್ಣ ಮಾಹಿತಿಯನ್ನು ಕಾರ್ಯಗಾರದಲ್ಲಿ ಪಡೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು,  ಬೆಂಗಳೂರಿನ ನ್ಯಾಶನಲ್ ಲಾ ಕಾಲೇಜ್ ಸಹಾಯಕ ಪ್ರಾಧ್ಯಾಪಕ ಫ್ರೋ.ಕುನಾಲ್ ಅಂಬೆಸ್ತಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಗಾರದಲ್ಲಿ ಭಾಗವಹಿಸಲಿದ್ದು, ಸರ್ವೋಚ್ಛ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಮೂರ್ತಿ ಜಸ್ಟಿಸ್ ಎಂ.ಎನ್. ವೆಂಕಟಾಚಲಯ್ಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಯೂಸೂಫ್ ಕನ್ನಿ ಕಾರ್ಯಗಾರದ ಮೇಲ್ವಿಚಾರಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಕಾರ್ಯಗಾರವನ್ನು ಯಶಸ್ವಿಯಾಗಿ ನಡೆಯುವಂತಾಗಲು ರಾಜ್ಯ ಎಪಿಸಿಆರ್ ಅಧ್ಯಕ್ಷ ನ್ಯಾಯಾವಾದಿ ಸಾದುದ್ದೀನ್ ಸಾಲೇಹ್ ಸೇರಿದಂತೆ ರಾಜ್ಯ ಕಾರ್ಯಕಾರಿಣಿ ಸದಸ್ಯರು ಜಿಲ್ಲಾ ಸಮಿತಿ ಸಂಚಾಲಕರು ಕಾರ್ಯಪ್ರವೃತ್ತಗೊಂಡಿದ್ದು ಇದಕ್ಕಾಗಿ ವಿವಿಧ ಹಂತದ ಸಭೆಗಳನ್ನು ಆಯೋಜಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರ. 
 

Read These Next

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...