ಅಂಜುಮನ್ -ಎ- ಇಸ್ಲಾಂ ಅಂಕೋಲಾ ನೂತನ ಅಧ್ಯಕ್ಷರಾಗಿ ಮಂಜರ್ ಸೈಯ್ಯದ ಅಧಿಕಾರ ಸ್ವೀಕಾರ

Source: sonews | By Staff Correspondent | Published on 26th July 2018, 12:51 AM | Coastal News |

ಅಂಕೋಲ : ಅನೇಕ ವರ್ಷಗಳಿಂದ ನಡೆಯುತ್ತಿದ್ದ ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತ ಬಿಕ್ಕಟ್ಟು ಕೊನೆಗೂ ಚುನಾವಣೆಯ ಮೂಲಕ ಇತ್ಯರ್ಥಗೊಂಡಿದ್ದು, ಮಂಜರ್ ಹುಸೇನ ಸೈಯ್ಯದ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದರು. 

ರಾಜ್ಯ ಹೈಕೋರ್ಟ ಕಳೆದ ಫೆಬ್ರವರಿಯಲ್ಲಿ ನೀಡಿದ ತಿರ್ಪಿನಂತೆ, ಜಿಲ್ಲಾಧಿಕಾರಿಗಳಾದ ಎಸ್.ಎಸ್. ನಕುಲ ಅಂಜುಮನ್ ಸಂಸ್ಥೆಯ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕರ್ನಾಟಕ ರಾಜ್ಯ ವಕ್ಪ ಬೋರ್ಡ ಆದೇಶದಂತೆ ಮತ್ತು ಜಿಲ್ಲಾಧಿಕಾರಿಗಳ ಆಡಳಿತದಲ್ಲಿ ಜಿಲ್ಲಾ ವಕ್ಪ ಅಧಿಕಾರಿ ಅವರು ಚುನಾವಣೆಯ ಪೂರ್ಣ ಜವಬ್ದಾರಿ ಹೊತ್ತು 18 ವರ್ಷದ ಮೇಲ್ಪಟ್ಟರ ಮತದಾರ ಪಟ್ಟಿ ತಯಾರಿಸಿ, ಮಾರ್ಗಸೂಚಿಗಳನ್ನು ಅಧಿಕೃತಗೊಳಿಸಿ ಮೇ ತಿಂಗಳಲ್ಲಿ ಚುನಾವಣಾಧಿಕಾರಿಯಾಗಿ ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಕೆ.ಎಮ್. ಶೇಖ ಅವರನ್ನು ನೇಮಿಸಲಾಗಿತ್ತು.

ಚುನಾವಣಾ ನಿಯಮದಂತೆ ಚುನಾವಣಾಧಿಕಾರಿಗಳು ಪ್ರಕಟಣೆ ಹೊರಡಿಸಿ, ಎಲ್ಲಾ ಚುನಾವಣಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿ ಬ್ಯಾಲೆಟ್ ಪೇಪರ್ ಮುಖಾಂತರ  ಜುಲೈ 15 ಬೊಬ್ರವಾಡದ ಶಾದಿ ಮಹಲದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ತಹಸೀಲ್ದಾರ ಅವರ ನೇತತ್ವದಲ್ಲಿ ಪಾರದರ್ಶಕವಾಗಿ ಅಂಜುಮನ ಎ ಇಸ್ಲಾಂ ಅಂಕೋಲಾ ಸಂಸ್ಥೆಗೆ ಚುನಾವಣೆ ನಡೆಸಿದ್ದರು.

ಈ ಸಂಸ್ಥೆಗೆ 11 ಮಂದಿ ನಿರ್ದೇಶಕರನ್ನು ಚುನಾಯಿಸುವಂತಿದ್ದು, ಒಬ್ಬ ಮತದಾರರಿಗೆ 11 ಮತ ಚಲಾಯಿಸುವ ಹಕ್ಕು ನೀಡಲಾಗಿತ್ತು. ಈ ವೇಳೆ 11 ಮಂದಿ ನಿರ್ದೇಶಕರ ಆಕಾಂಕ್ಷಿಗಳಾಗಿ 28 ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು. ಒಟ್ಟು 930 ಮತದಾರರಲ್ಲಿ 803 ಮತ ಚಲಾವಣೆಯಾಗಿದ್ದು ಕಳೆದ 2 ವರ್ಷದಿಂದ ಆಡಳಿತದಲ್ಲಿದ್ದರನ್ನು ಮತದಾರರು ತಿರಸ್ಕರಿಸಿ ನೂತನ 5 ಸದಸ್ಯರು ಹಾಗೂ 2015 ವರೆಗೆ ಆಡಳಿತ ನಡೆಸಿದ್ದ 6 ಸದಸ್ಯರನ್ನು ಒಟ್ಟೂಗೂಡಿಸಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಿದ್ದಾರೆ. 

