ಭ್ರಷ್ಟಾಚಾರ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ: ಎಸ್.ಪಿ. ಶೃತಿ 

Source: S.O. News Service | By Manju Naik | Published on 15th August 2018, 9:35 PM | Coastal News | Don't Miss |

ಭಟ್ಟಳ: ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಉತ್ತರ ಕನ್ನಡ ಜಿಲ್ಲೆ ಕಾರವಾರ ಇವರ ವತಿಯಿಂದ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಮಾಹಿತಿ ಮತ್ತು ಜನಸಂಪರ್ಕ ಸಭೆಯೂ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆಯಿತು. 

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕಿ ಕುಮಾರಿ ಶ್ರುತಿ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತರಾಗಿ ರಚನಾತ್ಮಕ ಪಾತ್ರ ನಿರ್ವಹಿಸಿದರೆ ಇದು ಸಾಧ್ಯ ಎಂದು ಹೇಳಿದ ಅವರು ಈ ಬಗ್ಗೆ ತಾಲೂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿರುವ ಬಗ್ಗೆ ದೂರು ಅಥವಾ ಮಾಹಿತಿಗಳಿದ್ದಲ್ಲಿ ನಮಗೆ ತಿಳಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ನಂತರ ಆಟೋ ಚಾಲಕ ಗಣಪತಿ ನಾಯ ್ಕ ಮಾತನಾಡಿ ಇಲ್ಲಿನ ಮುಠ್ಠಳ್ಳಿ ಗ್ರಾ.ಪಂ. ವಾಪ್ತಿಯ ಗೆಂಡೆಮುಲ್ಲಿ ಎಂಬ ಮಜಿರೆಯಲ್ಲಿನ ರಸ್ತೆ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದ್ದು, ರಸ್ತೆಯನ್ನು 1ಕೋಟಿ 29 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಿದ್ದು ಕೇವಲ 6 ತಿಂಗಳಲ್ಲಿ ರಸ್ತೆಯ ಡಾಂಬರು ಕಿತ್ತು ಹೋಗಿ ಸಂಚಾರಕ್ಕೆ ಕಷ್ಟವಾಗುತ್ತದೆ. ಹಾಗಿದ್ದರೆ ಇಷ್ಟು ಅಧಿಕ ವೆಚ್ಚದಲ್ಲಿ ನಡೆಸಲಾದ ರಸ್ತೆಯ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವದು ಕಂಡು ಬರುತ್ತಿದ್ದು ಈ ಬಗ್ಗೆ ತನಿಖೆಗೆ ಆಗ್ರಹಿಸಿದರು. ಇದಕ್ಕೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕಿ ಕುಮಾರಿ ಶ್ರುತಿ ಈ ಬಗ್ಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿ ಆ ಬಳಿಕ ಸಮಗ್ರ ತನಿಖೆ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು. 

ಆಟೋ ಚಾಲಕ ಸಂಘದ ಸದಸ್ಯ ಪರಮೇಶ್ವರ ನಾಯ್ಕ ಕಂಡೆಕೊಂಡ್ಲು ಇಲ್ಲಿನ ಆರ್.ಟಿ.ಓ. ಅಧಿಕಾರಿಗಳು ನವೀಕರಣಗೊಳ್ಳುವ ಲೈಸನ್ಸ, ಬ್ಯಾಡ್ಜ ಸೇರಿದಂತೆ ಇನ್ನಿತರ ಪರವಾನಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಜನರಿಂದ ಭಾರಿ ಲಂಚದ ಬೇಡಿಕೆಯಿಡುತ್ತಿದ್ದು, ಇಂತಹ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. 

ನಂತರ ಪುರಸಭಾ ಸದಸ್ಯ ವೆಂಕಟೇಶ ನಾಯ್ಕ ಟಿವಿ-ಮಾಧ್ಯಮ, ಪತ್ರಿಕೆಗಳಲ್ಲಿ ಜಿಲ್ಲೆಯಲ್ಲಿ ನಡೆದ ಕೆಲವು ಅವ್ಯವಹಾರದ ಬಗ್ಗೆ ವರದಿಗಳು ಬರುತ್ತಿದ್ದು, ಈ ಬಗ್ಗೆ ಭ್ರಷ್ಠಾಚಾರ ನಿಗ್ರಹ ದಳವೂ ಗಮನ ಹರಸಿಬೇಕಾಗಿದೆ. ಹಾಗೂ ಇಲ್ಲಿನ ಪುರಸಭೆಯಲ್ಲಿ ಅಂಗಡಿ ಮಳಿಗೆ ಹರಾಜಿನಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಈ ಬಗ್ಗೆ ನೇರ ತನಿಖೆ ಮಾಡಿ ಕ್ರಮಕ್ಕೆ ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವೃತ್ತ ನಿರೀಕ್ಷಕ ರಮೇಶ್ ಹಾಗೂ ಅಧಿಕಾರಿಗಳು, ಆಟೋ ಚಾಲಕ ಸಂಘದ ಸದಸ್ಯರು, ಸಾರ್ವಜನಿಕರು ಮುಂತಾದವರು ಉಪಸ್ಥಿತಿದ್ದರಿದ್ದರು. 

Read These Next

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...