ಅಂಬ್ಯುಲೆನ ಬಡಿದು ಗಂಭೀರ ಗೊಂಡ ವ್ಯಕ್ತಿ ಸಾವು

Source: SO News | By Manju Naik | Published on 27th July 2018, 1:39 AM | Coastal News |

ಭಟ್ಕಳ: ಕಳೆದ ಭಾನುವಾರದಂದು ಮಧ್ಯಾಹ್ನ ಇಲ್ಲಿನ ಸಾಗರ ರಸ್ತೆಯ ಸಬ್ಬತ್ತೆ ಕ್ರಾಸ್ ಬಳಿ ಅಂಬ್ಯುಲೆನ್ಸ ಬೈಕಗೆ ಬಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ತಂದೆ ಮಗಳು ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ ಬೈಕ ಸವಾರ(ತಂದೆ)ಕೃಷ್ಣಾ ಲಚ್ಮಯ್ಯಾ ನಾಯ್ಕ (55)  ಬುಧವಾರದಂದು  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ತನ್ನ ಮಗಳನ್ನು ಭಟ್ಕಳದ ಕಡೆಗೆ ಮನೆಯಿಂದ ಕರೆದುಕೊಂಡು ಹೋಗುತ್ತಿರುವ ವೇಳೆ ಹುಬ್ಬಳ್ಳಿ ಆಸ್ಪತ್ರೆಯ ಅಂಬ್ಯುಲೆನ್ ಬಡಿದು ಬೈಕ್ ಸವಾರನ ಹಾಗೂ ಆತನ ಮಗಳ ಕಾಲಿಗೆ ಗಂಭೀರ ಗಾಯಗೊಂಡಿತ್ತು. 
ಬೈಕ ಸವಾರ ಚಿಕಿತ್ಸೆಯಲ್ಲಿರುವಾಗ ಚಿಕಿತ್ಸೆ ಫಲಕಾರಿ ಆಗದೇ ಅವರಿಗೆ ಬಲ ತೊಡೆಯ ಭಾಗಕ್ಕೆ ಆದ ತೀವ್ರ ಗಾಯದಿಂದಲೇ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ.

Read These Next

ದ.ಕ.ಜಿಲ್ಲೆಯಲ್ಲಿ 441 ಡೆಂಗ್ ಪ್ರಕರಣಗಳು ಪತ್ತೆ; ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗವಾದ ಡೆಂಗ್ ಹಾಗೂ ಮಲೇರಿಯಾ ಹಾವಳಿ ತೀವ್ರಗೊಂಡಿದ್ದು, ನಿನ್ನೆ ಸಂಜೆ (ಗುರುವಾರ) ಶಾಲಾ ...