ಅಂಜುಮನ್ ವಿದ್ಯಾರ್ಥಿ ಅಸ್ಜದ್ ರುಕ್ನುದ್ದೀನ್ ಯುನಿವರ್ಸಿಟಿ ಬ್ಲೂ

Source: sonews | By sub editor | Published on 6th March 2019, 6:55 PM | Coastal News | Don't Miss |

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಮಹಾವಿದ್ಯಾಲಯ ಮತ್ತು ಸ್ನಾತಕ ಕೇಂದ್ರ ದ ಬಿ,ಕಾಂ ಅಂತಿಮ ಸೆಮೆಸ್ಟರ್ ವಿದ್ಯಾರ್ಥಿ ಮುಹಮ್ಮದ್ ಅಸ್ಜದ್ ಬಿನ್ ಉಮರ್ ಫಾರುಖ್ ರುಕ್ನುದ್ದೀನ್ ಟೀಯ್ಕೊಂಡೋ (Teakwon-DO) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.  

ಅಂಜುಮನ್ ಶಿಕ್ಷಣ ಸಂಸ್ಥೆಯಿಂದ ಈ ಕ್ರೀಡೆಯಲ್ಲಿ ವಿಶ್ವವಿದ್ಯಾಲಯದ ಪ್ರಥಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಈ ವಿದ್ಯಾರ್ಥಿ ಪಾತ್ರನಾಗಿದ್ದು ಮಾ.9ರಂದು ಹರಿಯಾಣದ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ರೊಹ್ತಕ್ ನಲ್ಲಿ ಜರಗಲಿರುವ ಅಂತರ್ ವಿಶ್ವವಿದ್ಯಾಲಯ ಟೀಯ್ಕೊಂಡೋ (Teakwon-DO)  ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯನವನ್ನು ಪ್ರತಿನಿಧಿಸಲಿದ್ದಾನೆ. ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ ಅಭನಂದಿಸಿದೆ. 

Read These Next