ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

Source: sonews | By Staff Correspondent | Published on 17th August 2018, 10:50 PM | National News | Special Report | Don't Miss |

ಅಜಾತಶತ್ರು ಎಂದೇ ಹೆಸರಾದ ಅಟಲ್ ಬಿಹಾರಿ ವಾಜಪೇಯಿ ಅವರು ನಿಧನ ದೇಶದಲ್ಲಿ ನಿರ್ವಾತ ಸೃಷ್ಟಿಸಿದೆ. 3 ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ವಾಜಪೇಯಿ ಅವರು ಕವಿಯಾಗಿ, ಉತ್ತಮ ವಾಗ್ಮಿಯಾಗಿ, ಹಾಸ್ಯಪ್ರಜ್ಞೆಯ ಸರಳ ಮನುಷ್ಯರಾಗಿ, ಮಾನವೀಯ ಅಂತಃಕರಣದ ಜನಾನುರಾಗಿಯಾಗಿ ಕೋಟ್ಯಂತರ ಭಾರತೀಯರ ಹೃದಯದಲ್ಲಿ ನೆಲೆಸಿದವರು. 

ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ: ಖಚಿತ ಪಡಿಸಿದ ಏಮ್ಸ್ ಆಸ್ಪತ್ರೆ ಕಾಂಗ್ರೆಸ್ಸೇತರ ಸರ್ಕಾರದಲ್ಲಿ ಪ್ರಧಾನಿಯಾಗಿ ಐದು ವರ್ಷ ಪೂರೈಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ವಾಜಪೇಯಿ. 1998 ರಿಂದ 2004 ರವರೆಗೆ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವಾಜಪೇಯಿ ಅವರು ಹಲವು ಮೊದಲುಗಳಿಗೆ ನಾಂದಿ ಹಾಡಿದವರು. ಇಂಥ ಅಜಾತಶತ್ರು ವಾಜಪೇಯಿ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಜನನ ಮತ್ತು ವಿದ್ಯಾಭ್ಯಾಸ

* ಮಧ್ಯಪ್ರದೇಶದ ಗ್ವಾಲಿಯರ್ ನ 'ಶಿಂದೆ ಕಿ ಚವ್ವಾಣಿ'ಎನ್ನುವ ಗ್ರಾಮದಲ್ಲಿ 1924 ರ ಡಿಸೆಂಬರ್ 25, ಕ್ರಿಸ್ ಮಸ್ ದಿನ ವಾಜಪೇಯಿ ಅವರ ಜನನ

* ತಾಯಿ ಕೃಷ್ಣಾ ದೇವಿ ಮತ್ತು ತಂದೆ ಕೃಷ್ಣ ಬಿಹಾರಿ ವಾಜಪೇಯಿ

* ಗ್ವಾಲಿಯರ್ ನಲ್ಲೇ ವಿದ್ಯಾಭ್ಯಾಸ ಮುಗಿಸಿದ ವಾಜಪೇಯಿ ಅವರು ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪರಿಣಿತಿ ಪಡೆದಿದ್ದರು.

* ನಂತರ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದರು.

* ಗ್ವಾಲಿಯರ್ ನ ಯುವ ಸಂಘಟನೆಯಾದ ಆರ್ಯ ಕುಮಾರ್ ಸಭಾ ಮೂಲಕ ಸಾಮಾಜಿಕ ಬದುಕಿಗೆ ಪ್ರವೇಶಿಸಿದ ವಾಜಪೇಯಿ ಅವರು ರಾಷ್ಟ್ರೀಯ ಸ್ವಯಂಸೇವಕದೊಂದಿಗೆ ಗುರುತಿಸಿಕೊಂಡವರು. ಬಲಪಂಥೀಯ ಸಿದ್ಧಾಂತದೆಡೆಗೆ ಆಕರ್ಷಣೆ

* 1939 ರಿಂದ ಆರೆಸ್ಸೆಸ್ ನ ಸ್ವಯಂಸೇವಕರಾಗಿ ಸೇರಿದ ವಾಜಜಪೇಯಿ ಅವರನ್ನು ಬಲಪಂಥೀಯ ಸಿದ್ಧಾಂತಗಳು ಬಹುವಾಗಿ ಆಕರ್ಷಿಸಿದ್ದವು.

