ರಾಜ್ಯದ ೨೨೪ ಶಾಸಕರ ಸದಸ್ಯತ್ವ ರದ್ದುಗೊಳಿಸುವಂತೆ ಆಗ್ರಹಿಸಿ ರೈತಸಂಘದಿಂದ ವಿನೂತನ ಪ್ರತಿಭಟನೆ

Source: sonews | By Staff Correspondent | Published on 17th September 2018, 10:58 PM | State News | Special Report | Don't Miss |

ಕೋಲಾರ: ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಿ ರಾಜ್ಯದ ಜ್ವಾಲಂತ ಸಮಸ್ಯೆಗಳಿಗೆ ಸ್ಪಂಧಿಸದೆ ಸಿಂಹಾಸನಕ್ಕಾಗಿ ಬೀದಿ ನಾಯಿಗಳಂತೆ ಜಗಳವಾಡುತ್ತಿರುವ 224 ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಿ, ರಾಜ್ಯಪಾಲರ ಆಳ್ವಿಕೆಯನ್ನು ಜಾರಿಗೊಳಿಸಿ,ಸಂಕಷ್ಟದಲ್ಲಿರುವ ಜನರ ಕಷ್ಟಗಳಿಗೆ ಸ್ಪಂಧಿಸಬೇಕೆಂದು ಒತ್ತಾಯಿಸಿ ರೈತ ಸಂಘದಿಂದ  ಕುರ್ಚಿ ಮತ್ತು ನಾಯಿಗಳ ಜೊತೆಗೆ ಹೋರಾಟ ಮಾಡಿ ತಹಶೀಲ್ದಾರ್ ಮುಖಾಂತರ  ರಾಜ್ಯಪಾಲರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಜನರ ಕಷ್ಟಗಳಿಗೆ ಸ್ಪಂದಿಸಿ ಜನ ಪರ ಆಡಳಿತ ನೀಡಬೇಕಾದ ಸರ್ಕಾರಗಳು ಇಂದು ಸರ್ಕಾರ ರಚನೆ ಮಾಡಿ 4 ತಿಂಗಳು ಕಳೆದರೂ ಸಿಂಹಾಸನ ಉಳಿಸಿಕೊಳ್ಳಲು ಹರಸಾಹಸ ಪಟ್ಟು ನಾಯಿಗಳಂತೆ ಜಗಳವಾಡಿಕೊಂಡು ಕುದುರೆ ವ್ಯಾಪಾರದಲ್ಲಿ ತೊಡಗಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ರಾಜ್ಯದ ಜನರ ಜ್ವಲಂತ ಸಮಸ್ಯೆಗಳಾದ  ಪ್ರಮುಖವಾದ  ತೀವ್ರವಾದ ಬರಗಾಲ ಒಂದು ಕಡೆಯಾದರೆ ಮತ್ತೊಂದುಕಡೆ ಬೀಕರವಾದ ಪ್ರವಾಹಕ್ಕೆ ಸಿಲುಕಿ ಲಕ್ಷಾಂತರ ಕುಟುಂಬಗಳು ಬೀದಿಪಾಲಾಗುತ್ತಿದ್ದರೂ, ಅದಕ್ಕೆ ಸ್ಪಂದಿಸಿ ಜನರ ಕಷ್ಟಗಳಿಗೆ ಪರಿಹಾರ ಕೊಡಬೇಕಾದ ಸರ್ಕಾರ ಕೋಮಾಸ್ಥಿತಿಯಲ್ಲಿದೆ ಒಂದು ಸುಸ್ಥಿತರ ಆಡಳಿತ ನೀಡುವಲ್ಲಿ ಸಮಿಶ್ರ ಸರ್ಕಾರ ವಿಫಲವಾಗುತ್ತಿದೆ. ಈಗಾಗಲೇ ಬರಗಾಲದಿಂದ ತತ್ತರಿಸಿ ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆಯಿಲ್ಲ ಮತ್ತೊಂದಡೆ ಹಾಲು, ರೇಷ್ಮೆ, ಟೆಮೋಟೋ ಕುಸಿತದಿಂದ ಕಂಗಾಲಾಗಿ ಗ್ರಾಮೀಣ ಪ್ರದೇಶಗಳನ್ನು ತೊರೆದು ಗೂಳೆಹೋಗುವ ಜನರಿಗೆ ಸಮರ್ಪಕವಾದ ಪರಿಹಾರ ಹಾಗೂ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕಾದ ಸರ್ಕಾರ ಸಿಂಹಾಸನಕ್ಕಾಗಿ ಮೂರು ಪಕ್ಷಗಳು ಬೀದಿನಾಯಿಗಳಂತೆ ಜಗಳವಾಡಿಕೊಂಡು ಕೋಮಾಸ್ಥಿತಿಯಲ್ಲಿರುವ ರೋಗಿಯಂತೆ ಒದ್ದಾಡುತ್ತಿದ್ದಾರೆ. ಮತ್ತೊಂದು ಕಡೆ ಸರ್ಕಾರಿ ಕಛೇರಿಗಳಲ್ಲಿ ಭ್ರಷ್ಟಾಚಾರತೆಗೆ ಕಡಿವಾಣ ವಿಲ್ಲದೆ, ಜನ ಸಾಮಾನ್ಯರ ಬದುಕು ಅತಂತ್ರ ಸ್ಥಿತಿಯಾಗುತ್ತದೆ. ಯಾವುದೇ ಸರ್ಕಾರಿ ಕಛೇರಿಯಲ್ಲಿ ಕೆಲಸ ಆಗಬೇಕಾದರೆ ಹಣವಿಲ್ಲದೆ ಜನ ಸಾಮಾನ್ಯರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಇಷ್ಟೆಲ್ಲಾ ರಾಜ್ಯದ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸಬೇಕಾದ ಸರ್ಕಾರ ಮತ್ತು ವಿರೋದ ಪಕ್ಷಗಳ ಕಚ್ಚಾಟ ಮತ್ತು ಕುದುರೆ ವ್ಯಾಪಾರದಿಂದ ಜನರು ಬೇಸತ್ತು ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಬಹುಮತ ಪಡೆಯಲು ಯೋಗ್ಯತೆಯಿಲ್ಲದೆ ಸರ್ಕಾರ ರಾಜೀನಾಮೆ ಕೊಟ್ಟು ಜನರ ಮುಂದೆ ಬರಲಿ ಈ ರೀತಿ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ನೀಡುತ್ತಿರುವ ಸರ್ಕಾರ ಮತ್ತು ವೀರೋದ ಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಬರಗಾಲಕ್ಕೆ ಸಿಲುಕಿ ಮಳೆ ಆಶ್ರಿತ ಬೆಳೆಗಳಾದ ರಾಗಿ, ಜೋಳ, ತೊಗರಿ, ನೆಲಗಡಲೆ, ಹುರಳಿಬೆಳೆಗಳು ಸಂಪೂರ್ಣ ನಾಶವಾಗಿ ತುತ್ತು ಊಟಕ್ಕೆ ಜನ ಪರದಾಡುತ್ತಿದ್ದರೆ, ಮತ್ತೊಂದು ಕಡೆ ಬೀಕರವಾದ ಮಳೆರಾಯನ ಆರ್ಭಟಕ್ಕೆ ಹೆಚ್ಚಿದ ಮಳೆಯಿಂದ ಸಂಪೂರ್ಣವಾಗಿ ಜನ ಸಾಮಾನ್ಯರ ಬದುಕು, ಬೀದಿಗೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂಧಿಸದೆ, ತಮ್ಮ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಬೇಕಾದ ಶಾಸಕರು, ರೆಸಾರ್ಟ್ ರಾಜಕೀಯ ಒಂದುಕಡೆಯಾದರೆ ಮತ್ತೊಂದು ಕಡೆ ಮೂರು ಪಕ್ಷದ ನಾಯಕರು ಸಿಂಹಾಸನಕ್ಕಾಗಿ ಆರೋಪ ಪ್ರತಿ ಆರೋಪಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದು, ಇದರಿಂದ ಜನರ ಸಾಮಾನ್ಯರ ಕಗ್ಗೋಲೆಯ ಜೊತೆಗೆ ಪ್ರಜಾಪ್ರಭುತ್ವವನ್ನೇ ಹಾಡು ಹಗಲೇ ಕಗ್ಗೋಲೆ ಮಾಡುತ್ತಿರುವ 224 ಶಾಸಕರ ಸದಸ್ಯಸತ್ವವನ್ನು ರದ್ದುಗೊಳಿಸಿ, ಜನರ ಸಾಮಾನ್ಯರಿಗೆ ಸ್ಪಂಧಿಸಲು ರಾಜ್ಯಪಾಲರ ಆಳ್ವಿಕೆಯನ್ನು ಜಾರಿಗೊಳಿಸಿ, ಸಂಕಷ್ಠದಲ್ಲಿರುವ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂಧಿಸಿಸುವ ಜೊತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿನ ಜಿಲ್ಲಾಧಿಕಾರಿಗಳಿಗೆ ಕೂಡಲೇ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತವಾದ ಮಾಹಿತಿಯನ್ನು ಪಡೆಯಬೇಕು. ಮತ್ತು ಸರ್ಕಾರಿ ಕಛೇರಿಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಲಂಚಮುಕ್ತ ಇಲಾಖೆಯನ್ನಾಗಿ ಮಾಡಬೇಕು. ಮತ್ತು ಮತ ಪಡೆದು, ಪ್ರಜಾಪ್ರಭುತ್ವನ್ನು ಕಗ್ಗೋಲೆ ಮಾಡುತ್ತಿರುವ ಎಲ್ಲಾ ಶಾಸಕರ ವಿರುದ್ಧ ಕ್ರಿಮಿನಲ್ ಮೊಕದಮ್ಮೆಯನ್ನು ದಾಖಲು ಮಾಡಿ, ಜೈಲಿಗೆ ಕಳುಹಿಸಿ, ಪ್ರಜಾಪ್ರಭುತ್ವದ ಮೇಲೆ ಜನ ಸಾಮಾನ್ಯರಿಗೆ ನಂಬಿಕೆಯನ್ನು ಉಳಿಸಬೇಕು ಇಲ್ಲವಾದರೆ ಲಕ್ಷಾಂತರ ಜನ ಜಾನುವಾರುಗಳ ವಿಧಾನಸೌಧ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ನೀಡಿದರು.

