ವಿಶ್ವರತ್ನ ಡಾ|| ಬಾಬಾಸಾಹೇಬ ಅಂಬೇಡ್ಕರ

Source: S O News service | By sub editor | Published on 14th April 2017, 11:36 PM | Special Report | Public Voice |


ಭಾರತರತ್ನ, ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ರಾಜಕೀಯತಜ್ಞ, ಆಧುನಿಕ ಭಾರತದ ನಿರ್ಮಾಪಕ, ಬೋದಿಸತ್ವ, ರೈತರ ಪಾಲಿನ ಭಾಗ್ಯದಾತ, ಅಪ್ಪಟ ದೇಶಪ್ರೇಮಿ, ಡಾ|| ಬಾಬಾ ಸಾಹೇಬ ಅಂಬೇಡ್ಕರ ರವರು ಮಹಾರಾಷ್ಟ್ರದ ರತ್ನಾಗಿರಿಯ ಜಿಲ್ಲೆಯ ಅಂಬೇವಾಡಿ ಎಂಬ ಗ್ರಾಮದಲ್ಲಿ ೧೮೯೧ ಎಪ್ರೀಲ್ ೧೪ ರಂದು ಜನಸಿದಿರು. ತಂದೆ ರಾಮಜೀ ಸಕ್ಫಲ, ತಾಯಿ ಭೀಮಾಬಾಯಿ ೧೪ ನೇ ಮಗನಾಗಿ ಮಹಾರಾಷ್ಟರದ ‘ಮಹಾರ’ ಕುಟುಂಬದಲ್ಲಿ ಜನಿಸಿದರು. ಇವರಿಗೆ ಭೀಮರಾವ ಎಂಬ ಹೆಸರನ್ನು ಇಟ್ಟರು. ತಂದೆ-ರಾಮಜಿ, ತಾಯಿ-ಭೀಮಾಬಾಯಿ. ತಂದೆಯವರು ಮಿಲಿಟರಿ ಇದ್ದರು. ಇವರ ಪ್ರಾಥಮಿಕ ಶಿಕ್ಷಣ ದಾಪೋಲಿಯಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಮುಂಬಯಿಯ ಎಲ್ಪಿಸ್ಟನ್ ಶಾಲೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಮುಂದೆ ಅಂಬೇಡ್ಕರ್ ಎಂಬ ಬ್ರಾಹ್ಮಣ ಶಿಕ್ಷಕ ಭೀಮಜಿಯನ್ನು ಪ್ರೀತಿಯಿಂದ ಅಂಬೇಡ್ಕರ ಎಂದು ಕರೆಯುತ್ತಿದ್ದರು. ಅಂದಿನಿಂಧ ಭೀಮಜಿಗೆ ಅದೇ ಹೆಸರಾಯಿತು. ೧೯೦೬ ರಲ್ಲಿ ರಮಾಬಾಯಿ ಜೊತೆ ಮದುವೆಯಾದರು. ಮುಂದೆ ಮುಂಬಯಿಯಲ್ಲಿ ಎಲ್ಪಿಸ್ಟನ್ iಹಾವಿದ್ಯಾಲಯದಿಂಧ ಬಿ.ಎ ಪದವಿ ಪಡೆದರು. ಅಮೇರಿಕಾದ ವಿಶ್ವ ಪ್ರಸಿದ್ಧ ಕೊಲಂಬಯಿ ವಿಶ್ವವಿದ್ಯಾಲಯದಿಂದ ಎಮ್. ಎ ಪದವಿ, & ಪಿ. ಎಚ್. ಡಿ ಪದವಿ ಪಡೆದರು. ಇವತ್ತು ಸಹಿತ ಕೊಲಂಬಿಯಾ ವಿಶ್ವವಿದಾಲಯದ ಮುಖ್ಯದ್ವಾರದ ಒಳಗಡೆ ಎದರುಗಡೆ “ಡಾ|| ಬಿ. ಆರ್. ಅಂಬೇಡ್ಕರ ರವರ ಭಾವಚಿತ್ರ ಇಡಲಾಗಿದೆ ಹಾಗೂ “ನಮಗೆ ಅಭಿಮಾನವಿದೆ, ಇಂಥಹ ವ್ಯಕ್ತಿಯು ನಮ್ಮ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ಹೋಗಿದ್ದಾರೆ ಮತ್ತು ಭಾರತ ದೇಶದ ಸಂವಿದಾನ ಬರೆದು ಆ ದೇಶಕ್ಕೆ ಮಹಾ ಉಪಕಾರ ಮಾಡಿದ್ದಾರೆ” ಎಂದು ಬರೆಯಲಾಗಿದೆ. ಕೊಲಂಬಿಯಾ ವಿಶ್ವವಿದ್ಯಾಲಯ ಆರಂಭಗೊಂಡು ೩೦೦ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಪೂರ್ಣ ೩೦೦ ವರ್ಷಗಳಲ್ಲಿಯೇ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು ? ಎಂದು ಸಮೀಕ್ಷೆ ನಡೆಸಲಾಯಿತು. ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ೬ ಮಹಾನ ವ್ಯಕ್ತಿಗಳ ಹೆಸರಿನ ಪಟ್ಟಿಯಲ್ಲಿ ನಂ-೧ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ ವ್ಯಕ್ತಿಯೆ ಹೆಸರೇ ವಿಶ್ವರತ್ನ ಡಾ|| ಬಿ. ಆರ್. ಅಂಬೇಡ್ಕರ


