ಮಲ್ಪೆಯಲ್ಲಿ ನಾಪತ್ತೆಯಾದ ಮೀನುಗಾರರ ಪತ್ತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ-ಯು.ಟಿ.ಕಾದರ್

Source: sonews | By Staff Correspondent | Published on 5th January 2019, 6:28 PM | Coastal News | State News | Don't Miss |

ಭಟ್ಕಳ: ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋಗಿ ನಾಪತ್ತೆಯಾದ ಬೋಟು ಹಾಗೂ ಅದರಲ್ಲಿರುವ ಮೀನುಗಾರರ ಪತ್ತೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅವರು ಮಹಾರಾಷ್ಟ್ರದಿಂದ ಹೊರಗೆ ಮೀನುಗಾರಿಕೆಯನ್ನು ಮಾಡುತ್ತಿರುವಾಗ ನಾಪತ್ತೆಯಾದ್ದಾರೆ.  ಈಗಾಗಲೇ ರಾಜ್ಯ ಸರಕಾರ ಮಹಾರಾಷ್ಟ್ರ ಸರಕಾರದೊಂದಿಗೆ ಮಾತನಾಡಿ ಪತ್ತೆಗೆ ಕ್ರಮ ಕೈಗೊಂಡಿದೆ ಪೌರಾಢಳಿತ ಸಚಿವ ಯು.ಟಿ. ಖಾದರ್ ಹೇಳಿಕೆ. ಭಟ್ಕಳದ ಖಾಸಗೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ಯು.ಟಿ.ಖಾದರ್.  

ಡಿಸೆಂಬರ್ 13ರಂದು ಮಲ್ಪೆಗೆ ಮೀನುಗಾರಿಕಗೆ ತೆರಳಿದ್ದ ಸುವರ್ಣ ತ್ರಿಬುಜ ಬೋಟು ಡಿ.15ರಂದು ತಡರಾತ್ರಿಯ ತನಕ ಮಹಾರಾಷ್ಟ್ರದ ಸಿಂಧುದುರ್ಗದಿಂದ ಹೊರಗೆ ಸಮುದ್ರದಲ್ಲಿ ಇದ್ದು ಬೋಟಿನಲ್ಲಿದ್ದ 7 ಜನರು ಸುರಕ್ಷಿತವಾಗಿ ಕರೆ ತರಲು ಸರಕಾರ ಎಲ್ಲ ಕ್ರಮ ಕೈಗೊಂಡಿದೆ. ಇಲ್ಲಿನ ತನಕ ಯಾವುದೇ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ಶೋಧಕಾರ್ಯಕ್ಕೆ ಎರಡೂ ಸರಕಾರಗಳು ಕ್ರಮ ಕೈಗೊಂಡಿದೆ. ನಮ್ಮ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತಿದ್ದು ಗ್ರಹ ಸಚಿವ ಎಂ.ಬಿ.ಪಾಟೀಲ್ ಅವರು ಕೂಡಾ ಮೀನುಗಾರರೊಂದಿಗೆ ಚರ್ಚೆ ಮಾಡಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ. ಅವರು ಸುರಕ್ಷಿತವಾಗಿ ಸಿಗುತ್ತಾರೆನ್ನುವ ಭರವಸೆ ನಮಗಿದೆ.  ಅವರ ಪತ್ತೆಗೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ ಎಂದೂ ಯು.ಟಿ.ಖಾದರ್ ಹೇಳಿದ್ದಾರೆ. 

ವಿಧಾನ ಸೌಧದ ಹೊರಗೆ ಹಣ ಸಿಕ್ಕಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸಿಕ್ಕ ಹಣಕ್ಕೆ ಸಂಬಂಧ ಪಟ್ಟಂತೆ ನನಗೇನೂ ತಿಳಿದಿಲ್ಲ.  ಹಾಗೇನಾದರು ಹಣ ಯಾರಿಗೆ ಸೇರಿದ್ದು ಎಂದು ತನಿಖೆ ವೇಳೆ ತಿಳಿದು ಬಂದರೆ ಅದು ಅವರ ಗ್ರಹಚಾರವಾಗುತ್ತದೆ.  ಪುಟ್ಟರಂಗ ಶೆಟ್ಟಿಯವರು ಅತ್ಯಂತ ಒಳ್ಳೆಯವರು.  ಅವರನ್ನು ಸಿಕ್ಕಿಸಿ ಹಾಕಲು ಷಡ್ಯಂತ್ರ ನಡೆದಿರುವ ಸಾಧ್ಯತೆ ಇದೆ. ಯಾವ ಉದ್ದೇಶದಿಂದ ಹಾಗೆ ಮಾಡಿದ್ದಾರೆನ್ನುವುದು ನಮಗೆ ಗೊತ್ತಿಲ್ಲ.  

ಪ್ರವಾದಿಯವರನ್ನು ನಿಂದಿಸಿದ್ದಾರೆಂದು ಮಿಡಿಯಾದವರನ್ನು ನಡೆಸಿಕೊಳ್ಳುತ್ತಿರುವ ಕುರಿತು ಕೇಳಿದ ಪ್ರಶ್ನೆಗುತ್ತರಿಸಿದ ಅವರು ಪ್ರವಾದಿಯವರನ್ನು ಬೇರೆ ರೀತಿಯಲ್ಲಿ ನಿಂದಿಸಿರುವುದು ಸರಿಯಲ್ಲ.  ಪ್ರವಾದಿಯವರನ್ನು ನಿಂದಿಸುವುದು ಅವರನ್ನು ಹೀಯಾಳಿಸುವ ಕಾರ್ಯ ಸರಿಯಲ್ಲ.  ಪ್ರವಾದಿಯವರ ವಿಷಯ ಬಂದಾಗ ಅದನ್ನು ಜಾಗ್ರತೆಯಿಂದ ನಿಭಾಯಿಸಬೇಕು. 

ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ಹಾಗೂ ಮಸೀದಿಯಲ್ಲಿ ಮಹಿಳೆಯರ ಪ್ರವೇಶದ ಕುರಿತು ಕೇಳಿದ ಪ್ರಶ್ನೆಗುತ್ತರಿಸಿದ ಅವರು ಶಬರಿ ಮಲೆಯಲ್ಲಿ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ವಿವಾದ ಜೋರಾಗಿದೆ. ಮಸೀದಿಯಲ್ಲಿಯೂ ಮಹಿಳೆಯರಿಗೆ ಪ್ರವೇಶ ಕೊಡುವ ಕುರಿತು ನಿಮ್ಮ ಅಭಿಪ್ರಾಯ ಎನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಶಬರಿಮಲೆ ಒಂದು ಅಂತ್ಯಂತ ಸೌಹಾರ್ಧತೆಯ ಸಂಕೇತವಾಗಿ ಲಕ್ಷಾಂತರ ಜನರು ಭಕ್ತಿ ಭಾವದಿಂದ ಭಾಗವಹಿಸುವ ಸ್ಥಳವಾಗಿದೆ. ಅಂತಹ ಸ್ಥಳವನ್ನು ಕೇಂದ್ರ ಸರಕಾರ ನಿಭಾಯಿಸಬೇಕಿತ್ತು. ಇಂದು ರಾಜ್ಯ ಸರಕಾರದ ಮೇಲೆ ಆರೋಪ ಮಾಡಿದ್ದಾರೆ. ಅವರು ದೇವರನ್ನೇ ನಂಬದಂತಹ ಜನರು ಎಂದು ಆರೋಪ ಮಾಡುತ್ತಾರೆ ಆದರೆ ಅದು ಸರಿಯಲ್ಲ. ನಮಾಜು ಮಾಡಲು ಕೆಲವು ಮಹಿಳೆಯರಿಗೆ ಬಿಡುತ್ತಾರೆ. ಮಸೀದಿಯಲ್ಲಿಯೂ ಕೂಡಾ ಮಹಿಳೆಯರು ಬಂದು ಹೋಗುವ ಸ್ಥಳಕೂಡಾ ಇದೆ.  ಮಹಿಳೆಯರಿಗಾಗಿಯೇ ಮಸೀದಿ ನಿರ್ಮಾಣ ಕಾರ್ಯ ಕೂಡಾ ನಡೆಯುತ್ತಿದೆ. ಮಹಿಳೆಯರಿಗೆ ದರ್ಗಾಕ್ಕೆ ಹೋಗಲು ಯಾವುದೇ ಅಡ್ಡಿಯಿಲ್ಲ.  ಸಮಸ್ಯೆ ಬಂದಾಗ ಕೇಂದ್ರ ಸರಕಾರ ಸೌಹಾರ್ಧಯುತವಾಗಿ ಬಗೆಹರಿಸಬೇಕಿತ್ತು.  ರಾಜಕೀಯ ಬಿಟ್ಟು ಆಲೋಚನೆ ಮಾಡಬೇಕಾಗಿತ್ತು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...