ಆಗುಂಬೆ: ಕಾಳಿಂಗ ಸರ್ಪದ ಬಗ್ಗೆ ಹೆಚ್ಚಿನ ಮಾಹಿತಿ - ಸಂರಕ್ಷಣೆಗಾಗಿ ಸಾರ್ವಜನಿಕರ ಸಹಕಾರಕ್ಕೆ ಮನವಿ

Source: kalinga foundation | By Arshad Koppa | Published on 10th March 2017, 12:31 PM | Special Report | Guest Editorial | State News |

ಕಾಳಿಂಗ ಪೌಂಡೇಷನ್, ಗುಡ್ಡೇಕೇರಿ, ಆಗುಂಬೆ, ಕರ್ನಾಟಕ, ಭಾರತ. 
ಕಾಳಿಂಗ ಸರ್ಪಗಳ ಗುಣಲಕ್ಷಣಗಳು, ದೇಹ ಪ್ರಕ್ರತಿ ಅರಿಯುವಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಯೋಜನೆ


ಕೇವಲ ಒಂದು ಫೋನ್ ಕರೆಯ ಮೂಲಕ ಕಾಳಿಂಗ ಸರ್ಪಗಳ ಸಂರಕ್ಷಣೆಯಲ್ಲಿ ಎಲ್ಲರ ಸಹಕಾರವಿರಲಿ...!


ಬೇಸಿಗೆ ಬರುತ್ತಿದ್ದಂತೆಯೇ ಪಶ್ಮಿಮಘಟ್ಟಗಳ ಕಾಡುಗಳಲ್ಲಿ ಅನೇಕಾನೇಕ ಚಟುವಟಿಕೆಗಳು ಆರಂಭಗೊಳ್ಳುತ್ತವೆ. ಸಂತಾನೋತ್ಪತ್ತಿಯ ಕುರಿತಂತೆಯೆ ಹೆಚ್ಚಿನೆಲ್ಲ ಪ್ರಾಣ ಗಳು ಈ ಕಾಲದಲ್ಲಿ ಕಾರ್ಯಪ್ರವೃತ್ತವಾಗುತ್ತವೆ. ಅದರಂತೆಯೇ ಉರಗಗಳು (ಹಾವುಗಳು), ಕೂಡ ಈ ಚಟುವಟಿಕೆಯಲ್ಲಯೇ ಮಗ್ನವಾಗಿರುತ್ತವೆ. ಅನೇಕ ಹಾವಿನ ಜಾತಿಗಳು ವರ್ಷದಲ್ಲಿ ಒಮ್ಮೆ ಸಂತಾನೋತ್ಪತ್ತಿ ಮಾಡಿದರೆ, ಮತ್ತೆ ಕೆಲವು ವರ್ಷದಲ್ಲಿ ಎರಡಕ್ಕಿಂತಲೂ ಹೆಚ್ಚು ಸಲ ಈ ಕ್ರಿಯೆಯಲ್ಲಿ ತೊಡಗಿರುತ್ತವೆ. ಅನೇಕ ಹಾವುಗಳ ಜಾತಿಗಳಲ್ಲಿ ಗಂಡು ಹಾವು ಹೆಣ್ಣು ಹಾವುಗಳಿಗಿಂತ ಗಾತ್ರ, ಬಣ್ಣ ಮತ್ತು ಇತರ ದೈಹಿಕ ಗುಣಲಕ್ಷಣಗಳಲ್ಲಿ ಭಿನ್ನವಾಗಿರುತ್ತವೆ. ಉದಾಹರಣೆಗೆ ಗಂಡು ನಾಗರ ಹಾವು, ಕಟ್ಟಾವುಗಳು ತಮ್ಮ ಜಾತಿಯ ಹೆಣ್ಣುಗಳಿಗಿಂತ ಗಾತ್ರದಲ್ಲಿ ಬಲಿಷ್ಟವಾಗಿದ್ದರೆ, ಭಾರತದ ಹೆಬ್ಬಾವುಗಳು, ಬೇರೆ ಬೇರೆ ಬಗೆಯ ಹಪ್ಪಟೆ ಹಾವುಗಳು ಮೇಲಿನದಕ್ಕೆ ತದ್ವಿರುದ್ಧವಾಗಿರುತ್ತವೆ.
ಸಂತಾನೋತ್ಪತ್ತಿ ಸಮಯಗಳಲ್ಲಿ ಕೆಲವು ಜಾತಿಯ ಹಾವುಗಳಲ್ಲಿ ಅಂದರೆ, ಕಾಳಿಂಗ ಸರ್ಪಗಳು ಮತ್ತು ಕೇರೆ ಹಾವುಗಳಲ್ಲಿ ಒಂದು ಹೆಣ್ಣು ಹಾವಿಗಾಗಿ ಎರಡು ಗಂಡು ಹಾವುಗಳು ಪರಸ್ಪರ ಕಾದಾಟ ನಡೆಸುವುದುಂಟು. ಈ ಕಾದಾಟವನ್ನೇ ಸಾಮಾನ್ಯವಾಗಿ ಜನರು ಗಂಡು ಹಾಗೂ ಹೆಣ್ಣು ಹಾವಿನ ಮಿಲನವೆಂದು ತಪ್ಪಾಗಿ ಭಾವಿಸುತ್ತಾರೆ. ಸಾಮಾನ್ಯವಾಗಿ ಉರಗಗಳ ಪ್ರಣಯದಾಟ, ಮಿಲನ ಪ್ರಕ್ರಿಯೆ ಯಾವುದೇ ಸದ್ದುಗದ್ದಲವಿಲ್ಲದೆ ಗುಪ್ತವಾಗಿ ನಡೆದುಬಿಡುತ್ತದೆ.