ಹೋರಾಟಗಳು

    ಮಹಾಡ ಕೆರೆಯ ಹೋರಾಟ :- ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳಲ್ಲಿ ವಿವಿಧ ಹಕ್ಕೋತ್ತಾಯ ಆಗ್ರಹಿಸಿ ಬಹಳಷ್ಟು ಮಹನಿಯರು ಆ ಮಾನವಹಕ್ಕುಗಳನ್ನು ಪಡೆಯುವಲ್ಲಿ ಉಗ್ರ ಹೋರಾಟಗಳು ನಡೆದಿವೆ. ಇದೇ ಪ್ರಪಂಚದಲ್ಲಿ ಮೊಟ್ಟ ಮೊದಲ ಬಾರಿಗೆ ಕುಡಿಯುವ ನೀರಿಗೆ ಹೋರಾಟವು ಮಹಾರಾಷ್ಟ್ರದ ಕೋಬಾ ಜಿಲ್ಲೆಯ ಮಹಾಡದಲ್ಲಿ ೧೯೨೭ ಮಾರ್ಚ ೨೦ ರಂದು ನಡೆಯಿತು. ನೀಡುವ ಕುಡಿಯುವ ಹಕ್ಕು ಅಸ್ಪಶ್ಯರಿಗೆ ಈ ಮಹಾಡ ಚಳುವಳಿಯಿಂದ ದೊರಕಿತು. ಇದಕ್ಕೆ ನೇತೃತ್ವ ಡಾ|| ಬಾಬಾಸಾಹೇಬ ಅಂಬೇಡ್ಕರ ವಹಿಸಿದ್ದರು.

ಮಹಿಳೆಯರಿಗಾಗಿ ಹೋರಾಟ : - ಈ ದೇಶದ ಮಹಿಳೆಯರಿಗೆ ಸಮಾನತೆ ಪ್ರತಿಪಾದಿಸುವ ಹಿಂದೂ ಕೋಡಬಿಲ್ಲನ್ನು ಮಂಡಿಸಿದರು. ಆದರೆ ಸವರ್ಣಿಯರ ವಿರೋಧದಿಂದ ಅದು ಜಾರಿಗೆ ಬರಲಿಲ್ಲ. ಅದಕ್ಕಾಗಿ ಅಂಬೇಡ್ಕರ ರವರು ತಮ್ಮ ಕಾನೂನು ಮಂತ್ರಿ ಪದವಿಗೆ ರಾಜಿನಾಮೆ ಕೊಟ್ಟರು.

