ಆನಂದ ಆಶ್ರಮ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಗೆ ಸಮಗ್ರ ವಿರಾಗ್ರಣಿ ಪ್ರಶಸ್ತಿ

Source: sonews | By Staff Correspondent | Published on 11th October 2018, 10:41 PM | Coastal News |

ಭಟ್ಕಳ: ಹೊನ್ನಾವರದ ಸಂತ ಅಂತೋನಿ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಇಲ್ಲಿನ ಆನಂದ ಆಶ್ರಮ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಹಾಗೂ ಬಾಲಕಿಯರು ಉತ್ತಮ ಸಾಧನೆ ಮಾಡಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಗುಂಪು ವಿಭಾಗದಲ್ಲಿ ಬಾಲಕರ ಹಾಗೂ ಬಾಲಕಿಯರು ವಾಲಿಬಾಲ್ ಮತ್ತು ಥ್ರೋ ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ  ಸಾಧನೆಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಕಾಂತ ಅಂಬಿಗ, ಅಂತೊನಿ ಮಿರಾಂಡ ಅವರನ್ನು ಆಡಳಿತ ಮಂಡಳಿ, ಶಾಲಾ ಸಂಚಾಲಕಿ ಸಿಸ್ಸರ್ ಲೂಸಿ ಡಿಸೋಜಾ, ಮುಖ್ಯ ಶಿಕ್ಷಕಿ ಸಿಸ್ಟರ್ ಸರಿತಾ ತೋರಸ್, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ. 
 

Read These Next