* ಆರೆಸ್ಸೆಸ್ ಹಿರಿಯ ಮುಖಂಡ ಬಾಬಾ ಸಾಹೇಬ್ ಆಪ್ಟೆ(ಉಮಾಕಾಂತ್ ಕೇಶವ್ ಆಪ್ಟೆ) ಅವರಿಂದ ಪ್ರಭಾವಿತರಾಗಿ 1940-44 ರವರೆಗೆ ಆರೆಸ್ಸೆಸ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಅವರು ನಂತರ ಪೂರ್ಣಾವಧಿ ಕಾರ್ಯಕರ್ತರಾದರು.

* ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್ ಮತ್ತು ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

* 1942 ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ 23 ದಿನಗಳ ಕಾಲ ಬಂಧನಕ್ಕೊಳಗಾಗಿದ್ದ ವಾಜಪೇಯಿ ಅವರ ರಾಜಕೀಯ ಬದುಕಿನ ಆರಂಭವಾಗಿದ್ದು ಆಗಲೇ.

* 1951ರಲ್ಲಿ ಭರತೀಯ ಜನಸಂಘ ಆರಂಭವಾದಾಗ ಅದರೊಂದಿಗೆ ಸಕ್ರಿಯರಾದ ವಾಜಪೇಯಿ ಅವರು ಶಾಮ್ ಪ್ರಸಾದ್ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯಾಯ ಅವರ ಒಡನಾಟಕ್ಕೆ ಬಂದರು.

* 1954 ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರೇತರರನ್ನು ಕೀಳಾಗಿ ಕಾಣುವ ಪ್ರವೃತ್ತಿಯನ್ನು ವಿರೋಧಿಸಿ ಶಾಮ್ ಪ್ರಸಾದ್ ಮುಖರ್ಜಿ ಅವರು ಆರಂಭಿಸಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ವಾಜಪೇಯಿ ಅವರೂ ಭಾಗಿಯಾಗಿದ್ದರು.

* 1957ರಲ್ಲಿ ಮಥುರಾ ಲೋಕಸಭಾ ಕ್ಷೇತ್ರದಿಂದ ಸೋತರೂ, ಬಲರಾಮ್ಪುರ ಕ್ಷೇತ್ರದಿಂದ ಗೆದ್ದ ವಾಜಪೇಯಿ ಅವರ ಮಾತಿನ ಶೈಲಿಗೆ ಸ್ವತಃ ಜವಹರಲಾಲ್ ನೆಹ್ರೂ ಅವರೇ ಮರುಳಾಗಿದ್ದರು. ಅವರೊಂದು ದಿನ ಭಾರತದ ಪ್ರಧಾನಿಯಾಗುತ್ತಾರೆ ಎಂದು ಸ್ವತಃ ನೆಹರೂ ಅವರೇ ಭವಿಷ್ಯ ನುಡಿದಿದ್ದರು! ಸ್ವಚ್ಛ ರಾಜಕಾರಣಿ ವಾಜಪೇಯಿಯ ಬಿಚ್ಚು ಮನಸ್ಸಿನ ಭಾಷಣಗಳು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ...

* 1975 ರಿಂದ 1977 ರ ವರೆಗೆ ತುರ್ತು ಪರಿಸ್ಥಿಯ ಸಮಯದಲ್ಲಿ ಸಾಕಷ್ಟು ಬಾರಿ ವಾಜಪೇಯಿ ಅವರು ಜೈಲಿಗೆ ತೆರಳಿದರು. ಆದರೆ ಕಾಂಗ್ರೆಸ್ ಪಕ್ಷದ ಸರ್ವಾಧಿಕಾರಿ ನಡೆಯನ್ನು ಅವರು ಬಹುವಾಗಿ ಖಂಡಿಸಿದ್ದರು.

* 1977 ರ ಚುನಾವಣೆಯಲ್ಲಿಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು ವಾಜಪೇಯಿ

* ವಿದೇಶಾಂಗ ಸಚಿವರಾಗಿದ್ದ ಸಮಯದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾತಡುವ ಮೂಲಕ ಅವರು ದಾಖಲೆ ಬರೆದರು.

