ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ

Source: sonews | By Staff Correspondent | Published on 23rd November 2018, 10:51 PM | Coastal News | Don't Miss |

ಭಟ್ಕಳ: ಶಿಕ್ಷಕರಾಗುವುದು ಸುಲಭದ ಕೆಲಸವಲ್ಲ, ಶಿಕ್ಷಕರಾದವರು ತಾವು ಕೂಡಾ ಅಧ್ಯಯನವನ್ನು ಮಾಡುತ್ತಿರಬೇಕು ಎಂದು ಕುಮಟಾ ಡಾ. ಎ. ವಿ. ಬಾಳಿಗಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎಲ್. ಹೆಗಡೆ ಹೇಳಿದರು. 

ಅವರು ಇಲ್ಲಿನ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. 

ನಮಗೆ ತಾಯಿಯೇ ಮೊದಲ ಗುರುವಾಗಿದ್ದರೂ ಸಹ ನಾವೆಂದೂ ತಾಯಿಯನ್ನು ಗುರುವಿನ ಸ್ಥಾನದಲ್ಲಿ ನೋಡಿಲ್ಲ, ಆದರೆ ಶಿಕ್ಷಕರಲ್ಲಿ ತಾಯಿಯ ಪ್ರೀತಿಯನ್ನು ಕಾಣುವಂತಾಗಬೇಕು. ಶಿಕ್ಷಕ ವೃತ್ತಿಯನ್ನು ಅರಿತು ಮಾಡಿದರೆ ಮಾತ್ರ ಅದು ಸಫಲತೆಯನ್ನು ಕೊಡುತ್ತದೆ ಎಂದರು. 

ಧರ್ಮ, ಅರ್ಥ, ಕಾಮ, ಮೋಕ್ಷ ಇದು ಚತುರ್ವಿದ ಜೀವನ ಕ್ರಮವಾಗಿದೆ. ಆದರೆ ಇಂದು ಮೊದಲ ಹಾಗೂ ಕೊನೆಯನ್ನು ಬಿಟ್ಟು ನಾವು ಅರ್ಥ, ಕಾಮದೆಡೆಗೆ ಮಾತ್ರ ಗಮನ ನೀಡುತ್ತಿದ್ದೇವೆ. ಅದು ಜೀವನವಲ್ಲ ಎನ್ನುವುದು ತಿಳಿಯುವಾಗ ತುಂಬಾ ತಡವಾಗಿತ್ತದೆ. ನಮ್ಮದು ಅತ್ಯಂತ ಶ್ರೀಮಂತ ಪರಂಪರೆ ಇರುವ ದೇಶವಾಗಿದೆ. ನಮ್ಮದು ಭೋಗದ ಜೀವನವಲ್ಲ, ನಮಗೆ ಈ ದೇಶದ ಮಹಾಪುರಷರೇ ಆದರ್ಶ ಪ್ರಾಯರು. ಅವರ ಕುರಿತು ಅಧ್ಯಯನ ಮಾಡಿದಾಗ ಜೀವನವೇನೆಂಬುದು ನಮಗೆ ತಿಳಿಯುವುದು. ಮುಂದೆ ಶಿಕ್ಷಕರಾಗುವ ನೀವು ವಿದ್ಯಾರ್ಥಿಗಳಿಗೂ ಕೂಡಾ ಮಹಾಪುರಷರ ಆದರ್ಶಗಳನ್ನು ಬೋಧಿಸಿ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು ಮಾತನಾಡಿ ಎರಡು ವರ್ಷಗಳ ಬಿ.ಇಡಿ. ಕೋರ್ಸ ಮುಗಿಸಿರುವುದು ಕೇವಲ ಶಿಕ್ಷಕರಾಗುವುದಕ್ಕೆ ಅರ್ಹತೆ ಮಾತ್ರ. ನೀವೋರ್ವ ಉತ್ತಮ ಶಿಕ್ಷಕರಾಗಬೇಕಾದರೆ ಅಧ್ಯಾಪನದಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳಬೇಕು. ಅಲ್ಲದೇ ನೀವು ಕಲಿಸುವ ವಿದ್ಯಾರ್ಥಿಗಳ ಕುರಿತು ನೀವು ಕೆಲಸ ಮಾಡುವ ಸಂಸ್ಥೆಯ ಕುರಿತು ನಿಮಗೆ ಕಾಳಜಿಯಿರಬೇಕು ಎಂದೂ ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಸಮಿತಿಗೆ ನೇಮಕಗೊಂಡಿರುವ ಭಟ್ಕಳ ಎಜ್ಯಕೇಶನ್ ಟ್ರಸ್ಟ್‍ನ ಆಡಳಿತಾಧಿಕಾರಿ ಹಾಗೂ ಶ್ರೀ ಗುರುಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್ಟ ಅವರನ್ನು ಸನ್ಮಾನಿಸಲಾಯಿತು. 

ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕ ಸುಬ್ರಹ್ಮಣ್ಯ ಶೆಟ್ಟಿ, ತಬಸ್ಸಮ್ ಉಪಸ್ಥಿತರಿದ್ದರು. 
ಪ್ರೊ.  ಗಜಾನನ ಶಾಸ್ತ್ರಿ ಹಾಗೂ ಪ್ರೊ. ಗಂಗಾಧರ ನಾಯ್ಕ ಅತಿಥಿಗಳ ಪರಿಚಯ ಮಾಡಿದರು. ಪ್ರಶಿಕ್ಷಣಾರ್ಥಿಗಳಾದ ತಬಿತಾ ಮತ್ತು ಸಂಗೀತಾ ನಿರೂಪಿಸಿದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...