ಅಂಕೋಲಾ :ನಮ್ಮ ಮನೆಯನ್ನು ಅಂದವಾಗಿಟ್ಟುಕೊಳ್ಳುತ್ತೇವೆ, ಆದರೆ ಹೊರಗೆ ಇಡುವುದಿಲ್ಲ, ಇದು ದೇಶದ ದೌರ್ಭಾಗ್ಯ-ಅನಂತ ಕುಮಾರ್

Source: so english | By Arshad Koppa | Published on 26th April 2017, 8:28 AM | Coastal News | Special Report |

ಅಂಕೋಲಾ : ನಮ್ಮ ಮನೆಯನ್ನು ಅಂದವಾಗಿಟ್ಟುಕೊಳ್ಳುತ್ತೇವೆ ಆದರೆ ಮನೆ ಹೊರಗಿನ ಸಾರ್ವಜನಿಕ ಪ್ರದೇಶವನ್ನು ಸ್ವಚ್ಚವಾಗಿಡಲು ನಾವು ಮುಂದಾಗುವುದಿಲ್ಲ ಇದು ನಮ್ಮ ದೇಶದ ದೌರ್‍ಭಾಗ್ಯ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.


ಅವರು ಜೇನುಗೂಡು ವಾಟ್ಸಅಫ್ ಗ್ರೂಫ್ ಕೇಣಿಯಲ್ಲಿ ಹಮ್ಮಿಕೊಂಡ 100 ನೇ ವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೊರಕೆಯನ್ನು ಹಿಡಿದು ಬೀದಿಯನ್ನು ಸ್ವಚ್ಛಗೊಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರಧಾನಿ ಮೋದಿ ಮೊದಲು ಪೊರಕೆಯನ್ನು ಹಿಡಿದು ಕಸವನ್ನು ಗುಡಿಸಲು ಪ್ರಾರಂಭಿಸಿದಾಗ ಕೆಲವರು ಟೀಕೆ ಮಾಡಿದ್ದರು. ಆದರೆ, ಈಗ ಅವರೇ ಮೋದಿಯ ಬಗ್ಗೆ ಹೊಗಳಲು ಪ್ರಾರಂಭಿಸಿದ್ದಾರೆ.
ಸ್ವಚ್ಛ ಭಾರತ ಅಭಿಯಾನಕ್ಕಿಂತ ಪೂರ್ವದಲ್ಲಿಯೇ ಈ ಜೇನುಗೂಡು ಹುಟ್ಟಿಕೊಂಡಿದ್ದು ಒಂದು ಇತಿಹಾಸ. ನಾವು ಮನೆಯನ್ನ ಕೆಳಗಿನಿಂದ ಮೇಲೆ ಕಟ್ಟುತ್ತೇವೆ ಆದರೆ, ಜೇನು ಮೇಲಿನಿಂದ ಕೆಳಗೆ ಗೂಡನ್ನು ಕಟ್ಟುತ್ತದೆ. ನಾವೆಲ್ಲರು ಒಟ್ಟೊಟ್ಟಿಗೆ ಹೆಜ್ಜೆ ಇಡುತ್ತಿದ್ದೇವೆ. ಪರಿಸರದ ಬಗ್ಗೆ ಸಾಮೂಹಿಕ ಬದುಕಿನಲ್ಲಿಯೂ ಶಿಸ್ತನ್ನ ತಂದಾಗ ಮಾತ್ರ ಭಾರತ ಸಂಪೂರ್ಣ ಸ್ವಚ್ಛವಾಗಲು ಸಾಧ್ಯ .
ಭ್ರಷ್ಟ ವ್ಯವಸ್ಥೆ ನಮ್ಮಲ್ಲಿ ಬೇರು ಬಿಟ್ಟಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ ಒಂದು ಸಭೆ ನಡೆಸಿ ಹೇಳಿದರೆ ಸಾಧ್ಯವಿಲ್ಲ. ಮನುಷ್ಯನ ಸಂಪರ್ಕವನ್ನು ಎಷ್ಟೆಷ್ಟು ಕಡಿತಗೊಳಿಸುತ್ತಾರೋ ಅಷ್ಟಷ್ಟು ಭ್ರಷ್ಟಾಚಾರ ಕಡಿಮೆಗೊಳಿಸಬಹುದು. ಕೇವಲ ತಂತ್ರಜ್ಞಾನದಿಂದ ಈ ಭ್ರಷ್ಟಾಚಾರ ತೊಲಗಿಸಲು ಸಾಧ್ಯ. ಚಿಕ್ಕ ಚಿಕ್ಕ ಕೆಲಸಗಳು ದೊಡ್ಡ ಕ್ರಾಂತಿಯನ್ನೆ ಹುಟ್ಟುಹಾಕುತ್ತವೆ. ರಕ್ತ ಹರಿಸಿದರೆ ಮಾತ್ರ ಕ್ರಾಂತಿಯಲ್ಲ. ನಮ್ಮನ್ನ ನಾವು ತಿಳಿದುಕೊಂಡರೆ ಅದು ನಿಜವಾದ ಕ್ರಾಂತಿ. ಆನೆ ತುಳಿದದ್ದೆ ದಾರಿ. ನಿಮ್ಮ ಹೆಜ್ಜೆ ಹೀಗಿರಲಿ ಎಂದರು.
ಊರ ಪ್ರಮುಖ ಹರಿಶ್ಚಂದ್ರ ನಾಯ್ಕ ಮಾತನಾಡಿದರು. ನ್ಯಾಯವಾದಿ ನಾಗಾನಂದ ಬಂಟ ಮನವಿ ನೀಡಿದರು. ಅನಂತ ಕಟ್ಟಿಮನೆ ನಿರೂಪಿಸಿದರು, ಅನಂತ ಕಟ್ಟಿಮನೆ ವಂದಿಸಿದರು. 
ವೇದಿಕೆಯಲ್ಲಿ ದೈವಜ್ಞ ಸಂಘದ ರಾಜ್ಯಾಧ್ಯಕ್ಷ ರಾಮರಾವ್ ರಾಯ್ಕರ, ಅರುಣ ನಾಡಕರ್ಣಿ, ನಿತ್ಯಾನಂದ ಗಾಂವಕರ, ಜೇನುಗೂಡಿನ ಸಂಸ್ಥಾಪನಾಧ್ಯಕ್ಷ ವಿಶಾಲ ಬಂಟ, ಅಧ್ಯಕ್ಷ ವಿಜಯ ಬಂಟ ಉಪಸ್ಥಿತರಿದ್ದರು. ಜೇನುಗೂಡಿನ ಸದಸ್ಯರು, ಊರ ನಾಗರಿಕರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...