* 1980 ರಲ್ಲಿ ತಮ್ಮ ಬಹುಕಾಲದ ಸ್ನೇಹಿತರಾದ ಎಲ್ ಕೆ ಅಡ್ವಾಣಿ, ಭೈರಾನ್ ಸಿಂಗ್ ಶೆಖಾವತ್ ಸೇರಿದಂತೆ ಜನಸಂಘ ಮತ್ತು ಆರೆಸ್ಸೆಸ್ ನ ಹಲವು ಸಹೋದ್ಯೋಗಿಗಳನ್ನೂ, ಸಮಾನ ಮನಸ್ಕರನ್ನೂ ಒಂದೆಡೆ ಸೇರಿಸಿದರು. ಈ ಮೂಲಕ 'ಭಾರತೀಯ ಜನತಾ ಪಕ್ಷ'(ಬಿಜೆಪಿ) ಸ್ಥಾಪನೆಯಾಯಿತು. ಬಿಜೆಪಿಯ ಮೊದಲ ರಾಷ್ಟ್ರಾಧ್ಯಕ್ಷರಾಗಿದ್ದ ವಾಜಪೇಯಿ ಅವರು, ತಮ್ಮ ಅತ್ಯುತ್ತಮ ಮಾತುಗಾರಿಕೆ, ಸರಳತೆಯಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದರು.

* ನಂತರ ವಿಶ್ವ ಹಿಂದೂ ಪರಿಷತ್ ಮತ್ತು ಆರೆಸ್ಸೆಸ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಕುರಿತಂತೆ ನಡೆಸಿದ ಹೋರಾಟದಲ್ಲೂ ವಾಜಪೇಯಿ ಅವರ ಪಾತ್ರ ಅಪಾರ. ಪ್ರಶಸ್ತಿ, ಯಶಸ್ಸು, ಗೌರವ

* ಈ ಎಲ್ಲವುಗಳಿಂದಾಗಿ ಮಾರ್ಚ್ 1995ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಅಮೋಘ ಜಯ ದಾಖಲಿಸಿತು. ಕರ್ನಾಟಕದಲ್ಲೂ ಬಿಜೆಪಿ ಉತ್ತಮ ಪ್ರದರ್ಶನ ನೀಡಿತು.

* 1992 ರಲ್ಲಿಪದ್ಮವಿಭೂಷಣ ಪ್ರಶಸ್ತಿ

* 1993 ರಲ್ಲಿ ಕಾನ್ಪುರ ವಿಶ್ವಿದ್ಯಾಲಯದಿಂದ ಡಾಕ್ಟರೇಟ್ ಗೌರವ.

* 1994 ರಲ್ಲಿ ಲೋಕಮಾನ್ಯ ತಿಲಕ್ ಪ್ರಶಸ್ತಿ

* 1994 ರಲ್ಲಿ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ

* 1995 ರ ಮುಂಬೈಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ವಾಜಪೇಯಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಆಗಿನ ಬಿಜೆಪಿ ಅಧ್ಯಕ್ಷರಾಗಿದ್ದ ಎಲ್ ಕೆ ಅಡ್ವಾಣಿ ಅವರು ಘೋಷಿಸಿದರು. ರಾಜಕೀಯದಲ್ಲಿ ಅಮೋಘ ಪ್ರದರ್ಶನ

* 1996 ರ ಮೇ ತಿಂಗಳಿನಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು

* ಆಗಿನ ಭಾರತದ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರು ವಾಜಪೇಯಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಆಗ ಭಾರತದ 10ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವಾಜಪೇಯಿ ಅವರು, ಬಹುಮತ ಸಾಬೀತುಪಡಿಸಲಾಗದೆ ಕೇವಲ 13 ದಿನಗಳಲ್ಲೇ ರಾಜೀನಾಮೆ ನೀಡಬೇಕಾಯ್ತು.