ದುಂಡು ಮೇಜಿನ ಸಮ್ಮೇಳನ :- ಕ್ರಿ.ಶ ೧೯೩೦-೩೨ ರಲ್ಲಿ ಭಾರತದ ರಾಜ್ಯಾಂಗದ ಸುಧಾರಣೆ ಕುರಿತು ೩ ದುಂಡು ಮೇಜಿನ ಸಮ್ಮೇಳನಗಳು ಲಂಡನಿನಲ್ಲಿ ನಡೆದವು. ಅದರಲ್ಲಿ ಬಾಬಾಸಾಹೇಬ ಅಂಬೇಡ್ಕರ ರವರು ಭಾಗವಹಿಸಿದ್ದರು. ದುಂಡು ಮೇಜಿನ ಸಭೆಯಲ್ಲಿ ಅಂಬೇಡ್ಕರ ಕುಳಿತಿದ್ದಾಗ ಅವರಿಗೆ ಟೆಲಿಗ್ರಾಂ ಬಂತು ಅದು ಏನು ಅಂದರೆ, ಅವರ ಮಗನು ತಿರಿಕೊಂಡ ಎಂಬ ಆಗ ಅಂಬೇಡ್ಕರವರಿಗೆ ನೀವು ಭಾರತಕ್ಕೆ ಹೋಗುತ್ತೀರಾ ಎಂದು  ಕೇಳಿದಾಗ ಅವರು ಒಂದು ಮಾತನ್ನು ಹೇಳುತ್ತಾರೆ “ನಾನು ನನ್ನ ಮಗ ತೀರಿಕೊಂಡಿತು ಅಂಥಾ ವಾಪಸ್ಸು ಹೋದರೆ ನನ್ನನ್ನು ನಂಬಿದ ಕೋಟ್ಯಾಂತರ ದಲಿತರು, ಬಡವರು, ಮಹಿಳೆಯರು, ಅವರೆಲ್ಲಾ ನನ್ನ ಮಕ್ಕಳೇ ಅವರು ಸಾಯುತ್ತಾರೆ” ಎಂದು ಆ ಸಭೆಯಲ್ಲಿ ಹೇಳಿದರು. ಆ ಸಭೆಯಲ್ಲಿ ಇಂಡಿಯಾದ ಒಟ್ಟು ಜನಸಂಖ್ಯೆಯ ೬೦% ರಷ್ಟಿದ ದುರ್ಬಲ, ಬಡಜಾತಿಗಳಿಗೆ ಸೇರಿದವರ ದುಃಸ್ಥಿತಿಗಳ ಬಗ್ಗೆ ಮಾತನಾಡಿದ ಏಕೈಕ ವ್ಯಕ್ತಿ ಡಾ|| ಬಾಬಾಸಾಹೇಬ ಅಂಬೇಡ್ಕರ ತನ್ನ ಮಗನ ಅಂತ್ಯಕ್ರಿಯೆಗೂ ಬಾರದೇ ಭಾರತದ ದಲಿತರ ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ಮಹಿಳೆಯರ ಸ್ವಾತಂತ್ರ್ಯ ಸಮಾನತೆಗಾಗಿ ಚಿಂತಿಸಿದ ದುಡಿದ ಏಕೈಕ ವ್ಯಕ್ತಿ ಡಾ|| ಅಂಬೇಡ್ಕರ.