ಒಮ್ಮೆ ಈ ಮಿಲನ ಪ್ರಕ್ರಿಯೆ ಮುಗಿದ ನಂತರ ಸಾಮಾನ್ಯವಾಗಿ ಹೆಣ್ಣು, ತನ್ನ ಮೊಟ್ಟೆಗಳನ್ನು ಬಿಲಗಳು ಮತ್ತು ಪೊಟರೆಗಳಲ್ಲಿ ಸಂರಕ್ಷಿಸುವ ಜವಾಬ್ದಾರಿಯನ್ನು ಹೊರುತ್ತವೆ. ಆದರೆ ಮೊಟ್ಟೆಗಳನ್ನು ಸಂರಕ್ಷಿಸಲು, ಶಾಖ ಕೊಡಲು ಗೂಡುಗಳನ್ನು ಕಟ್ಟುವ ಏಕೈಕ ಹಾವೆಂದರೆ ಅದು ಕಾಳಿಂಗ ಸರ್ಪ. ಮತ್ತೊಂದು ಸ್ವಾರಸ್ಯವೆಂದರೆ ಎಲ್ಲಾ ಹಾವುಗಳು ಮೊಟ್ಟೆಗಳನ್ನು ಇಡುವುದಿಲ್ಲ. ಹಪ್ಪಟೆ ಹಾಗೂ ಮಣ್ಣುಮುಕ್ಕ ಹಾವು ಹಾಗೂ ಇತರೆ ಕೆಲವು ಜಾತಿಯ ಹಾವುಗಳು ಮರಿಗಳನ್ನೇ ಹೆರುತ್ತವೆ.
ಬೇಸಿಗೆಯಲ್ಲಿ ಕಾಳಿಂಗ ಸರ್ಪಗಳು ತುಂಬಾ ಚಟುವಟಿಕೆಯಿಂದಿರುತ್ತವೆ. 5 ಮೀಟರ್ ಉದ್ದದ ಬಲಿಷ್ಟ ಗಾತ್ರದ ತೀಕ್ಷ್ಣ ವಿಷಯುಕ್ತ ಕಾಳಿಂಗಗಳು ಸಂಗಾತಿಗಳನ್ನು ಹುಡುಕುವಲ್ಲಿ ಬಹಳ ಕ್ರಿಯಾಶೀಲ ಮತ್ತು ಉತ್ಸುಕವಾಗಿರುತ್ರವೆ. ಫೆಬ್ರವರಿಯಿಂದ ಮೇ ತಿಂಗಳವರೆಗಿನ ಕಾಲಾವಧಿಯಲ್ಲಿ ಇವು ಸಂಗಾತಿಯನ್ನು ಹುಡುಕಿಕೊಳ್ಳುವಲ್ಲಿ ಕಾದಾಟ, ಸುತ್ತಾಟ, ರಮಿಸುವಿಕೆ ಎಲ್ಲವನ್ನೂ ಮುಗಿಸಿ ಆಗುಂಬೆಯ ದಟ್ಟಾರಣ್ಯಗಳಲ್ಲಿ ಮಳೆರಾಯ ತನ್ನ ರೌದ್ರಾವತಾರ ತಾಳುವ ಮೊದಲೇ ಮೊಟ್ಟೆಗಳಿಗಾಗಿ ಗೂಡು ನಿರ್ಮಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಸಂಗಾತಿಯನ್ನು ಹುಡುಕುವುದೆಂದರೆ ಕಾಳಿಂಗಗಳು ಬಹಳ ಸುತ್ತಾಡಬೇಕಾಗುತ್ತದೆ. ಆ ಸಂದರ್ಭದಲ್ಲೇ ಇವು ಅನಿವಾರ್ಯವಾಗಿ ಮನುಷ್ಯರ ಕಣ ್ಣಗೂ ಬೀಳುತ್ತವೆ. ಇವು ಹಗಲು ಸಂಚರಿಸುವ ಹಾವುಗಳಾಗಿರುವುದರಿಂದ ಹಗಲಿನಲ್ಲೇ ಮನೆಗಳು, ಗದ್ದೆ - ತೋಟಗಳು, ಮರಮಟ್ಟುಗಳು, ಕೊಟ್ಟಿಗೆಗಳಲ್ಲಿ ಇವು ಓಡಾಡುವ ಅನಿವಾರ್ಯತೆ ಇವುಗಳಿಗೆ ಎದುರಾಗುತ್ತದೆ. ಹೀಗಾಗಿ ಕತ್ತಲಾಗುತ್ತಿದ್ದಂತೆಯೇ ಇವು ಕಾಡುಗಳಲ್ಲಿ ಅಥವಾ ಸ್ನಾನಗೃಹಗಳು ಹಾಗೂ ಮನೆಯ ಮೇಲ್ಚಾವಣ  ಹಾಗೂ ಇತರೆ ತಣ್ಣನೆಯ ಜಾಗಗಳಲ್ಲಿ ತಂಗಿಬಿಡುತ್ತವೆ. ಸುದೈವವಶಾತ್, ಮಲೆನಾಡಿನ ಲಾಗಾಯ್ತಿನ ಸಂಸ್ಕೃತಿ, ಪರಂಪರೆಯಿಂದಾಗಿ ಹೆಚ್ಚಿನವರು ಕಾಳಿಂಗಗಳನ್ನು ಕೊಲ್ಲುವುದಕ್ಕಿಂತ ಸಂರಕ್ಷಿಸುವತ್ತಲೇ ಆದ್ಯತೆ ಕೊಡುತ್ತಾರೆ.
ಉರಗಗಳಲ್ಲೇ ಬಹಳ ಪ್ರಾಮುಖ್ಯವಾದುದು ಈ ಕಾಳಿಂಗಗಳು. ಕಾಡಿಗೆ ಹುಲಿಗಳು ಹೇಗೆ ಮುಖ್ಯವೋ ಅದೇ ರೀತಿ ಕಾಳಿಂಗಗಳು. ಇವುಗಳನ್ನು ಸಂರಕ್ಷಿಸುವುದೆಂದರೆ ಉಳಿದೆಲ್ಲಾ ಹಾವುಗಳನ್ನು ಮತ್ತು ಅರಣ್ಯಗಳನ್ನು ಕಾಪಾಡಿದಂತೆಯೇ ಹೌದು. ಇವುಗಳನ್ನು ರಕ್ಷಿಸುವುದು ಜವಾಬ್ದಾರಿಯುತ ನಾಗರಿಕರ ಹೊಣೆಗಾರಿಕೆಯೂ ಆಗಿದೆ.