* ನಂತರ 1998ರ ವರೆಗೂ ಯುನೈಟೆಡ್ ಫ್ರಂಟ್ ಸರ್ಕಾರಗಳು ಆಡಳಿತ ನಡೆಸಿದವು. ನಂತರ 1998 ರಲ್ಲಿ ಮತ್ತೆ ನಡೆದ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

* 1999 ರವರೆಗೂ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಎಐಎಡಿಎಂಕೆ ಪಕ್ಷವು ಬೆಂಬಲ ವಾಪಸ್ ಪಡೆದ ಪರಿಣಾಮ ಕೇವಲ 13 ತಿಂಗಳುಗಳ ಆಡಳಿತ ನಡೆಸಿ ರಾಜೀನಾಮೆ ನೀಡಬೇಕಾಯ್ತು. ಪೋಖ್ರಾನ್ ಮತ್ತು ಕಾರ್ಗಿಲ್

*1998 ರಲ್ಲಿ ಯಶಸ್ವಿಯಾಗಿ ಪೋಖ್ರಾನ್ ಟೆಸ್ಟ್ ಮಾಡುವ ಮೂಲ ಇಡೀ ಜಗತ್ತೂ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ ಕೀರ್ತಿ ವಾಜಪೇಯಿ ಅವರದು.

* 1999 ರಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯನ್ನು ಉತ್ತೇಜಿಸಿ, ಗೆಲ್ಲುವಂತೆ ಮಾಡಿದ ಕೀರ್ತಿ ಸಹ ಅಜಾತ ಶತ್ರು ವಾಜಪೇಯಿ ಅವರದು! ಮತ್ತೆ ಅಧಿಕಾರಕ್ಕೆ

* ನಂತರ 1999 ರಲ್ಲಿ ನಡೆದ ಚುನಾವಣೆಯಲ್ಲಿ 303(543) ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಅಸ್ತಿತ್ವಕ್ಕೆ ಬಂತು.

* 2004 ರವರೆಗೆ ತಮ್ಮ ಆಡಳಿತಾವಧಿಯಲ್ಲಿ, ಸಂಸತ್ತಿನ ಮೇಲಿನ ದಾಳಿ, ಗುಜರಾತ್ ಗಲಭೆ ಸೇರಿದಂತೆ ಹಲವು ಕ್ಲಿಷ್ಟಕರ ಸನ್ನಿವೇಶವನ್ನು ಅವರು ಎದುರಿಸಿದರು.

* 2004 ರಲ್ಲಿ ಬಿಜೆಪಿ ಪರ ಜನರಲ್ಲಿ ಉತ್ತಮ ಭಾವನೆ ಇದ್ದಿದ್ದರಿಂದ ಅವಧಿಗೂ ಮೊದಲೇ ಲೋಕಸಭೆಯನ್ನು ರದ್ದು ಮಾಡಿ, ವಾಜಪೇಯಿ ಅವರು ಚುನಾವಣೆಗೆ ಹೊರಟಿದ್ದು ಅವರ ರಾಜಕೀಯ ಬದುಕಿನ ಬಹುದೊಡ್ಡ ಪ್ರಮಾದವಾಯಿತು.

* 2004 ರ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅರ್ಧಕ್ಕಿಂತ ಕಡಿಮೆ ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂತು.

* ಈ ಸೋಲಿನ ನೈತಿಕ ಹೊಣೆ ಹೊತ್ತು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ ವಾಜಪೇಯಿ ಅವರು ಎಲ್ ಕೆ ಅಡ್ವಾಣಿ ಅವರನ್ನು ಆ ಸ್ಥಾನಕ್ಕೆ ಆರಿಸಿದರು. ಅಜಾತಶತ್ರುವಿನ ಕೊನೆಯ ದಿನಗಳು

* ಅತ್ಯುತ್ತಮ ಕವಿಯಾಗಿದ್ದ ವಾಜಪೇಯಿ ಅವರು ರಾಜಕೀಯ ಬದುಕಿನಿಂದ ಸ್ವಲ್ಪ ದೂರವೇ ಉಳಿದು ಸಾಹಿತ್ಯದಲ್ಲಿ ತೊಡಗಿಸಿಕೊಂಡರು.

