ಭಟ್ಕಳ ಅಂಜುಮನ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳ ಯಶಸ್ವಿ ಫೆಸ್ಟ್

Source: sonews | By Staff Correspondent | Published on 13th November 2017, 6:11 PM | Coastal News | Don't Miss |

ಭಟ್ಕಳ: ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನೊಲಜಿ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಭಟ್ಕಳ ತಾಲೂಕಿನ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ  ಒಂದು ದಿನದ ಫೆಸ್ಟ್ ಯಶಸ್ವಿಯಾಗಿ ಮುಕ್ತಾಯಗೊಂಡಿತು. 
ಮಿನಿ ಸ್ಟೆಮ್ ಫೆಷ್ಟ್-2017 (ಒiಟಿi Sಖಿಇಒ ಈesಣ-2017) ಎಂಬ ಶಿರ್ಷಿಕೆಯಡಿ ಆಯೋಜಿಸಿದ್ದ ಈ ಫೆಸ್ಟ್ ನಲ್ಲಿ ಉತ್ತರಕನ್ನಡ ಜಿಲ್ಲೆಯ ಪದವಿಪೂರ್ವ ಕಾಲೇಜುಗಳು ಸುಮಾರು 200ಕ್ಕೆ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 
‘ಮಾಡಲ್ ಎಕ್ಸ್ಪೋ’ ಮತ್ತು ‘ಕ್ವಿಝೊಮಾನಿಯಾ’ ಎಂಬ ಎರಡು ಪ್ರಮುಖ ವಿಭಾಗಗಳಲ್ಲಿ ನಡೆದ ಈ ಫೆಸ್ಟ್ ನಲ್ಲಿ ಶಿರಸಿಯ ಎಂ.ಇ.ಎಸ್.ಚೈತನ್ಯ ಪಿ.ಯು.ಕಾಲೇಜಿನ ವಿದ್ಯಾರ್ಥಿಗಳಾದ ಸಂಕೇತ್ ಹೆಗಡೆ ಮತ್ತು ಸೌರಭ್ ಹೆಗಡೆ ಕೃಷಿ ಮಾದರಿಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡರು. ಭಟ್ಕಳ ಕಾನ್ವೆಂಟ್ ಪಿ.ಯು ಕಾಲೇಜಿನ ಮುಹಮ್ಮದ್ ನೊಅಮಾನ್, ಆಖಿಫ್ ಅಝ್ಹರ್ ಖಾನ್ ಮತ್ತು ಶಿರೂನ್ ಡ’ಕೋಸ್ತಾ ದ್ವಿತೀಯಾ ಬಹುಮಾನವನ್ನು ಪಡೆದುಕೊಂಡರು. ಅಂಜುಮನ್ ಪದವಿಪೂರ್ವ ಬಾಲಕೀಯರ ಕಾಲೇಜಿನ ಫಾತಿಮಾ ಝೋಹರಾ, ಅಜಿಬಾ ಸೈಯದ್ಯ್, ಆಯಿಶಾ ಅಮಿನಾ ತೃತೀಯ ಬಹುಮಾನ ಪಡೆದುಕೊಂಡರು. 
ಕ್ವಿಝ್ ಸ್ಪರ್ಧೆಯಲ್ಲಿ ಶಿರಸಿ ಎಮ್.ಇ.ಎಸ್.ಕಾಲೇಜಿನ ಸುಶಾಂತ್ ಹೆಗಡೆ, ಮಹೇಶ್ ಹೆಗಡೆ ಪ್ರಥಮ, ಶ್ರೀವತ್ಸಾ ಹಾಗೂ ಸಮಿಯುರ್ರಹ್ಮಾನ್ ದ್ವಿತೀಯಾ, ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ನಿಂಗೇಶ್ವರ ಹೆಗಡೆ ಮತ್ತು ಎಂ.ಬಿ.ರಾಘವ್ ತೃತಿಯಾ ಬಹುಮಾನ ಪಡೆದುಕೊಂಡರು. 
ಬಹುಮಾನ ವಿತರಣಾ ಸಮಾರಂಭದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜುಕಾಕೋ ಅಬ್ದುಲ್ ರಹೀಮ್, ಅಡಿಷ್ನಲ್ ಕಾರ್ಯದರ್ಶಿ ಮುಹಮ್ಮದ್ ಇಸ್ಹಾಖ್ ಶಾಬಂದ್ರಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕ ವರ್ಗದವರು ಉಪಸ್ಥಿತಿರಿದ್ದರು. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...