ರಾಜಕೀಯ ಬಗ್ಗೆ :- ಬಾಬಾಸಾಹೇಬರು ಅಂಬೇಡ್ಕರವರು ನುರಿತ ರಾಜಕೀಯ ತಜ್ಞ ಎಂದರೆ ತಪ್ಪಾಗಲಾರದು. ೧೯೩೬ ರಲ್ಲಿ ಸ್ವಾತಂತ್ರ್ಯ ಕಾರ್ಮಿಕ ಪಕ್ಷ ಹುಟ್ಟು ಹಾಕಿದರು. ೧೯೩೭ ರಲ್ಲಿ ತಮ್ಮ ಪಕ್ಷದ ೧೫ ಸೀಟುಗಳನ್ನು ಗೆದ್ದುಕೊಂಡರು. ಅದಕ್ಕಾಗಿ ಬಾಬಾಸಾಹೇಬರು ೧೯೪೨ ಅಗಸ್ಟ ೨೩ ರಂದು ದೆಹಲಿಯಲ್ಲಿ ತಮಮ್ ಭಾಷಣದಲ್ಲಿ “ರಾಜ್ಯದ ಆಡಳಿತ ಬಿಗದ ಕೈಯನ್ನು ನಿಮ್ಮ ಕೈಗೆ ತರಲು ನಾನು ಯತ್ನಿಸುತ್ತೇನೆ. ನೀವೂ ಇತರರ ಜೊತೆ ಸಮಾನತೆಯ ಆಧಾರದ ಮೇಲೆ ಆ ರಾಜಕೀಯ ಅಧಿಕಾರ ಹಂಚಿಕೊಂಡು ಮೂನ್ನಗಬೇಕು  ಎಂದು ಕರೆನೀಡುತ್ತಾರೆ.  ಅಂಬೇಡ್ಕರ ತಮ್ಮ ಜೀವಿತಾವದಿಯಲ್ಲಿ ೩ ಪಕ್ಷಗಳನ್ನು ಸ್ಥಾಪಿಸುತ್ತಾರೆ.  ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಠ ಜಾತಿಗಳ ಒಕ್ಕೂಟ, ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ.

    ಭಾರತ ದೇಶದಲ್ಲಿ ಅತ್ಯಂತ ದೊಡ್ಡದಾದ ಬ್ಯಾಂಕ ರಿಜರ್ವ ಬ್ಯಾಂಕ ಆಫ್ ಇಂಡಿಯಾ ( R.B.I) ಸ್ಥಾಪಿಸಲು ಕಾರಣರಾದ್ದದೇ ಅಂಬೇಡ್ಕರರವರು ಹಿಂದು ಧರ್ಮದ ಸಾಮಾಜಿಕ ಸುಧಾರಣೆಗೆ ಯತ್ನಿಸಿದ್ದು, ಕಾರ್ಮಿಕ ನೀತಿ, ವಿದ್ಯುತ ಮತ್ತು ನೀರಾವರಿ ನೀತಿ, ದಾಮೋದರ ಕಣಿವೆ ಯೋಜನೆ, ಹಿರಾಕುಡ್ ಯೋಜನೆ, ಸೋನಾ ಕಣಿವೆ ಯೋಜನೆ, ೨ ನೇ ಮಹಾಯುದ್ದ  ನಂತರ ದೇಶದ ಆರ್ಥಿಕ ನೀರಿ ರೂಪಿಸಿದ್ದು ಅಷ್ಟೆ ಅಲ್ಲದೇ ಭಾರತೀಯ ಸಂವಿಧಾನವನ್ನು ರಚಿಸಿದರು. ಅದು ಜನವರಿ ೨೬, ೧೯೫೦ ರಂದು ಜಾರಿಗೆ ಬಂತು.