ಹೋರಾಟದಲ್ಲಿ  ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಫಾರೂಕ್‍ಪಾಷಾ, ಹೂವು ಸೈಯದ್, ಆನಂದ್, ಸಾಗರ್, ರಂಜಿತ್, ಮೇಲಾಗಣಿ ದೇವರಾಜ್, ವಿಜಯ್‍ಪಾಲ್, ಚಂಬೆ ರಾಜೇಶ್, ಲತ, ಅನುಶ್ರೀ, ಶೇಷಾದ್ರಿ, ಬೇತಮಂಗಲ ಗಣೇಶ್ ಟೈಗರ್ ಮಂಜು, ವೇಮಗಲ್, ನಟರಾಜ್, ಅಮರ ನಾರಾಯಣಸ್ವಾಮಿ, ಗೋವಿಂದಪ್ಪ,  ಬಾಲು ಸುಪ್ರೀಂ ಚಲ, ಪುತ್ತೇರಿ ರಾಜು, ಹೊಸಹಳ್ಳಿ ವೆಂಕಟೇಶ್, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಐತಂಡಹಳ್ಳಿ ಅಮರೀಶ್, ಪುರುಷೋತ್ತಮ್, ಕೆಂಬೋಡಿ ಕೃಷ್ಣೇಗೌಡ, ಚಂದ್ರಪ್ಪ, ನಾಗೇಶ್, ಕೊಂಡೇನಹಳ್ಳಿ ಮುರುಳಿ ಮುಂತಾದವರಿದ್ದರು.

 


    

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...