ಇಲ್ಲಿ ಹಾವು, ಜನ, ಜಾನುವಾರು ಮತ್ತು ಸಾಕು ಪ್ರಾಣ ಗಳಿಗೆ ರಕ್ಷಣೆ ನೀಡುವಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವುದೆಂದು ಈ ಕೆಳಗೆ ತಿಳಿಸಲಾಗಿದೆ.

1.    ಮೊದಲನೆಯದಾಗಿ ಹಾವು ಸ್ಥಳೀಯವಾಗಿ ಯಾವ ಜಾತಿಗೆ ಸೇರಿದ್ದು ? ಅದು ವಿಷಕಾರಿಯೇ ಎಂಬುದನ್ನು ತಿಳಿದುಕೊಳ್ಳಿ. ವಿಷಕಾರಿಯಾಗಿದ್ದಲ್ಲಿ ಮಾತ್ರ ನೀವು ಚಿಂತೆ ಮಾಡಬೇಕು. ಸಾಮಾನ್ಯವಾಗಿ ಇಟ್ಟಿಗೆ ರಾಶಿ, ಕಟ್ಟಿಗೆ ಕೂಡುವ ಜಾಗ ಮತ್ತು ಇತರೆ ವಸ್ತುಗಳ ರಾಶಿಯಲ್ಲಿ ಇವು ಮತ್ತು ಇವುಗಳ ಶಿಕಾರಿಯ ಪ್ರಾಣ ಗಳಿರುತ್ತವೆ.


2.    ಸಾಮಾನ್ಯವಾಗಿ ಹಾವುಗಳು ತಿರುಗಾಡುವ ಜಾಗಗಳಲ್ಲಿ ಗಿಡಗಂಟಿಗಳು, ಪೊದೆಗಳಿರದಂತೆ ನಿಗಾವಹಿಸಬೇಕು. ಹೀಗೇ ಜಾಗವನ್ನು ಸ್ವಚ್ಚವಾಗಿಡುವುದರಿಂದ ಒಂದು ವೇಳೆ ಹಾವುಗಳು ಮನೆ ಸಮೀಪ ಬಂದರೂ ಸ್ಪಷ್ಟವಾಗಿ ತಿಳಿಯುತ್ತದೆ.
3.    ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಲಿ ಹೆಗ್ಗಣಗಳು ಸೇರಿದಂತೆ ಹಾವುಗಳಿಗೆ ಆಹಾರವಾಗುವ ಪ್ರಾಣ ಗಳು ವಾಸವಾಗಿರದಂತೆ ನೋಡಿಕೊಳ್ಳಿ.
4.    ನೆಲದ ಮೇಲೆ ಮಲಗುವ ಬದಲು ಮಂಚಗಳನ್ನು ಬಳಸಿ.
5.    ಕಸಕಡ್ಡಿಗಳು, ಹುಲ್ಲು ರಾಶಿ, ಮರದ ನಾಟಗಳು, ಕಟ್ಟಡ ಸಾಮಾಗ್ರಿಗಳ ಒಳಗೆ ಕೈಗಳನ್ನು ಹಾಕುವುದನ್ನು ನಿಯಂತ್ರಿಸಿ ಅಥವಾ ಜಾಗ್ರತೆ ವಹಿಸಿ.
6.    ರಾತ್ರಿ ವೇಳೆ ತಿರುಗಾಡುವಾಗ ಟಾರ್ಚ್‍ಗಳನ್ನು ಉಪಯೋಗಿಸಿ.
7.    ಯಾವಾಗಲೂ ಪಾದರಕ್ಷೆಗಳನ್ನು ಬಳಸಿ (ಶೂಗಳು ಒಳ್ಳೆಯದು)
8.    ಕಾಲಿಡುವಾಗ ನೋಡಿ ಕಾಲಿಡಿ.

ನೀವು ಹಾವನ್ನು ನೋಡಿದರೆ ಏನು ಮಾಡಬೇಕು ?

1.    ಹಾವು ತನ್ನಷ್ಟಕ್ದೇ ತಾನೇ ಹೊರ ಹೋಗುವಲ್ಲಿ ದಾರಿ ಸುಗಮಗೊಳಿಸಿಕೊಡಿ. ಒಂದು ವೇಳೆ ಅದು ಅಲ್ಲೇ ಟಿಕಾಣ  ಹೂಡಿದಲ್ಲಿ ನಾವು ಬರುವವರೆಗೆ ಅದಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ.
2.    ಹಾವನ್ನು ಕೊಲ್ಲುವ ಪ್ರಯತ್ನ ಮಾಡಬೇಡಿರಿ.ಅದು ನಿಮ್ಮನ್ನು ಕಡಿಯುವ ಅಪಾಯವಿರುತ್ತದೆ.
3.    ಒಂದು ವೇಳೆ ದನದ ಕೊಟ್ಟಿಗೆಯಲ್ಲಿ ಹಾವು ಅವಿತಿದ್ದರೆ ನಿಮ್ಮ ಸಾಕು ಪ್ರಾಣ ಗಳು (ನಾಯಿ ಬೆಕ್ಕು) ಜಾನುವಾರುಗಳನ್ನು     ಹಾವಿನಿಂದ ದೂರವಿರಿಸಿ.
4.    ನಮ್ಮನ್ನಾಗಲಿ, ಅರಣ್ಯ ಇಲಾಖೆಯವರನ್ನಾಗಲಿ ಸಂಪರ್ಕಿಸಿ.

