ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಯೋಗಿ ಆಧಿತ್ಯನಾತ್ ಏನು ಹೇಳುತ್ತಾರೆ? ಇದನ್ನು ಓದಿ

Source: sonews | By sub editor | Published on 25th June 2018, 10:37 PM | National News | Don't Miss |

ಲಕ್ನೋ: ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಸಂತರ ಸಮ್ಮೇಳದನಲ್ಲಿ ಹೇಳಿದ್ದು ಕಂಡರೆ ಯಾಕೋ ಅವರಿಗೆ ಈ ಲೋಕಸಭಾ ಚುನಾವಣೆಯ ನಂತರವೂ ರಾಮಮಂದಿರ ನಿರ್ಮಾಣ ಕಷ್ಟಸಾಧ್ಯವೆಸಿರಬಹುದು. ಆದ್ದರಿಂದಲೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ತಾಳ್ಮೆ ವಹಿಸಬೇಕು ಎಂದು ಹಿಂದೂ ಸಂತರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿನಂತಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆದ ಸಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, "ನಾವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನ್ಯಾಯಾಂಗ, ಕಾರ್ಯಾಂಗ ಹಾಗು ಶಾಸಕಾಂಗಕ್ಕೆ ಅದರದ್ದೇ ಆದ ಪಾತ್ರಗಳಿವೆ. ಇವುಗಳೆನ್ನೆಲ್ಲಾ ನಾವು ಗಮನದಲ್ಲಿರಿಸಬೇಕು" ಎಂದವರು ಹೇಳಿದರು.

"ಮರ್ಯಾದಾ ಪುರುಷೋತ್ತಮ ರಾಮನ ದಯೆ ಇರುವಾಗ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ.... ಆದರೆ ಸಂತರಲ್ಲಿ ಈ ಬಗ್ಗೆ ಸಂಶಯ ಯಾಕೆ? ನೀವು ಇದುವರೆಗೂ ತಾಳ್ಮೆಯಿಂದಿದ್ದೀರಿ. ಕೆಲ ಕಾಲದವರೆಗೂ ಇದೇ ತಾಳ್ಮೆಯನ್ನು ನೀವು ಮುಂದುವರಿಸಬೇಕು ಎಂದು ನನಗನಿಸುತ್ತದೆ" ಎಂದವರು ಹೇಳಿದರು.

Read These Next

ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ

ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...