* ಆದರೆ 2009 ರಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ಅವರು ನಂತರದ ದಿನಗಳಲ್ಲಿ ಮಧುಮೇಹದಿಂದ ಬಳಲುತ್ತ, ಕಿಡ್ನಿ ಸಮಸ್ಯೆಗೂ ಗುತ್ತಾಗಿದ್ದರು. ಕ್ರಮೇಣ ಯಾರನ್ನೂ ಗುರುತಿಸಲಾಗದ ಸ್ಥಿತಿಯಲ್ಲೇ ಇದ್ದರು.

* ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25 ಅನ್ನು ಪ್ರತಿವರ್ಷ 'ಉತ್ತಮ ಆಡಳಿತ ದಿನ'(Good governance day)ವನ್ನಾಗಿ ಆಚರಿಸಲು 2014 ರಲ್ಲಿ ಘೋಷಣೆ.

* 2015 ರಲ್ಲಿ ಸರ್ಕಾರ ಅವರಿಗೆ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿತು.

* 2018 ರ ಜೂನ್ 11 ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಅವರು ಯಾವುದೇ ಚಿಕಿತ್ಸೆ ಸ್ಪಂದಿಸಲಿಲ್ಲ.

* 2018 ಆಗಸ್ಟ್ 16 ರಂದು ಅಜಾತ ಶತ್ರು ವಾಜಪೇಯಿ ಅವರು ಇಹಲೋಕ ತ್ಯಜಿಸಿದರು.
ಕೃಪೆ:Oneindia Kannada

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ಹೊಸದಿಲ್ಲಿ:ಬಿಜೆಪಿ ರಾಷ್ಟ್ರೀಯ ಪ್ರ. ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕ ಮೂಲದ ಬಿ.ಎಲ್ ಸಂತೋಷ್ ನೇಮಕ

ಹೊಸದಿಲ್ಲಿ: ಕಳೆದ 13 ವರ್ಷಗಳಿಂದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಹುದ್ದೆ ತೊರೆದ ಹಿನ್ನೆಲೆಯಲ್ಲಿ ತೆರವಾದ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...

ವಂಚನೆಯ ಮತ್ತೊಂದು ಮಾರ್ಗ

ಸಾಮಾಜಿಕ-ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಹೀನಾಯವಾದ ಕಾರ್ಯನಿರ್ವಹಣೆ ತೋರಿದ ಸರ್ಕಾರವೊಂದು ಹಿಂದಿಗಿಂತಲೂ ಹೆಚ್ಚಿನ ...

ತಡೆಗಟ್ಟಬಹುದಾದ ಸಾವುಗಳು

ಕಳೆದ ತಿಂಗಳು ಬಿಹಾರದ ಮುಝಫರ್‌ಪುರ್  ಜಿಲ್ಲೆಯಲ್ಲಿ ತೀವ್ರ ಮೆದುಳು ಜ್ವರಕ್ಕೆ ಬಲಿಯಾಗಿ ಪ್ರಾಣ ತೆತ್ತಿರುವ ೧೫೩ ಮಕ್ಕಳ ಸಾವುಗಳು ...

ಒಣಗು ವರ್ತಮಾನ, ಕರಕಲು ಭವಿಷ್ಯ?

ಈ ಜಲ ಬಿಕ್ಕಟ್ಟು ಪ್ರದೇಶ, ಜಾತಿ ಮತ್ತು ಲಿಂಗಾಧಾರಿತ ಅಸಮಾನತೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪಾರಂಪರಿಕವಾಗಿ ನೀರನ್ನು ...

ಸಾರ್ವಜನಿಕ ಸಂಸ್ಥೆಗಳ ಘನತೆ

ಒಂದು ಪ್ರಭುತ್ವದ ಪ್ರಜಾತಾಂತ್ರಿಕ ಸಾರ ಮತ್ತು ಗಣರಾಜ್ಯ ಸ್ವಭಾವಗಳೆಲ್ಲವನ್ನೂ ನಾಶಗೊಳಿಸಿ ಒಂದು ಸಾರ್ವಜನಿಕ ಸಂಸ್ಥೆಯು ...

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...