ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೋಬೆಲ್ ಪುರಸ್ಕಾರ

Source: sonews | By Staff Correspondent | Published on 3rd October 2017, 11:48 PM | Global News | Don't Miss |

ಸ್ಟಾಕ್‌ಹೋಮ್: ಶತಮಾನದ ಹಿಂದೆ ಪ್ರಪ್ರಥಮ ಬಾರಿಗೆ ಆಲ್ಬರ್ಟ್ ಐನ್‌ಸ್ಟೈನ್ ಊಹಿಸಿದ್ದ ಸಮಯ ಮತ್ತು ಅಂತರದ ಆಧಾರದಲ್ಲಿ ರಚಿತವಾಗಿರುವ ಸಣ್ಣ ತರಂಗಾತರವಾದ ಗುರುತ್ವಾಕರ್ಷಕ ತರಂಗಗಳನ್ನು ಅನ್ವೇಷಿಸಿದ ಅಮೆರಿಕದ ಮೂವರು ಭೌತವಿಜ್ಞಾನಿಗಳಿಗೆ ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರ ಘೋಷಿಸಲಾಗಿದೆ.

ರೈನರ್ ವೀಸ್, ಕಿಪ್ ಥ್ರೋನ್ ಮತ್ತು ಬೆರ್ರಿ ಬ್ಯಾರಿಷ್‌ರನ್ನು ಭೌತಶಾಸ್ತ್ರದಲ್ಲಿ ನೋಬೆಲ್ ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯ ಮೊತ್ತವಾದ 8,25,000 ಪೌಂಡ್ ಹಣದಲ್ಲಿ ವೀಸ್‌ಗೆ ಅರ್ಧಾಂಶದಷ್ಟು ಹಣ ಹಾಗೂ ಉಳಿದ ಅರ್ಧಾಂಶ ಹಣವನ್ನು ಉಳಿದಿಬ್ಬರಿಗೆ ಹಂಚಲಾಗುವುದು ಎಂದು ‘ರೋಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈಂಟಿಸ್ಟ್ ’ ಹೇಳಿಕೆಯಲ್ಲಿ ತಿಳಿಸಿದೆ.

‘ಲಿಗೊ’ ಎಂದೇ ಹೆಸರಾಗಿರುವ ‘ಲೇಸರ್ ಇಂಟರ್‌ಫೆರೊಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೇಟರಿ’ - ಗುರುತ್ವಾಕರ್ಷಕ ತರಂಗಗಳ ದರ್ಶನ ಸಾಧನ-ವನ್ನು ಅನ್ವೇಷಿಸುವಲ್ಲಿ ಈ ಮೂವರು ವಿಜ್ಞಾನಿಗಳೂ ಪ್ರಮುಖ ಪಾತ್ರ ವಹಿಸಿದ್ದರು. 2015ರ ಸೆಪ್ಟೆಂಬರ್‌ನಲ್ಲಿ ಗುರುತ್ವಾಕರ್ಷಕ ತರಂಗಗಳ ಐತಿಹಾಸಿಕ ದರ್ಶನ ಸಾಕಾರವಾಗಿತ್ತು.

    ಮೆಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗೌರವ ಪ್ರೊಫೆಸರ್ ಆಗಿರುವ ವೀಸ್, ‘ಲಿಗೊ’ದ ಪರಿಕಲ್ಪನೆ, ವಿನ್ಯಾಸ, ಇದಕ್ಕೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲ, ರಚನೆ ಮುಂತಾದ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೊಫೆಸರ್ ಆಗಿರುವ ಕಿಪ್ ಥ್ರೋನ್ ಗುರುತ್ವಾಕರ್ಷಕ ತರಂಗಗಳ ಸ್ವರೂಪದ ಬಗ್ಗೆ ಮಹತ್ವದ ಸಂಶೋಧನೆ ನಡೆಸಿದ್ದರು. ಕ್ಯಾಲಿಫೋರ್ನಿಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗೌರವ ಭೌತವಿಜ್ಞಾನಿ ಆಗಿರುವ ಬೆರ್ರಿ ಬ್ಯಾರಿಷ್ ಈ ಮಹತ್ತರ ಸಂಶೋಧನಾ ಕಾರ್ಯ ಸಾಂಗವಾಗಿ ಮುಂದುವರಿಯಲು ಪ್ರಧಾನ ಪಾತ್ರ ವಹಿಸಿದ್ದರು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...