ವಿಶೇಷ ಸಂದರ್ಭ : ಕಾಳಿಂಗ ಸರ್ಪಗಳು
ಪತ್ತೆ ಹಚ್ಚುವ ವಿಧಾನಗಳು :    ಗಂಡು ಕಾಳಿಂಗ ಸರ್ಪ ಯಾವಾಗಲೂ ಹೆಣ ್ಣಗಿಂತ ದೊಡ್ಡದಾಗಿರುತ್ತದೆ. ತಲೆಯಿಂದ ಕೆಳಗೆ 3/4 ರಷ್ಟು ದೇಹ ಆಲೀವ್, ಕಂದು, ಹಸಿರು ಬಣ್ಣದಲ್ಲಿರುತ್ತದೆ. 1/4 ಬಾಲದ ಭಾಗ ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿರುತ್ತದೆ. 
ಹೆಣ್ಣು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ ಮತ್ತು ಸಪೂರವಾಗಿರುತ್ತದೆ. ಒಂದೋ ಕಂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಶುಭ್ರ ಹಳದಿ ಮತ್ತು ಬಿಳಿ ಪಟ್ಟೆಗಳಿರುತ್ತವೆ.

ಸೂಚನೆ : ಸಂತಾನೋತ್ಪತ್ತಿ ಸಂದರ್ಭದಲ್ಲಿ ಗಂಡು ಕಾಳಿಂಗ ನಿಮಗೆ ಗೋಚರವಾಯಿತೆಂದರೆ, ಅದು ಹೆಣ್ಣು ಕಾಳಿಂಗವನ್ನು ಹಿಂಬಾಲಿಸಿ ಬಂದಿದೆಯೆಂದೇ ಅರ್ಥ. ಆದ್ದರಿಂದ ಇದನ್ನು ರಕ್ಷಿಸಲು ಅಥವಾ ಸೆರೆ ಹಿಡಿಯಲು ಬಹಳ ಅವಸರ ಮಾಡಬೇಡಿ. ಏಕೆಂದರೆ, ಸನಿಹದಲ್ಲೇ ಅಲ್ಲೇ ಎಲ್ಲೋ ಹೆಣ್ಣು ಕಾಳಿಂಗ ಖಂಡಿತಾ ಅವಿತಿರುತ್ತದೆ. ಒಂದು ವೇಳೆ ಹೆಣ್ಣು ಕಾಳಿಂಗ ಕಾಣದಿದ್ದರೆ, ಹೆಣ ್ಣಗಾಗಿ ಸ್ಪರ್ಧೆಯಲ್ಲಿರುವ ಮತ್ತೆ 3 ರಿಂದ 4 ಕಾಳಿಂಗಗಳು ಅದೇ ಜಾಗಕ್ಕೆ ಬರುವ ಸಂದರ್ಭಗಳಿರುತ್ತದೆ.

ಆದ್ದರಿಂದ ದಯಮಾಡಿ ನಮ್ಮನ್ನು ಸ್ಥಳಕ್ಕೆ ಕರೆದಲ್ಲಿ ನಾವು ತಾಳ್ಮೆಯಿಂದ ಕಾದು, ಪರಿಶೀಲಿಸಿ, ಹೆಣ್ಣು ಕಾಳಿಂಗವನ್ನು ಹುಡುಕುವಲ್ಲಿ ನಿಮಗೆ ಸಹಾಯ ಮಾಡುತ್ತೇವೆ.

ನೀವು ಹೇಗೆ ಸಹಾಯ ಮಾಡಬಹುದು ?
ನಿಮ್ಮ ಫೋನ್ ಕರೆ ನಮಗೆ ಬಹಳ ಮುಖ್ಯ. ನಾವು ಬಂದ ಮೇಲೆ ಹಾವು ಹಾಗೂ ನಿಮ್ಮ ರಕ್ಷಣೆಯ ಭರವಸೆಯೊಂದಿಗೆ ಜವಾಬ್ದಾರಿ ನಿರ್ವಹಿಸುತ್ತೇವೆ. ಅಲ್ಲಿ ನಾವು ಸಂಗ್ರಹಿಸಿದ ಅಂಕಿ-ಅಂಶಗಳನ್ನು ಕಾಳಿಂಗ ಸರ್ಪಗಳ ನಮ್ಮ ಸಂಶೋಧನೆಯಲ್ಲಿ ಬಳಸಿಕೊಳ್ಳುತ್ತೇವೆ. ನಿಮ್ಮೆಲ್ಲರ ಸಹಕಾರದಿಂದ ಕಾಳಿಂಗ ಸರ್ಪಗಳ ನಿಗೂಢ ಜೀವನ ವಿಧಾನವನ್ನು ತಿಳಿದುಕೊಳ್ಳುವ 


ಕಾಳಿಂಗ ಸರ್ಪವನ್ನು ಸಂರಕ್ಷಿಸುತ್ತಿರುವ ಗೌರಿ ಶಂಕರ್.

 

ಜೊತೆಗೆ ಇವುಗಳ ಸಂರಕ್ಷಣೆಯಲ್ಲೂ ಇದು ನೆರವಾಗಲಿದೆ. ನಾವು ಅರಣ್ಯ ಇಲಾಖೆಯನ್ನು ಗೌರವಿಸುತ್ತಾ, ಅವರೊಂದಿಗೆ ಕೈಜೋಡಿಸಿ ನಮ್ಮ ಎಲ್ಲಾ ಯೋಜನೆಗಳನ್ನು ರೂಪಿಸುತ್ತಿದ್ದೇವೆ. 

ನೀವು ಯಾವುದಾದರೂ ವಿಷಪೂರಿತ ಹಾವನ್ನು ಕಂಡರೆ (ಅದರಲ್ಲೂ ಕಾಳಿಂಗ ಸರ್ಪ) ಈ ಕೆಳಗಿನ ಫೋನ್ ನಂಬರ್‍ಗಳನ್ನು ಸಂಪರ್ಕಿಸಿ.
ಗೌರಿಶಂಕರ್ : 09448156804, ಪ್ರಶಾಂತ್ : 09448112060, ಕಾಳಿಂಗ ಪೌಂಡೇಷನ್ : 08181-257010

ನಮ್ಮ ಕುರಿತಾಗಿ :
ಕಾಳಿಂಗ ಪೌಂಡೇಷನ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು , ಗುಡ್ಡೇಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಪರಿಸರ ಸಂಶೋಧನೆಯಲ್ಲಿ ತೊಡಗಿದ್ದು ತನ್ಮೂಲಕ ಸಂರಕ್ಷಣೆಯಲ್ಲಿ ಸಕಾರಾತ್ಮಕ ಬದಲಾವಣೆ ತರುವುದು ನಮ್ಮ ಉದ್ದೇಶವಾಗಿದೆ.

ಗುರಿಗಳು :
*    ಸಂಶೋಧನೆ ಮತ್ತು ಪರಿಸರ ಶಿಕ್ಷಣದ ಮೂಲಕ ಸಂರಕ್ಷಣೆಗೆ ಒತ್ತು.
*    ವೈಜ್ಞಾನಿಕ ಸಮುದಾಯದಿಂದ ಸಲಹೆ ಸಹಕಾರ.
*    ಪರಿಸರ ಸ್ನೇಹಿ ಸಂಸ್ಥೆಗಳ ಜಾಲದ ಮಖೇನ - ಉದ್ಯಮ,ಸಂಶೋಧನಾ ಕೇಂದ್ರಗಳು, ಶಾಲೆಗಳು, ಕಾಲೇಜುಗಳು, ಸರ್ಕಾರೇತರ 
    ಸಂಸ್ಥೆಗಳು ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು.
*    ಸಮುದಾಯದ ಪಾಲ್ಗೊಳ್ಳುವಿಕೆ.
*    ಇಂಟರ್ನ್ ಶಿಪ್ ಅವಕಾಶಗಳ ನಿರ್ಮಾಣ.

ಹೆಚ್ಚಿನ ಮಾಹಿತಿಗಳಿಗಾಗಿ ಕಾಳಿಂಗ ಸರ್ಪ ಗುಣಲಕ್ಷಣಗಳ ಯೋಜನೆಗೆ ಸಂಪರ್ಕಿಸಿ :  [email protected].
Ph : 09448156804, 09448112060, 08181 - 257010, Kalinga Mane, Agumbe Hobali, Guddekeri, Thirthahalli, Shivamogga - 577411.

 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...