ಆಧುನಿಕ ಅರ್ಥ ಶಾಸ್ತ್ರಜ್ಞ :- ಬಾಬಾ ಸಾಹೇಬರು ದೇಶದ ಆರ್ಥಿಕತೆ ಮತ್ತು ಹಣಕಾಸು ಕ್ಷೇತ್ರಕ್ಕೆ ಅದ್ಬುತ ಕೊಡುಗೆ ನೀಡಿದ್ದಾರೆ. ಇತ್ತಿಚೇಗೆ ನೋಬೆಲ್ ಪ್ರಶಸ್ತಿ ವಿಶೇಷ ಅರ್ಥಶಾಸ್ತ್ರಜ್ಞ ಅಮೃತ ಸೇನರವರು ಹೀಗೆ ಹೇಳುತ್ತಾರೆ. “ಅಂಬೇಡ್ಕರ ನನ್ನ ಅರ್ಥಶಾಸ್ತ್ರಜ್ಞದ ಗುರು ಎನ್ನುತ್ತಾರೆ. ಬಾಬಾಸಾಹೇಬರು “ರೂಪಾಯಿ ಸಮಸ್ಯೆ” ಎಂಬ ಪ್ರಬಂಧಗಳಿಗೆ ಲಂಡನ್ ವಿಶ್ವವಿದ್ಯಾಲಯವು ಎಮ್.ಎಸ್‌ಸಿ ಹಾಗೂ ಡಿ‌ಎಸ್‌ಸಿ ಪದವಿ ನೀಡಿತು. ಇಷ್ಟೊಂದು ಉನ್ನತ ಶಿಕ್ಷಣ ಪಡೆದ ಏಕೈಕ ದಲಿತರಾಗಿದ್ದರು.

ಅಪ್ಪಟ ದೇಶಪ್ರೆಮಿ :-  ಅಂಬೇಡ್ಕರ ರವರು ೧೯೩೫ ರಲ್ಲಿ ನಾಸಿಕದ ಈಯೋಲಾ ಎಂಬಲ್ಲಿ ನಾನು ಹಿಂದುವಾಗಿ ಹುಟ್ಟಿರಬಹುದು. ಅದು ನನ್ನ ಕೈಯಲ್ಲಿರಲಿಲ್ಲ. ಆದರೆ ಹಿಂದುವಾಗಿ ಖಂಡಿತ ಸಾಯುದಿಲ್ಲ ಎಂದು ಗುಡುಗಿದರು. ಮುಸ್ಲಿಂರು ಕ್ರೈಸ್ತರು ಇತ್ಯಾದಿ ಧರ್ಮ ಗುರುಗಳರವರು ಅಂಬೇಡ್ಕರ ರವರನ್ನು ತಮ್ಮ ಧರ್ಮಕ್ಕೆ ಸೇರಿಸಿಕೊಳ್ಳಲು ಮುಂದೆ ಬಂದರು. ಆದರೆ ದೇಶಪ್ರೆಮಕ್ಕೆ ಕಠಿಬದ್ಧರಾದ ಬಾಬಾಸಾಹೇಬರು ಸೇರುವುದಾದರೆ ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ಧರ್ಮವನ್ನೆಷ್ಟೆ ಸೇರುವುದು ಎಂದು ನಿರ್ಧರಿಸಿ ೧೯೫೬ ಅಕ್ಟೋಬರ ೧೪ ರಂದು ತಮ್ಮ ೧೦ ಲಕ್ಷ ಜನರೊಂದಿಗೆ ನಾಗಪುರದ ದಿಕ್ಷ್ ಭೂಮಿಯಲ್ಲಿ ಬೌದ್ದಧರ್ಮ ಸ್ವೀಕರಿಸಿದರು.

ಇಂತಹ ಮಹಾನ ವ್ಯಕ್ತಿ ೧೯೫೬ ಡಿಸೆಂಬರ ೬ ರಂದು  ಪರಿ ನಿರ್ವಾಣರಾದರು. ಇವತ್ತು ವಿಶ್ವಸಂಸ್ಥೆಯು ಅಂಬೇಡ್ಕರ ರವರು ಹುಟ್ಟಿದ ದಿನವನ್ನು ಅಂದರೆ ಎಪ್ರಿಲ್ ೧೪ ರಂದು world knowledge day ಆಚರಿಸುತ್ತದೆ. 

ರೇಷ್ಮಾ ಚಂದ್ರಶೇಖರ ಮೋಳೆಕರ
ಕಾಜುಬಾಗ, ಕಾರವಾರ
೮೯೭೦೭೩೯೨೩೯
 

Read These Next

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ

ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ...