ಅಲ್ ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಬೃಹತ್ ಇಫ್ತಾರ್ ಸಂಗಮ

Source: isc jubail | By Arshad Koppa | Published on 20th June 2017, 6:50 AM | Gulf News | Special Report |

ಜುಬೈಲ್, ಜೂನ್ ೧೪ : ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯರ  ಸಾಮಾಜಿಕ ಸೇವೆಯಲ್ಲಿ  ಮಂಚೂಣಿಯಲ್ಲಿರುವ ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ  ಬೃಹತ್ ಫ್ಯಾಮಿಲಿ ಇಫ್ತಾರ್ ಕೂಟವನ್ನು ಜುಬೈಲ್ ನ ಮರಾಫಿಕ್ ಬೀಚ್ ಕ್ಯಾಂಪಿನಲ್ಲಿ ಆಯೋಜಿಸಲಾಗಿತ್ತು. 


ಇಂಡಿಯಾ ಫ್ರಟೆರ್ನಿಟಿ  ಫೋರಮ್ ದೆಹಲಿ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಹಕೀಮ್ ಅವರು ರಮದಾನ್ ಸಂದೇಶ  ಪ್ರವಚನವನ್ನು ನೀಡುತ್ತಾ ,  ರಂಝಾನ್ ಮಹತ್ವ ಹಾಗೂ  ಜಗತ್ತಿನಾದ್ಯಂತ ಮುಸ್ಲಿಮರ ಪ್ರಸಕ್ತ ಪರಿಸ್ಥಿತಿಯ  ಬಗ್ಗೆ ನೆನಪಿಸಿ ನಮ್ಮ ಬಾಧ್ಯತೆಗಳ ಬಗ್ಗೆ ವಿವರಿಸಿದರು. ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್  ತೆಲಂಗಾಣ ಕಾರ್ಯದರ್ಶಿ ಸಾದಿಕ್ ಹಾಗು ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ಕರ್ನಾಟಕ  ಬ್ರಾಂಚ್ ಸಮಿತಿ ಅಧ್ಯಕ್ಷ  ಮುಹಮ್ಮದ್ ಶಮೀರ್  ಉಪಸ್ಥಿತರಿದ್ದರು. 
ಬೃಹತ್ ಸಂಖೈಯಲ್ಲಿ ಅನಿವಾಸಿ ಭಾರತೀಯರು ಈ ಇಫ್ತಾರ್  ಸಂಗಮದಲ್ಲಿ ಭಾಗವಹಿಸಿದ್ದರು.ಮುಹಮ್ಮದ್ ಶಮೀರ್ ಸ್ವಾಗತಿಸಿ, ಪ್ರಸ್ಥಾವಿಕ ಬಾಷಣ ಮಾಡಿದರು. ಮಾಸ್ಟರ್ ಸುಲೈಮಾನ್  ಕಿರಾಅತ್ ಪಠಿಸಿದರು. ಕಾರ್ಯಕ್ರಮ ನಿರ್ವಹಿಸಿದ ಇರ್ಷಾದ್ ರವರು ನೆರೆದಿದ್ದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

Read These Next

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...