ಜುಲೈ 23 ರಂದು ನೂತನ್ ಅಧ್ಯಕ್ಷರಾದ ಮಂಜರ ಸೈಯ್ಯದ ಅವರಿಗೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ ಅವರು ಜಿಲ್ಲಾ ವಕ್ಪ ಅಧಿಕಾರಿ ತಾಜುದ್ದೀನ್ ಅವರ ಮುಖಾಂತರ ಅಧಿಕಾರವನ್ನು ಹಸ್ತಾಂತರಿಸಿದ್ದರು.

ಬಹಳ ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಅಂಜುಮನ್ ಇಸ್ಲಾಂ ಸಂಸ್ಥೆಯ ಚುನಾವಣೆಯನ್ನು ನಡೆಸಿ, ಒಂದು ಸುಸಜ್ಜಿತವಾದ ಸಮಿತಿ ರಚಿಸುವಲ್ಲಿ ಎಲ್ಲಾ ಸಮಾಜದವರೊಂದಿಗೆ ಸೌರ್ಹಾದತೆ ಸಾಧಿಸಿಕೊಂಡಿದ್ದ ಪುರಸಭಾ ನಾಮ ನಿರ್ದೆಶಿತ ಸದಸ್ಯ ಹಾಗೂ ಜಿಲ್ಲಾ ವಕ್ಪ ಬೋರ್ಡ ಸದಸ್ಯ ನವಾಜ್ ಶೇಖ ಅವರು ಹೆಚ್ಚಿನ ಮುತುವರ್ಜಿವಹಿಸಿ ನೂತನ ಸಮಿತಿ ರಚಿಸಿ ಅಂಜುಮನ್ ಸಂಸ್ಥೆಯ ವಿವಾದಕ್ಕೆ ತಿಲಾಂಜಲಿ ನೀಡಿರುವದು ಮುಸ್ಲಿಂ ಸಮೂದಾಯದಲ್ಲಿ ಹಾಗೂ ತಾಲೂಕಿನ ಜನತೆಯ ಹರ್ಷಕ್ಕೆ ಕಾರಣರಾಗಿದ್ದಾರೆ. 

ಮಂಗಳವಾರ ಅಂಜುಮಾನ ಸಂಸ್ಥೆಯ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷ ರಿಜ್ವಾನ್ ಮುಲ್ಲಾ, ಕಾರ್ಯದರ್ಶಿ ನಿಸಾರ ಷಾ, ಖಜಾಂಚಿಯಾದ ರಫೀಖ ಶೇಖ, ಸದಸ್ಯರಾದ ಮೈನುದ್ದೀನ್ ಖಾನ್, ನುರುಲ್ಲಾ ಶೇಖ, ನಸ್ರು ಸೈಯ್ಯದ, ಅನ್ವರ ಸೈಯ್ಯದ, ಅನೀಸ ಮುಜಾವರ, ಸಮಿರ್ ಸೈಯ್ಯದ, ಶರೀಫ್ ಶೇಖ, ಹಾಗೂ ಮಾಜಿ ಅಧ್ಯಕ್ಷ ಎ.ಎಚ್. ದೊಡ್ಮನಿ ಸೇರಿದಂತೆ ಮುಸ್ಲಿಂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
  

ಹಿಂದು ಮುಸ್ಲಿಂ ಭಾಂಧವ್ಯವನ್ನು ಹಾಗೂ ಸೌರ್ಹಾದತೆಯನ್ನು ಕಾಪಾಡಲು ಸೂಫಿ ಸಿದ್ದಾಂತಗಳಂತೆ ಕಾರ್ಯನಿರ್ವಹಿಸಲಾಗುವದು. ಪ್ರಗತಿಯೆ ಆಡಳಿತದ ಮೂಲ ಧ್ಯೇಯವಾಗಿಸಿಕೊಂಡು, ಎಲ್ಲ ವಿರೋಧಿ ಮಿತ್ರರನ್ನು ಒಗ್ಗೂಡಿಸಿ ಸೌರ್ಹಾದತೆ ಕಾಪಾಡಿಕೊಂಡು ಪಾರದರ್ಶಕ ಮತ್ತು ಸುಸಜ್ಜಿತ ಆಡಳಿತ ನಡೆಸಲಾಗುವದು. 
ಮಂಜರ್ ಹುಸೇನ ಸೈಯ್ಯದ.
ಅಧ್ಯಕ್ಷರು ಅಂಜುಮನ ಎ ಇಸ್ಲಾಂ ಅಂಕೋಲಾ.

 

Read These Next